ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 'ಭಾರತೀಯರ ಮೇಲೆ ನಡೆಯುತ್ತಿರುವುದು ಜನಾಂಗೀಯ ದಾಳಿ' (Indian students | Simon Overland | Racial attack | Australia)
Bookmark and Share Feedback Print
 
ಭಾರತದ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವುದು ಜನಾಂಗೀಯ ದಾಳಿಯಲ್ಲ, ಸ್ಪಷ್ಟ ಅಪರಾಧಿ ಕೃತ್ಯಗಳಷ್ಟೇ ಎಂಬ ಕ್ಯಾನ್‌ಬೆರಾ ಅಧಿಕಾರಿಗಳ ವಾದವನ್ನು ಆಸೀಸ್ ಮಿಲಿಟರಿ ಮಾಜಿ ಮುಖ್ಯಸ್ಥರೊಬ್ಬರು ತಳ್ಳಿ ಹಾಕಿದ್ದಾರೆ.

ನೀವಿದನ್ನು ಜನಾಂಗೀಯ ದಾಳಿಯೆಂದು ಸಂಶಯಿಸದಿದ್ದರೆ ಖಂಡಿತಾ ಅದು ನಿಮ್ಮ ಅವಿವೇಕತನ ಎಂದು ಮಾಜಿ ಜನರಲ್ ಪೀಟರ್ ಕಾಸ್‌ಗ್ರೋವ್ ಜನಾಂಗೀಯ ಸಂಬಂಧಗಳ ಕುರಿತು ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಿದ ಬಳಿಕ 'ದಿ ನ್ಯೂಸ್‌ಪೇಪರ್' ಎಂಬ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

ಇದೇ ತಿಂಗಳಲ್ಲಿ 21ರ ಹರೆಯದ ಪದವೀಧರನ ಇರಿತ ಪ್ರಕರಣ ಸೇರಿದಂತೆ ಕಳೆದ 18 ತಿಂಗಳುಗಳಲ್ಲಿ ಭಾರತೀಯರ ಮೇಲೆ ಅಪಾರ ಪ್ರಮಾಣದಲ್ಲಿ ದಾಳಿಗಳು ನಡೆಯುತ್ತಿವೆ. ಇದರಿಂದ ಭಾರತ ಮತ್ತು ಆಸ್ಟ್ರೇಲಿಯಾ ಸಂಬಂಧಗಳು ಕೂಡ ಹದಗೆಡುತ್ತಿದ್ದು, ಆಸ್ಟ್ರೇಲಿಯಾದ ವಿದೇಶಿ ವಿದ್ಯಾರ್ಥಿಗಳ ಒಳಹರಿವಿನ ಪ್ರಮಾಣಕ್ಕೂ ಹೊಡೆತ ಬಿದ್ದಿದೆ.

ಇತ್ತೀಚೆಗೆ ಇಲ್ಲಿನ ಕೆಲವು ಗುಂಪುಗಳು ಒಬ್ಬೊಬ್ಬರ ಮೇಲೆ ನಡೆಸುತ್ತಿರುವ ವೈಯಕ್ತಿಕ ದಾಳಿಗಳು ಉಪಖಂಡದವರನ್ನು ಗುರಿಯಾಗಿರಿಸಿಕೊಂಡಂತೆ ಕಂಡು ಬರುತ್ತಿವೆ. ಇದರ ಬಗ್ಗೆ ಹೆಚ್ಚಿನ ಚಿಂತೆ ಮಾಡುವುದು ಬೇಡ, ಆದರೆ ಹತ್ತಿರದಿಂದ ಗಮನಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಈ ದಾಳಿಗಳು ಕೇವಲ ಅಪರಾಧಿ ಕೃತ್ಯಗಳಷ್ಟೇ ಎಂದು ಆಸ್ಟ್ರೇಲಿಯಾ ಸರಕಾರ ಮತ್ತು ಪೊಲೀಸರು ಸಮರ್ಥಿಸಿಕೊಳ್ಳುತ್ತಿದ್ದರೂ, ಭಾರತೀಯ ಮಾಧ್ಯಮಗಳು ಇದನ್ನು ಜನಾಂಗೀಯ ದಾಳಿಗಳೆಂದು ಹೇಳುತ್ತಿವೆ.

ಭಾರತೀಯರ ಮೇಲಿನ ದಾಳಿಯಲ್ಲಿ ಗ್ಯಾಂಗ್‌ಗಳ ಕೈವಾಡ ಇರಲೂಬಹುದು. ಆದರೆ ಇಲ್ಲಿ ಜನಾಂಗೀಯ ಅಂಶಗಳು ಕೆಲಸ ಮಾಡಿಲ್ಲ ಎಂದು ಪೊಲೀಸರು ಮತ್ತು ಸರಕಾರ ಹೇಳಲಾಗದು ಎಂದು ಇದೇ ಸಂದರ್ಭದಲ್ಲಿ ಮಾಜಿ ಮಿಲಿಟರಿ ಮುಖ್ಯಸ್ಥರು ಅಭಿಪ್ರಾಯಪಟ್ಟರು. ಅಲ್ಲದೆ ಈ ಹಿಂದೆ ಸಿಡ್ನಿ ಕಡಲತೀರದಲ್ಲಿ ಲೆಬನೀಸ್ ಮತ್ತು ಆಂಗ್ಲೋ ಯುವಕರ ಮೇಲೆ ನಡೆದಿದ್ದ ದಾಳಿಯನ್ನೂ ಮರೆಯಲಾಗದು ಎಂದು ಅವರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ