ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ರಾಷ್ಟ್ರದಲ್ಲಿ ಶೇ.45ರಷ್ಟು ನಕಲಿ ಔಷಧಿಗಳು: ಪಾಕಿಸ್ತಾನ (Pakistan | drugs | Rehman Malik | Shireen Arshad Khan)
Bookmark and Share Feedback Print
 
ದೇಶದಲ್ಲಿ ಮಾರಾಟ ಮಾಡಲಾಗುತ್ತಿರುವ ಔಷಧಿಗಳಲ್ಲಿ ಶೇ.40ರಿಂದ 45ರಷ್ಟು ನಕಲಿ ಮದ್ದುಗಳು ಎಂದು ಪಾಕಿಸ್ತಾನ ಸರಕಾರ ಒಪ್ಪಿಕೊಂಡಿದೆ.

ಸಂಸತ್ತಿನ ಕೆಳಮನೆಯಲ್ಲಿ ಮಂಡಿಸಲಾದ ಗೊತ್ತುವಳಿಯ ಬಗ್ಗೆ ಮಾತನಾಡುತ್ತಾ ಆಂತರಿಕ ಸಚಿವ ರೆಹಮಾನ್ ಮಲಿಕ್, ಸಾರ್ವಜನಿಕರ ಪ್ರಾಣಗಳ ಜತೆ ಚೆಲ್ಲಾಟಕ್ಕೆ ಅವಕಾಶ ನೀಡುವುದಿಲ್ಲ; ಇದಕ್ಕೆ ಸಂಬಂಧಪಟ್ಟ ನಿಯಮಗಳನ್ನು ಬಿಗಿಗೊಳಿಸುವುದು ಮಾತ್ರವಲ್ಲ, ಯಾವುದೇ ಅಡೆತಡೆಗಳು ಎದುರಾದರೂ ಜಾರಿಗೆ ತರಲಾಗುತ್ತದೆ ಎಂದರು.

ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ ಪಕ್ಷದ ಶಿರೀನ್ ಅರ್ಷಾದ್ ಖಾನ್ ಅವರು ಗೊತ್ತುವಳಿ ಮಂಡಿಸಿ, ರಾಷ್ಟ್ರದಲ್ಲಿ ನಡೆಯುತ್ತಿರುವ ಖೋಟಾ ಔಷಧಿಗಳ ಮಾರಾಟವನ್ನು ತಡೆಯುವಂತೆ ಆಗ್ರಹಿಸಿದರು.

ಈ ಕುರಿತು ವಿಸ್ತೃತ ಚರ್ಚೆ ನಡೆದ ನಂತರ ಸಂಸತ್ ಒಮ್ಮತದಿಂದ ಗೊತ್ತುವಳಿಯನ್ನು ಅಂಗೀಕರಿಸಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ನಕಲಿ ಔಷಧಿಗಳನ್ನು ತಯಾರಿಸುವವರು ಮತ್ತು ಮಾರಾಟ ಮಾಡುವವರ ವಿರುದ್ಧ ಕೇಂದ್ರ ಹಾಗೂ ಪ್ರಾಂತ್ಯದ ಆರೋಗ್ಯ ಇಲಾಖೆಗಳು ಹಾಗೂ ಔಷಧಿ ಇನ್ಸ್‌ಪೆಕ್ಟರುಗಳು ಕ್ರಮ ಕೈಗೊಳ್ಳಲು ಮತ್ತು ಕಠಿಣ ನಿಯಮಗಳನ್ನು ಅನುಸರಿಸಲು ವಿಫಲರಾಗಿದ್ದಾರೆ ಎಂದು ಚರ್ಚೆಯ ಸಂದರ್ಭದಲ್ಲಿ ಸಂಸತ್ ಸದಸ್ಯರು ಆರೋಪಿಸಿದರು.

ನಕಲಿ ಔಷಧಿಗಳನ್ನು ಮುಕ್ತವಾಗಿ, ಯಾವುದೇ ಹೆದರಿಕೆಯಿಲ್ಲದೆ ಮಾರಾಟ ಮಾಡಲಾಗುತ್ತಿದೆ. ಇಂತಹ ಅನಧಿಕೃತ ಮದ್ದುಗಳನ್ನು ಮಾರಾಟ ಮಾಡುತ್ತಿರುವ ಮತ್ತು ಅದರಲ್ಲಿ ಭಾಗಿಯಾಗಿರುವವರ ಪರವಾನಗಿಗಳನ್ನು ರದ್ದು ಮಾಡಬೇಕು ಎಂದು ಇದೇ ಸಂದರ್ಭದಲ್ಲಿ ಆಗ್ರಹಿಸಲಾಗಿದೆ.

ಬಾಂಗ್ಲಾದೇಶದಿಂದ ಪಾಕಿಸ್ತಾನಕ್ಕೆ ಔಷಧಿಗಳ ಕಳ್ಳ ಸಾಗಾಟ ನಡೆಸಲಾಗುತ್ತಿದೆ. ಈ ಕುರಿತು ಸರಕಾರವು ಗಮನ ಹರಿಸಿ, ಕಠಿಣ ಕ್ರಮಗಳನ್ನು ಕೈಗೊಳ್ಳುವ ಮೂಲಕ ಅದನ್ನು ತಡೆಯಬೇಕು ಎಂದು ಸದಸ್ಯರು ಒತ್ತಾಯಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ