ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಗುಪ್ತಚರ ಸಂಸ್ಥೆಯ ವೈಫಲ್ಯ ಸಹಿಸಲಾಗದು: ಒಬಾಮಾ ಕಿಡಿ (Washington | Barack Obama | Detroit | Christmas Day | Nigeria)
Bookmark and Share Feedback Print
 
ಕ್ರಿಸ್‌ಮಸ್ ದಿನಾಚರಣೆಯಂದೇ ಭಯೋತ್ಪಾದನೆ ನಡೆಸಲು ಸಂಚು ರೂಪಿಸಿದ್ದ ನೈಜೀರಿಯಾದ ಉಗ್ರನನ್ನು ಬಂಧಿಸಿರುವ ಘಟನೆ ನಂತರ ದೇಶದಲ್ಲಿ ಭದ್ರತೆಯ ಲೋಪದ ಕುರಿತು ಅಧ್ಯಕ್ಷ ಬರಾಕ್ ಒಬಾಮಾ ಗರಂ ಆಗಿದ್ದಾರೆ. ಅಲ್ಲದೇ ಗುಪ್ತಚರ ಸಂಸ್ಥೆಗಳ ವಿರುದ್ಧ ಕಿಡಿಕಾರಿದ್ದಾರೆ.

ಭಯೋತ್ಪಾದನೆ ಚಟುವಟಿಕೆಯ ಕುರಿತು ಮುನ್ಸೂಚನೆ ನೀಡಲು ಗುಪ್ತಚರ ಸಂಸ್ಥೆಗಳು ವಿಫಲವಾಗಿರುವುದಾಗಿ ಆರೋಪಿಸಿದರು. ಉಗ್ರರು ನಡೆಸಲು ಉದ್ದೇಶಿಸಿದ್ದ ಕೃತ್ಯವನ್ನು ಮೊದಲೇ ಕಂಡುಹಿಡಿಯುವ ಸಾಮರ್ಥ್ಯವನ್ನು ಸರ್ಕಾರ ಹೊಂದಿದ್ದಾಗಲೂ ಕೂಡ ಇಂತಹ ಘಟನೆ ನಡೆದಿರುವುದು ಅಚ್ಚರಿ ಮೂಡಿಸಿದೆ ಎಂದಿದ್ದಾರೆ.

ಗುಪ್ತಚರ ಸಂಸ್ಥೆಗಳ ಈ ವೈಫಲ್ಯವನ್ನು ಸಹಿಸಲಾಗದು, ಇದು ಸ್ವೀಕಾರಾರ್ಹ ಕೂಡ ಅಲ್ಲ ಎಂದು ಕಿಡಿಕಾರಿರುವ ಒಬಾಮಾ ಅವರು ದೇಶದ ಭದ್ರತೆಯ ಕುರಿತು ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ಭಯೋತ್ಪಾದನಾ ದಾಳಿ ನಡೆದ ನಂತರ ಅಮೆರಿಕದಲ್ಲಿ ಕಟ್ಟು ನಿಟ್ಟಿನ ಭದ್ರತೆಯ ಕ್ರಮ ಕೈಗೊಳ್ಳಲಾಗಿತ್ತು. ಅಲ್ ಖಾಯಿದಾ, ತಾಲಿಬಾನ್‌ನಂತಹ ಉಗ್ರಗಾಮಿ ಸಂಘಟನೆಗಳು ದಾಳಿ ನಡೆಸುವುದಾಗಿ ಬೆದರಿಕೆ ಹಾಕುತ್ತಿದ್ದರು ಕೂಡ ಯಾವುದೇ ದಾಳಿ ನಡೆಸಲು ಸಾಧ್ಯವಾಗಿಲ್ಲವಾಗಿತ್ತು. ಏತನ್ಮಧ್ಯೆ ಕಳೆದ ಡಿಸೆಂಬರ್ ತಿಂಗಳಿನಲ್ಲಿ ವಿಮಾನ ಸ್ಫೋಟಿಸಲು ಸಂಚು ನಡೆಸಿ ನೈಜೀರಿಯಾದ ಉಗ್ರನೊಬ್ಬ ಸೆರೆ ಸಿಕ್ಕಿದ್ದ. ಈ ಘಟನೆಯನ್ನು ಮುಂಚಿತವಾಗಿಯೇ ಗ್ರಹಿಸುವಲ್ಲಿ ಗುಪ್ತಚರ ಇಲಾಖೆ ವೈಫಲ್ಯವಾಗಿದ್ದಕ್ಕೆ ಒಬಾಮಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ