ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನೈಜೀರಿಯಾದಲ್ಲಿ ಮತ್ತೆ ಭುಗಿಲೆದ್ದ ಕೋಮು ಹಿಂಸಾಚಾರ (Muslim | Nigeria | Christian | Religious violence | mosque)
Bookmark and Share Feedback Print
 
ಉತ್ತರ ನೈಜೀರಿಯಾದಲ್ಲಿ ಮತ್ತೆ ಕ್ರಿಶ್ಚಿಯನ್ ಮತ್ತು ಮುಸ್ಲಿಮರ ನಡುವೆ ಕೋಮು ಹಿಂಸಾಚಾರ ಭುಗಿಲೆದ್ದಿರುವುದಾಗಿ ಅಧಿಕಾರಿಗಳು ತಿಳಿಸಿದ್ದು, ಕಳೆದ ವಾರ ನಡೆದ ಹಿಂಸಾಚಾರದಲ್ಲಿ 27ಮಂದಿ ಬಲಿಯಾಗಿದ್ದರು.

ಕೋಮು ಹಿಂಸಾಚಾರವನ್ನು ತಡೆಯುವ ಹಿನ್ನೆಲೆಯಲ್ಲಿ ಪೊಲೀಸ್ ಮತ್ತು ಸೈನಿಕರು ವಿಫಲರಾಗಿರುವ ನಿಟ್ಟಿನಲ್ಲಿ ಯಾರೊಬ್ಬರು ಮನೆಯಿಂದ ಹೊರ ಬಾರದಂತೆ ಭದ್ರತಾ ಪಡೆ ಅಧಿಕಾರಿಗಳು ಮಂಗಳವಾರ ಆದೇಶ ಹೊರಡಿಸಿದ್ದಾರೆ.

ಭಾನುವಾರ ಮುಸ್ಲಿಮ್ ಯುವಕರು ಕ್ಯಾಥೋಲಿಕ್ ಚರ್ಚ್‌ವೊಂದಕ್ಕೆ ಬೆಂಕಿ ಹಚ್ಚಿದ ನಂತರ ಕೋಮು ಹಿಂಸಾಚಾರ ಭುಗಿಲೆದ್ದಿದ್ದು, ನಂತರ ನಡೆದ ಘರ್ಷಣೆಯಲ್ಲಿ ಸುಮಾರು 300ಮಂದಿ ಗಾಯಗೊಂಡಿರುವುದಾಗಿ ಸ್ಥಳೀಯ ಮಸೀದಿ ಇಮಾಮ್ ತಿಳಿಸಿದ್ದಾರೆ.

ಕೋಮು ಹಿಂಸಾಚಾರದಿಂದ ಸರ್ಕಾರಿ ಕಟ್ಟಡ, ಮಸೀದಿ, ಚರ್ಚ್ ಹಾಗೂ ಮನೆಗಳು ಬೆಂಕಿಗಾಹುತಿಯಾದ ಪರಿಣಾಮ ಸುಮಾರು 5ಸಾವಿರ ಜನರು ನಿರ್ವಸಿತರಾಗಿದ್ದಾರೆ ಎಂದು ರೆಡ್ ಕ್ರಾಸ್ ಸಂಸ್ಥೆಯ ಅಧಿಕಾರಿಗಳು ವಿವರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ