ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನೈಜೀರಿಯಾ ಧಾರ್ಮಿಕ ಹಿಂಸಾಚಾರಕ್ಕೆ 200ಕ್ಕೂ ಹೆಚ್ಚು ಬಲಿ (Nigeria violence | Soldiers | Jos | religious violence)
Bookmark and Share Feedback Print
 
ನೈಜೀರಿಯಾದ ಪ್ಲಾಟೀವ್ ರಾಜ್ಯದ ಜಾಸ್ ನಗರದಲ್ಲಿ ನಡೆದ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮಗಳ ಅನುಯಾಯಿಗಳ ಘರ್ಷಣೆಯಲ್ಲಿ 200ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ ಎಂದು ಮೂಲಗಳು ಹೇಳಿವೆ.

ಇದೀಗ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಸೈನಿಕರು ಮೆಷಿನ್ ಗನ್ನುಗಳನ್ನು ಹಿಡಿದುಕೊಂಡು ನಗರದ ಬೀದಿಗಳಲ್ಲಿ ಓಡಾಡುತ್ತಿದ್ದಾರೆ. ಶವಗಳನ್ನು ಟ್ರಕ್ಕುಗಳಲ್ಲಿ ತುಂಬಿ ಸಾಗಿಸುತ್ತಿದ್ದಾರೆ ಎಂದು ವರದಿಗಳು ಹೇಳಿವೆ.

ಭಾನುವಾರ ಈ ಪ್ರಾಂತ್ಯ ರಾಜಧಾನಿಯಲ್ಲಿ ಹಿಂಸಾಚಾರ ಆರಂಭವಾಗಿತ್ತು. ಘಟನೆಯಲ್ಲಿ ನೂರಾರು ಮಂದಿ ಸಾವನ್ನಪ್ಪಿದ ಬಗ್ಗೆ ಅಧಿಕೃತ ವರದಿಗಳು ಬಂದಿದ್ದು, ಸಾವಿರಾರು ಜನ ನಗರದಿಂದ ವಲಸೆ ಹೋಗಿದ್ದಾರೆ. ಎರಡು ಧರ್ಮಗಳ ನಡುವಿನ ಈ ಕೋಮುಗಲಭೆ ಪಕ್ಕದ ನಗರಗಳಿಗೂ ಹಬ್ಬಿತ್ತು ಎಂದು ಹೇಳಲಾಗಿದೆ.

ಹಿಂಸಾಚಾರವನ್ನು ಹತ್ತಿಕ್ಕುವ ಸಲುವಾಗಿ ಜೋಸ್ ನಗರದಲ್ಲಿ ಅನಿರ್ಧಿಷ್ಟಾವಧಿ ನಿಷೇಧಾಜ್ಞೆ ಹೇರಲಾಗಿತ್ತು. ನಕಲಿ ವೇಷ-ಭೂಷಣಗಳನ್ನು ಧರಿಸಿ ದಾಳಿಕೋರರು ಪರಧರ್ಮೀಯರ ಮೇಲೆ ಹಲ್ಲೆ ನಡೆಸುತ್ತಿದ್ದರು ಎಂದು ಬಿಬಿಸಿ ಹೇಳಿದೆ.

ನಗರದಲ್ಲಿ ಕರ್ಫ್ಯೂ ಹೇರಲಾಗಿದ್ದರೂ ಜನತೆ ಇದನ್ನು ಗಣನೆಗೆ ತೆಗೆದುಕೊಳ್ಳದೆ, ಸೇನಾ ವಾಹನಗಳನ್ನೇ ತಡೆದಿದ್ದ ವರದಿಗಳೂ ಬಂದಿವೆ. ಸೇನೆ ತಮಗೆ ಒಂದು ಬೆದರಿಕೆಯೇ ಅಲ್ಲ ಎಂಬಂತೆ ಪ್ರತಿಭಟನಾಕಾರರು ಈ ಸಂದರ್ಭದಲ್ಲಿ ವರ್ತಿಸಿದ್ದಾರೆ.

ಭಾನುವಾರ ಇಲ್ಲಿನ ಕ್ಯಾಥೋಲಿಕ್ ಚರ್ಚ್ ಒಂದಕ್ಕೆ ಮುಸ್ಲಿಂ ಯುವಕರು ಬೆಂಕಿ ಹಚ್ಚುವುವದರೊಂದಿಗೆ ಹಿಂಸಾಚಾರ ಆರಂಭವಾಗಿತ್ತು. ಗಲಭೆಕೋರರು ಕತ್ತಿಗಳು, ಗೃಹನಿರ್ಮಿತ ಸ್ಫೋಟಕಗಳು, ಬಾಣಗಳಂತಹ ಕಬ್ಬಿಣದ ಸಲಾಕೆಗಳು ಮತ್ತು ಕಲ್ಲುಗಳಿಂದ ದಾರಿಹೋಕರಿಗೆ ಹಲ್ಲೆ ನಡೆಸುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ.

ಜೋಸ್ ನಗರದಲ್ಲಿ ಈ ರೀತಿ ಕೋಮುಗಲಭೆಗಳು ಇದೇ ಮೊದಲಲ್ಲ. ಈ ಹಿಂದೆ 2001ರ ಸೆಪ್ಟೆಂಬರ್‌ನಲ್ಲಿ 1,000, ಮೂರು ವರ್ಷಗಳ ನಂತರ 2004ರಲ್ಲಿ 700 ಹಾಗೂ 2008ರಲ್ಲಿ 300ಕ್ಕೂ ಹೆಚ್ಚು ಜನ ಕೋಮು ಹಿಂಸೆಗೆ ಬಲಿಯಾಗಿದ್ದರು.
ಸಂಬಂಧಿತ ಮಾಹಿತಿ ಹುಡುಕಿ