ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕೋಣನ ವಯಸ್ಸಾದ್ರೂ ಹುಡುಗ್ರು ತಮ್ಮ ಚೇಷ್ಟೆ ಬಿಡಲ್ಲ..! (Boy | become men | immature antics | boyish behaviour)
Bookmark and Share Feedback Print
 
'ಕತ್ತೆಯಷ್ಟು ವಯಸ್ಸಾದರೂ ನಿನಗೆ ಬುದ್ಧಿ ಬಂದಿಲ್ಲ... ನಿಂದೇ ವಯಸ್ಸಿನ ಆಕೆಯನ್ನು ನೋಡಿ ಕಲಿತುಕೋ...' ಎಂದೆಲ್ಲ ಪಕ್ಕದ ಮನೆಯ ಹುಡುಗಿಯನ್ನು ಉದಾಹರಿಸಿ ಮನೆಯಲ್ಲಿ ಬೈಸಿಕೊಳ್ಳುವ ಹುಡುಗರು, ಇದು ತಮ್ಮ ತಪ್ಪಲ್ಲ ಎಂದು ಇನ್ನು ಸಮರ್ಥಿಸಿಕೊಳ್ಳಬಹುದು!

ಸಮಾನ ವಯಸ್ಸಿನ ಇಬ್ಬರು ಹುಡುಗ-ಹುಡುಗಿಯರು ಪ್ರಬುದ್ಧತೆಯಲ್ಲಿ ಹೊಂದಿರುವ ವ್ಯತ್ಯಾಸಗಳು ಸಂಶೋಧಕರಿಗೆ ಯಾವತ್ತೂ ಮುಗಿಯದಷ್ಟು ಉತ್ತರಗಳನ್ನು ನೀಡಿರುವ ವಿಷಯವೆಂಬುದು ಮತ್ತೊಮ್ಮೆ ಸಾಬೀತಾಗಿದ್ದು, ಹುಡುಗರಿಗಿಂತ ಹುಡುಗಿಯರೇ ಬಾಲಿಶ ವರ್ತನೆಗಳನ್ನು ಬೇಗನೆ ಕೈ ಬಿಡುತ್ತಾರೆ ಎಂದು ಹೇಳಿದೆ.
WD

ವಯಸ್ಸು ನೆತ್ತಿಗೆ ಬಂದರೂ ಯುವಕರು ತಮ್ಮ ಚೇಷ್ಟೆಗಳನ್ನು ಯಾಕೆ ಬಿಡುತ್ತಿಲ್ಲ ಎಂಬುದನ್ನು ಇತ್ತೀಚಿನ ಈ ಅಧ್ಯಯನ ಬಹಿರಂಗಪಡಿಸಿದೆ. ಅದರ ಪ್ರಕಾರ ಹುಡುಗರು ಪ್ರಬುದ್ಧರಾಗೋದು ಅಂದರೆ ತಮ್ಮ ಚೇಷ್ಟೆಗಳನ್ನು ಬಿಟ್ಟು ಜೀವನವನ್ನು ಗಂಭೀರವಾಗಿ ಪರಿಗಣಿಸುವುದು 27ರ ನಂತರವಂತೆ. ಅಲ್ಲದೆ ಅವರು ಪೂರ್ಣ ಪ್ರಮಾಣದಲ್ಲಿ ಪ್ರಬುದ್ಧರಾಗುವುದು 29ರ ಹೊತ್ತಿನಲ್ಲಿ.

ಪಾರ್ಟಿಗಳ ಹೆಸರಿನಲ್ಲಿ ಕುಡಿಯುವುದು, ಕೆಟ್ಟ ಚಟಗಳನ್ನು ಪ್ರಯೋಗಿಸಿ ನೋಡುವುದು ಮತ್ತು ಅವಕಾಶ ಸಿಕ್ಕಾಗಲೆಲ್ಲ ಬೇಲಿ ಹಾರುವುದು ಮುಂತಾದ ತಮ್ಮ ಅಸಾಮಾನ್ಯ ಹುಡುಕಾಟಿಕೆ ಬುದ್ಧಿಗಳನ್ನು ಬೇಗನೆ ಬಿಡಲಾರರು.

ಆದರೆ ಹುಡುಗಿಯರು ಹಾಗಲ್ಲ. 24ಕ್ಕೆಲ್ಲ ಪ್ರಬುದ್ಧತೆಯನ್ನು ರೂಢಿ ಮಾಡಿಕೊಳ್ಳುವ ಯುವತಿಯರು ವಯಸ್ಸು 26 ಆದಾಗ ಯಾರೂ ಊಹಿಸಲಾಗದಷ್ಟು ಪ್ರೌಢಿಮೆಯನ್ನು ಹೊಂದಿರುತ್ತಾರಂತೆ.

ಅಧ್ಯಯನಕಾರರ ಪ್ರಕಾರ ಹುಡುಗಿಯರು 25ನೇ ವಯಸ್ಸಿನಲ್ಲಿ ನೈಟ್‌ಕ್ಲಬ್‌ಗಳಿಗೆ ಹೋಗೋದು, ತಮ್ಮ ಆಕರ್ಷಕ ಅಂಗಾಂಗಗಳನ್ನು ಉದ್ದೇಶಪೂರ್ವಕವಾಗಿ ಆಕರ್ಷಿಸುವಂತೆ ಮಾಡುವುದು ಮತ್ತು ಸಿಕ್ಕಾಪಟ್ಟೆ ಮೇಕಪ್‌ಗಳಿಗೆ ಮೊರೆ ಹೋಗುವುದು ಮುಂತಾದ ಬಾಲಿಶ ವರ್ತನೆಗಳನ್ನು ತೊರೆಯುತ್ತಾರಂತೆ.

'ವನ್ ಪೋಲ್' ಎಂಬ ಸಂಸ್ಥೆ ನಡೆಸಿರುವ ಅಧ್ಯಯನವನ್ನು 'ಡೈಲೀ ಸ್ಟಾರ್' ಎಂಬ ಬ್ರಿಟೀಶ್ ಪತ್ರಿಕೆ ವರದಿ ಮಾಡಿದೆ.

ಹುಡುಗರು ಹುಡುಗಿಯರಂತೆ ಕ್ಷಿಪ್ರ ಬೆಳವಣಿಗೆ ಹೊಂದುವುದು ಅಸಾಧ್ಯ ಎಂಬುದನ್ನು ಈ ಸಂಶೋಧನೆ ಸಾಬೀತುಪಡಿಸಿದೆ. ಅವರಲ್ಲಿ ಬಹುಕಾಲ ಬಾಲಿಶ ವರ್ತನೆಗಳು ಮುಂದುವರಿಯುತ್ತವೆ ಎಂದು 'ವನ್ ಪೋಲ್' ವಕ್ತಾರರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ