ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಚೀನಾ: ಸುಪ್ರೀಂ ನಿವೃತ್ತ ನ್ಯಾಯಾಧೀಶನಿಗೆ ಜೀವಾವಧಿ ಶಿಕ್ಷೆ (China Supreme Court | bribe | BEIJING | Huang Songyou)
Bookmark and Share Feedback Print
 
ಹಣವನ್ನು ದುರುಪಯೋಗಪಡಿಸಿಕೊಂಡ ಮತ್ತು ಅರ್ಧಕ್ಕೂ ಹೆಚ್ಚು ಮಿಲಿಯನ್ ಡಾಲರ್ ಲಂಚ ಸ್ವೀಕರಿಸಿದ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಚೀನಾ ಸುಪ್ರೀಂಕೋರ್ಟ್ ಮಾಜಿ ನ್ಯಾಯಾಧೀಶರೊಬ್ಬರಿಗೆ ಇಲ್ಲಿನ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.

ಒಂದು ಬಾರಿ ಕೋರ್ಟ್‌ನ ಉಪಾಧ್ಯಕ್ಷ ಹುದ್ದೆಯನ್ನು ಅಲಂಕರಿಸಿರುವ ಹುವಾನ್ ಸೋಗೈಯೂ ಮೊದಲ ಬಾರಿ ಭ್ರಷ್ಟಚಾರದ ಆರೋಪದ ಮೇಲೆ ಶಿಕ್ಷೆ ಅನುಭವಿಸಿದ ಮಾಜಿ ನ್ಯಾಯಾಧೀಶರಾಗಿದ್ದಾರೆ.

ಚೀನಾ ಸುಪ್ರೀಂಕೋರ್ಟ್‌ನ ಸರ್ವೋಚ್ಚ ನ್ಯಾಯಾಂಗ ತನಿಖಾ ಸಮಿತಿ, ಹುವಾನ್ ಭ್ರಷ್ಟಾಚಾರ ಆರೋಪದ ಕುರಿತು ತನಿಖೆ ನಡೆಸಿತ್ತು. 2005 ಮತ್ತು 2008ರ ನಡುವೆ ಒಂದು ಪ್ರಕರಣದ ಪರವಾಗಿ ತೀರ್ಪು ನೀಡುವ ಹಿನ್ನೆಲೆಯಲ್ಲಿ ಹುವಾನ್ ಸುಮಾರು 3.9ಮಿಲಿಯನ್ ಯುವಾನ್(574,000ಡಾಲರ್)‌ನಷ್ಟು ಭಾರೀ ಮೊತ್ತದ ಲಂಚ ಸ್ವೀಕರಿಸಿದ್ದ ಆರೋಪಕ್ಕೆ ಗುರಿಯಾಗಿದ್ದರು.

ಅಲ್ಲದೇ 1997ರಲ್ಲಿ ದಕ್ಷಿಣ ಪ್ರಾಂತೀಯ ಗುವಾಂಗ್‌ಡೋಂಗ್‌ ನಗರ ವ್ಯಾಪ್ತಿ ಕೋರ್ಟ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ವೇಳೆಯಲ್ಲಿ ಸರ್ಕಾರದಿಂದ ಬಿಡುಗಡೆಯಾಗಿದ್ದ 1.2ಮಿಲಿಯನ್ ಯುವಾನ್(176,000ಡಾಲರ್)‌ನಷ್ಟು ಫಂಡ್ ಅನ್ನು ತಮ್ಮ ಸ್ವಂತಕ್ಕೆ ಬಳಸಿಕೊಂಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ