ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಯೋತ್ಪಾದಕ ಹಣೆಪಟ್ಟಿ ತೆಗೆಯಿರಿ: ಅಮೆರಿಕಕ್ಕೆ ಪ್ರಚಂಡ (Prachanda | Nepal, Maoist | United States | terror organisation)
Bookmark and Share Feedback Print
 
PTI
ನೇಪಾಳದ ಮಾವೋವಾದಿಗಳಿಗೆ ಕಟ್ಟಿದ್ದ 'ಭಯೋತ್ಪಾದಕರ ಹಣೆಪಟ್ಟಿಯನ್ನು' ತೆಗೆದುಹಾಕುವಂತೆ ನೇಪಾಳ ಮಾವೋ ಮುಖಂಡ ಅಮೆರಿಕಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮೂರು ವರ್ಷಗಳಾದ ನಂತರ ಇದೀಗ ನೇಪಾಳ ಮಾವೋ ಪಕ್ಷವನ್ನು ಭಯೋತ್ಪಾದಕರ ಗುಂಪಿಗೆ ಸೇರಿಸಿದ್ದ ಪಟ್ಟಿಯಿಂದ ತೆಗೆದುಹಾಕುವಂತೆ ಮಾವೋ ವರಿಷ್ಠ ಪ್ರಚಂಡ ಅವರು, ಇಲ್ಲಿಗೆ ಭೇಟಿ ನೀಡಿದ್ದ ಅಮೆರಿಕದ ಸಹಾಯಕ ಕಾರ್ಯದರ್ಶಿ ಪ್ಯಾಟ್ರಿಕ್ ಮೂನ್ ಅವರನ್ನು ಕೋರಿದ್ದಾರೆ.

ಆ ನಿಟ್ಟಿನಲ್ಲಿ ಮಾವೋವಾದಿಗಳ ಮೇಲಿನ ಭಯೋತ್ಪಾದಕ ಹಣೆಪಟ್ಟಿಯನ್ನು ತೆಗೆದು ಹಾಕುವ ನಿಟ್ಟಿನಲ್ಲಿ ಸರ್ಕಾರದ ಜೊತೆ ಚರ್ಚಿಸುವುದಾಗಿ ಈ ಸಂದರ್ಭದಲ್ಲಿ ಭರವಸೆ ನೀಡಿದರು.

ಯುಸಿಪಿಎನ್ ಮತ್ತು ಮಾವೋವಾದಿ ಪಕ್ಷವನ್ನು ಅಮೆರಿಕ ವಿದೇಶಿ ಭಯೋತ್ಪಾದಕರ ಪಟ್ಟಿಯಲ್ಲಿ ಸೇರಿಸಿತ್ತು. ಇದೀಗ ಶಸ್ತ್ರ ಸನ್ಯಾಸ ಮಾಡಿ, ರಾಜಕೀಯಕ್ಕೆ ಪ್ರವೇಶಿಸಿರುವ ಮಾವೋ ಪಕ್ಷದ ಮೇಲಿನ ಭಯೋತ್ಪಾದಕ ಹಣೆಪಟ್ಟಿಯನ್ನು ತೆಗೆದುಹಾಕುವಂತೆ ಪ್ರಚಂಡ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ, ಪ್ರಸಕ್ತವಾಗಿ ನೇಪಾಳದಲ್ಲಿ ತಲೆದೋರಿರುವ ರಾಜಕೀಯ ಬಿಕ್ಕಟ್ಟು ಕೂಡ ಶಮನವಾಗಲಿದೆ ಎಂದು ಮೂನ್ ವಿಶ್ವಾಸ ವ್ಯಕ್ತಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ