ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವರ್ಜಿನಿಯಾ: ಆಗಂತುಕನ ಶೂಟೌಟ್‌ಗೆ 8 ಬಲಿ (Shootout | Police | Gunman | Virginia | Christopher Speight)
Bookmark and Share Feedback Print
 
ವ್ಯಕ್ತಿಯೊಬ್ಬ ಏಕಾಏಕಿ ಗುಂಡಿನ ಮಳೆಗೆರೆದ ಪರಿಣಾಮ ಎಂಟು ಮಂದಿ ಬಲಿಯಾಗಿರುವ ಘಟನೆ ಅಮೆರಿಕದ ವರ್ಜಿನಿಯಾದಲ್ಲಿ ನಡೆದಿರುವುದಾಗಿ ಮಂಗಳವಾರ ಪೊಲೀಸರು ತಿಳಿಸಿದ್ದು, ಒಂದೇ ಮನೆಯಲ್ಲಿ ಏಳು ಮೃತದೇಹ ಪತ್ತೆ ಹಚ್ಚಿರುವುದಾಗಿ ಹೇಳಿದ್ದಾರೆ.

ಶೂಟ್ ಮಾಡಿದಾತನನ್ನು ಕ್ರಿಸ್ಟಫರ್ ಸ್ಪೈಯ್ಟ್ (39) ಎಂದು ಪೊಲೀಸರು ಶಂಕಿಸಿದ್ದು, ಮಂಗಳವಾರ ತಡರಾತ್ರಿ ಆತ ಈ ದುಷ್ಕೃತ್ಯ ನಡೆಸಿದ್ದ. ಈತನ ಗುಂಡನ ದಾಳಿಗೆ ಸಿಕ್ಕ 8ನೇ ವ್ಯಕ್ತಿಯ ರಸ್ತೆಯ ಬದಿಯಲ್ಲಿ ಸಿಕ್ಕಿದ್ದು, ಆತನನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆಯಲ್ಲಿ ಸಾವನ್ನಪ್ಪಿರುವುದಾಗಿ ಪೊಲೀಸರು ವಿವರಿಸಿದ್ದಾರೆ.

ಸಾವನ್ನಪ್ಪಿದವರಲ್ಲಿ ಮಹಿಳೆಯರು ಮತ್ತು ಪುರುಷರು ಸೇರಿದ್ದಾರೆ ಎಂದು ಪೊಲೀಸ್ ಅಧಿಕಾರಿ ಸಾರ್ಜೆಂಟ್ ಥೋಮಸ್ ಮೊಲ್‌ನಾರ್ ತಿಳಿಸಿದ್ದಾರೆ. ಆದರೆ ಆತ ಯಾವ ಬಗೆಯ ಆಯುಧ ಉಪಯೋಗಿಸಿ ಈ ಹತ್ಯೆ ನಡೆಸಿದ್ದ ಎಂಬುದನ್ನು ತಿಳಿಸಲು ಪೊಲೀಸರು ನಿರಾಕರಿಸಿದ್ದು, ಶಂಕಿತ ಕುರಿತು ಮಾಹಿತಿ ನೀಡಿದ್ದಾರೆ.

ಹಂತಕನ ಸೆರೆಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿರುವುದಾಗಿ ತಿಳಿಸಿರುವ ಪೊಲೀಸರು, ಬಂಧನದ ನಂತರ ಆರೋಪಿಯ ಕುರಿತು ವಿವರ ನೀಡುವುದಾಗಿ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ