ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್ ಪ್ರಧಾನಿ ಗಿಲಾನಿ ಅಮೆರಿಕ ಪರವಾಗಿದ್ದಾರೆ: ಮೆಕೈನ್ (Pakistan | Asif Ali Zardari | Yousuf Raza Gilani | America)
Bookmark and Share Feedback Print
 
ಪಾಕಿಸ್ತಾನ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಅಸ್ಥಿರತೆ ಮನೋಭಾವದಲ್ಲಿದ್ದರೆ, ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಅಮೆರಿಕ ಪರವಾಗಿದ್ದಾರೆ. ಅದೇ ರೀತಿ ಆರ್ಮಿ ವರಿಷ್ಠ ಅಶ್ಫಾಕ್ ಪರ್ವೇಜ್ ಕಯಾನಿ ಅವರು ಉಗ್ರರ ದಮನದ ವಿರುದ್ಧ ತುಂಬಾ ಉತ್ತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅಮೆರಿಕದ ಹಿರಿಯ ಸೆನೆಟರ್ ಜಾನ್ ಮೆಕೈನ್ ತಿಳಿಸಿದ್ದಾರೆ.

ಪಾಕಿಸ್ತಾನ ತುಂಬಾ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಅದರಲ್ಲೂ ಪ್ರಧಾನಿ ಗಿಲಾನಿ ಯಾವತ್ತಿಗೂ ಅಮೆರಿಕದ ಪರವಾಗಿಯೇ ಇದ್ದಾರೆ. ಆದರೆ ಅಧ್ಯಕ್ಷ ಜರ್ದಾರಿ ದ್ವಂದ್ವ ನಿಲುವು ಹೊಂದುವ ಮೂಲಕ ಎಡಬಿಡಂಗಿಯಂತಾಗಿದ್ದಾರೆ ಎಂದು ಫೋಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನ ಮಿಲಿಟರಿ ಮುಖ್ಯಸ್ಥರಾಗಿರುವ ಕಯಾನಿ ಅವರು ನಮ್ಮ ಮಿಲಿಟರಿ ಅಡ್ಮಿರಲ್ ಮುಲ್ಲೆನ್ ಮತ್ತು ಜನರಲ್ ಡೇವಿಡ್ ಪೀಟರ್ಸ್ ಅವರ ಜೊತೆ ಉತ್ತಮ ಸಂಬಂಧ ಹೊಂದಿದ್ದು, ಪಾಕಿಸ್ತಾನ ಮಿಲಿಟರಿ ಚೆನ್ನಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ಹೇಳಿದರು.

ದಕ್ಷಿಣ ವಜಿರಿಸ್ತಾನದಲ್ಲಿನ ಉಗ್ರರನ್ನು ಮಟ್ಟಹಾಕುವಲ್ಲಿ ಪಾಕಿಸ್ತಾನ ಮಿಲಿಟರಿ ತನ್ನ ಶಕ್ತಿ ಮೀರಿ ಕಾರ್ಯನಿರ್ವಹಿಸುತ್ತಿರುವುದಾಗಿ ಶಹಬ್ಬಾಸ್ ಗಿರಿ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ