ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವಿಶ್ವದ ಅತೀ ಎತ್ತರದ ಹೊಟೇಲ್ ಖ್ಯಾತಿ ಕೂಡ ದುಬೈಗೆ (Rose Rayhaan | Dubai | World`s tallest hotel | Guinness Book)
Bookmark and Share Feedback Print
 
ಬುರ್ಜ್ ಖಾಲಿಫಾ ಉದ್ಘಾಟನೆಗೊಂಡ ಕೆಲವೇ ದಿನಗಳೊಳಗೆ ದುಬೈ ಮತ್ತೊಂದು ದಾಖಲೆಗೆ ಪಾತ್ರವಾಗಿದೆ. 72 ಮಹಡಿಗಳ ಹೊಟೇಲೊಂದು ಇಲ್ಲಿ ತಲೆಯೆತ್ತುವುದರೊಂದಿಗೆ, ಜಗತ್ತಿನ ಅತೀ ಎತ್ತರದ ಹೊಟೇಲ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ.

ವಿಶ್ವದ ಅತೀ ಎತ್ತರದ ಹೊಟೇಲ್ ಎಂದು ವಿಶ್ವದಾಖಲೆಯ ಗಿನ್ನಿಸ್ ಪುಸ್ತಕದಲ್ಲಿ ತನ್ನ ಹೆಸರನ್ನು ಬರೆಸಿಕೊಂಡು ಪ್ರಮಾಣಪತ್ರವನ್ನು ಪಡೆದಿರುವ ಈ ಹೊಟೇಲನ್ನು ಮುಂಚೂಣಿಯ ಹೊಟೇಲ್ ಮ್ಯಾನೇಜ್‌ಮೆಂಟ್ ಕಂಪನಿಯು ಉದ್ಘಾಟಿಸಿದೆ.

ರೊತಾನದಿಂದ ನಿರ್ಮಿತವಾಗಿರುವ ರೋಸ್ ರೇಹಾನ್ ಎಂಬ ಈ ಹೊಟೇಲ್ 72 ಮಹಡಿಗಳನ್ನು ಒಳಗೊಂಡಿದ್ದು, 333 ಮೀಟರ್ ಎತ್ತರವಿದೆ. 482 ಕೊಠಡಿಗಳನ್ನೂ ಹೊಂದಿದೆ.

ವಿಶ್ವದ ಅತೀ ಎತ್ತರದ ಕಟ್ಟಡವೆಂಬ ದಾಖಲೆಗೆ (800 ಮೀಟರ್) ಪಾತ್ರವಾಗಿದ್ದ 'ಬುರ್ಜ್ ದುಬೈ' ಉದ್ಘಾಟನೆಗೊಂಡು 'ಬುರ್ಜ್ ಖಾಲಿಪಾ' ಎಂದು ಮರುನಾಮಕರಣಗೊಂಡ ಎರಡೇ ದಿನದೊಳಗೆ ಈ ಹೊಟೇಲ್ ಕೂಡ ಉದ್ಘಾಟನೆಗೊಳ್ಳುವುದರೊಂದಿಗೆ ದುಬೈ ವಿಶ್ವದ ಗಮನವನ್ನು ಸೆಳೆದಿದೆ.

2004ರಲ್ಲಿ ರೋಸ್ ರೆಹಾನ್ ಹೊಟೇಲನ್ನು ಕಟ್ಟಲು ಆರಂಭಿಸಲಾಗಿತ್ತು. ನಿರ್ಮಾಣ ಕಾಮಗಾರಿ ಆರಂಭಿಸುವ ಹೊತ್ತಿನಲ್ಲಿ 380 ಮೀಟರುಗಳಷ್ಟು ಎತ್ತರ ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದರೂ ಬಳಿಕ ಅದನ್ನು 333 ಮೀಟರುಗಳಿಗೆ ಸೀಮಿತಗೊಳಿಸಲಾಗಿತ್ತು.

ಇದರೊಂದಿಗೆ 'ಬುರ್ಜ್ ಅಲ್ ಅರಬ್' ಎಂಬ 321 ಮೀಟರ್ ಎತ್ತರದ ಹೊಟೇಲ್ ಮತ್ತು ನಿರ್ಮಾಣ ಹಂತದಲ್ಲಿರುವ 330 ಮೀಟರ್ ಎತ್ತರದ ಉತ್ತರ ಕೊರಿಯಾದಲ್ಲಿನ ರಿಗ್ಯಾಂಗ್ ಹೊಟೇಲ್ ದಾಖಲೆಯನ್ನು ರೋಸ್ ರೆಹಾನ್ ಮೀರಿ ನಿಂತಿದೆ.
ಸಂಬಂಧಿತ ಮಾಹಿತಿ ಹುಡುಕಿ