ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸೂಡಾನ್‌‌‌: ದಾರ್‌ಫುರ್ ಇಬ್ಬರು ಬಂಡುಕೋರರಿಗೆ ಗಲ್ಲು ಶಿಕ್ಷೆ (Darfur | Sudan | rebels Darfur | death)
Bookmark and Share Feedback Print
 
2008ರಲ್ಲಿ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಬಂಡುಕೋರರಿಗೆ ಸೂಡಾನ್ ಕೋರ್ಟ್ ಮಂಗಳವಾರ ಮರಣದಂಡನೆ ಶಿಕ್ಷೆ ವಿಧಿಸಿದೆ.

ಸೂಡಾನ್‌ ರಾಜಧಾನಿಯ ಅವಳಿ ನಗರವಾದ ಒಮ್‌ಡರ್ಮನ್‌ನಲ್ಲಿ 2008ರ ಮೇ ತಿಂಗಳಿನಲ್ಲಿ ನಡೆಸಿದ ಭೀಕರ ಸ್ಫೋಟ ಪ್ರಕರಣದ ಆರೋಪಿಗಳಾದ ಅಬ್ದುಲ್ಲಾ ಅಲಿ ಅದಂ ಮತ್ತು ಅಲ್ ಮುರ್ಡಿ ಬಾಖೀತ್‌ಗೆ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿರುವುದಾಗಿ ಆರೋಪಿಗಳ ಪರ ವಕೀಲ ಅದಂ ಬಾಕ್ರ್ ಎಎಫ್‌ಪಿಗೆ ತಿಳಿಸಿದ್ದಾರೆ.

ಸ್ಫೋಟದಿಂದ ಪಶ್ಚಿಮ ಸೂಡಾನ್‌ನ ದಾರ್ಫುರ್‌ನಿಂದ ಓಮ್‌ಡರ್ಮನ್‌‌ ತತ್ತರಿಸಿಹೋಗಿತ್ತು. ಸುಮಾರು 222ಕ್ಕೂ ಅಧಿಕ ಮಂದಿ ಬಲಿಯಾಗಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕೋರ್ಟ್ ಸ್ಫೋಟ ಪ್ರಕರಣ ಕುರಿತಂತೆ 2009ರ ಜೂನ್‌ನಲ್ಲಿ 12ಮಂದಿ ಬಂಡುಕೋರರಿಗೆ ಶಿಕ್ಷೆ ವಿಧಿಸಿತ್ತು.

ಅಲ್ಲದೇ,ಬಂಡುಕೋರರಿಗೆ ಸಹಕಾರ ನೀಡಿದ 3ನೇ ಶಂಕಿತ ಆರೋಪಿಗೂ ಕೂಡ ಮಂಗಳವಾರ ಕೋರ್ಟ್ 3ವರ್ಷ ಜೈಲು ಶಿಕ್ಷೆ ವಿಧಿಸಿರುವುದಾಗಿ ಬಾಕ್ರ್ ತಿಳಿಸಿದ್ದು, ನ್ಯಾಯಾಲಯದ ನೀಡಿರುವ ತೀರ್ಪನ್ನು ಪ್ರಶ್ನಿಸುವುದಾಗಿ ಈ ಸಂದರ್ಭದಲ್ಲಿ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ