ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಆಸ್ಟ್ರೇಲಿಯಾದಲ್ಲಿ ಮಾಡೆಲ್ ಅತ್ಯಾಚಾರ ಮಾಡಿದ ಭಾರತೀಯ (India | Australia | James Carter | Paul Rajendran)
Bookmark and Share Feedback Print
 
ತಾನು ಫ್ಯಾಷನ್ ಲೋಕದಲ್ಲಿ ಹೆಸರು ಮಾಡಿದವನೆಂದು ಹೇಳಿಕೊಂಡು ಯುವತಿಯ ಸ್ನೇಹ ಗಿಟ್ಟಿಸಿಕೊಂಡಿದ್ದ ಭಾರತೀಯ ಮೂಲದ ವ್ಯಕ್ತಿಯೊಬ್ಬ ನಂತರ ಆಕೆಯನ್ನು ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಒಳ ಉಡುಪುಗಳ ಉದಯೋನ್ಮುಖ ಮಾಡೆಲ್ ಒಬ್ಬಳನ್ನು 'ಮೈ ಸ್ಪೇಸ್' ಸಾಮಾಜಿಕ ಸಂಪರ್ಕ ತಾಣದಲ್ಲಿ 'ಜೇಮ್ಸ್ ಕಾರ್ಟರ್' ಎಂಬ ನಕಲಿ ಹೆಸರಿನಿಂದ ಪರಿಚಯಿಸಿಕೊಂಡಿದ್ದ ಪೌಲ್ ರಾಜೇಂದ್ರನ್ ಎಂಬಾತ ಕಳೆದ ವರ್ಷದ ಮಾರ್ಚ್ ಆರಂಭದಲ್ಲಿ ಪರಿಚಯಿಸಿಕೊಂಡಿದ್ದ ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿಯಲ್ಲಿ ಹೇಳಿದೆ.

ತಾನು ಒಳ ಉಡುಪುಗಳ ಸಂಸ್ಥೆ 'ಲಾ ಪೆರ್ಲಾ'ದಲ್ಲಿ ಕೆಲಸ ಮಾಡುತ್ತಿದ್ದು, ಈ ಕ್ಷೇತ್ರದ ಪ್ರಖ್ಯಾತ ನಿರ್ದೇಶಕ ಎಂದು ಸುಳ್ಳು ಹೇಳಿ 23ರ ಹರೆಯದ ಯುವತಿಯೊಂದಿಗೆ ರಾಜೇಂದ್ರನ್ ನಿಕಟವಾಗತೊಡಗಿದ್ದ. ಈ ಸಂದರ್ಭದಲ್ಲಿ ಇವರಿಬ್ಬರು ಇ-ಮೇಲ್ ಮೂಲಕ ಹಲವು ಸಂವಾದಗಳನ್ನು ನಡೆಸಿದ್ದರು. ಬಳಿಕ ಸಿಡ್ನಿ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್‌ನಲ್ಲಿ ಭೇಟಿಯಾಗಿದ್ದರು ಎಂದು ವರದಿ ವಿವರಣೆ ನೀಡಿದೆ.

ಹೀಗೆ ತುಂಬಾ ಸಲ ಭೇಟಿಯಾಗುತ್ತಿದ್ದ ಜೋಡಿ ಒಂದು ಬಾರಿ ಇಲ್ಲಿನ ಟ್ಯಾಂಕ್ ಸ್ಟ್ರೀಮ್ ಬಾರ್‌ನಲ್ಲಿ ಮಾದಕ ಪೇಯಗಳನ್ನು ಸಂಜೆ ಸುಮಾರು 7.30ರ ಹೊತ್ತಿಗೆ ಸೇವಿಸಿದ್ದರು. ಇದೇ ಸಂದರ್ಭದಲ್ಲಿ ಕಂಪನಿಯಲ್ಲಿ ತಾನು ಮಾಡೆಲಿಂಗ್ ಮಾಡುವ ಬಗ್ಗೆ ಚರ್ಚೆಯನ್ನೂ ಅವರು ನಡೆಸಿದ್ದರು ಎಂದು ಪ್ರಾಸಿಕ್ಯೂಟರ್ ಎರಿಕ್ ಬಾಲೋಡೀಸ್ ಸಿಡ್ನಿಯಲ್ಲಿ ರಾಜೇಂದ್ರನ್ ವಿಚಾರಣೆ ಸಂದರ್ಭದಲ್ಲಿ ಹೇಳಿದ್ದಾರೆ.

ಇದಾದ ಸ್ವಲ್ಪವೇ ಹೊತ್ತಿನಲ್ಲಿ ರಾಜೇಂದ್ರನ್ ಬಲಿಪಶು ಯುವತಿಯನ್ನು ಹಂಟರ್ ಸ್ಟ್ರೀಟ್‌ನಲ್ಲಿನ ಕಚೇರಿಯೊಂದಕ್ಕೆ ಕರೆದೊಯ್ದ. ಅಲ್ಲಿ ಆಕೆಯನ್ನು ಅತ್ಯಾಚಾರ ಮಾಡುವ ಮೊದಲು ಆತ, 'ಲಾ ಪೆರ್ಲಾ'ದ ವೆಬ್‌ಸೈಟಿನಲ್ಲಿ ಪ್ರಕಟವಾಗಿದ್ದ ಕೆಲವು ಚಿತ್ರಗಳನ್ನು ಹರವಿದ್ದ.

ಆಕೆ ಕುರ್ಚಿಯೊಂದರಲ್ಲಿ ಕುಳಿತುಕೊಂಡಿದ್ದಾಗ ಆರೋಪಿ ಹತ್ತಿರ ಬಂದು ಆಕೆಯನ್ನು ಮುದ್ದಿಸಿದ. ಆಗ ಯುವತಿ, ತಾನು ಇದಕ್ಕಾಗಿ ಇಲ್ಲಿಗೆ ಬಂದಿಲ್ಲ ಎಂದು ಕಿರುಚಿದ್ದಳು ಎಂದು ಪ್ರಾಸಿಕ್ಯೂಟರ್ ನ್ಯಾಯಾಲಯದಲ್ಲಿ ವಾದಿಸಿದ್ದಾರೆ.

ಈ ಹಂತದಲ್ಲಿ ಅವಳು ಪಾನಮತ್ತಳಾಗಿದ್ದರಿಂದ ತೀರಾ ಸಂಯಮ ತಪ್ಪಿದ್ದಳು ಮತ್ತು ಭಯದಿಂದ ಕಿರುಚುತ್ತಿದ್ದಳು. ನಂತರ ರಾಜೇಂದ್ರನ್ ಆಕೆಯನ್ನು ಅತ್ಯಾಚಾರ ನಡೆಸಿದ. ಅಲ್ಲದೆ, ಇದನ್ನು ಯಾರಲ್ಲೂ ಹೇಳದಿದ್ದರೆ ನಿನ್ನನ್ನು ಶ್ರೇಷ್ಠ ಮಾಡೆಲ್ ಮಾಡುತ್ತೇನೆ ಎಂದು ಆಮಿಷವನ್ನೂ ಒಡ್ಡಿದ್ದ ಎಂದು ಬಾಲೊಡೀಸ್ ಕೋರ್ಟಿಗೆ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ