ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹೈಟಿಯಲ್ಲಿ ಮತ್ತೆ ಭೂಕಂಪ: ದಿಕ್ಕೆಟ್ಟು ಓಡಿದ ಜನ (earthquake | Haiti | Port-Au-Prince | Geological Survey)
Bookmark and Share Feedback Print
 
ಕೆರೆಬಿಯನ್ ದ್ವೀಪ ಪ್ರದೇಶ ಹೈಟಿ ಕಳೆದ ಎಂಟು ದಿನಗಳ ಹಿಂದಷ್ಟೇ ಭಾರೀ ಭೂಕಂಪಕ್ಕೆ ತತ್ತರಿಸಿದ ಬೆನ್ನಲ್ಲೇ, ಬುಧವಾರ ಮತ್ತೆ ಭೂಕಂಪವಾಗಿದ್ದು, ಕಟ್ಟಡಗಳು ಅಲುಗಾಡಿದ ಪರಿಣಾಮ ಜನರೆಲ್ಲಾ ದಿಕ್ಕೆಟ್ಟು ಬೀದಿಗಳಲ್ಲಿ ಓಡಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಪೋರ್ಟ್ ಔ ಪ್ರಿನ್ಸ್ ರಾಜಧಾನಿಯ ವಾಯುವ್ಯ ಭಾಗದಲ್ಲಿ ಇಂದು ಬೆಳಿಗ್ಗೆ ಮತ್ತೆ ಸಂಭವಿಸಿದ ಭೂಕಂಪ ರಿಕ್ಟರ್ ಮಾಪಕದಲ್ಲಿ 6.1ರಷ್ಟು ದಾಖಲಾಗಿರುವುದಾಗಿ ಅಮೆರಿಕದ ಜಿಯೋಲಾಜಿಕಲ್ ಸರ್ವೆ ಹೇಳಿದೆ. ಇಂದು ಸಂಭವಿಸಿದ ಭೂಕಂಪದಲ್ಲಿ ಸಾವು-ನೋವು, ಕಟ್ಟಡ ಕುಸಿತದ ವಿವರ ಲಭ್ಯವಾಗಿಲ್ಲ.

ಕಳೆದ ವಾರವಷ್ಟೇ ಸುಮಾರು 200 ವರ್ಷಗಳಲ್ಲಿಯೇ ಕಂಡರಿಯದ ಭಾರೀ ಭೂಕಂಪ ಹೈಟಿಯಲ್ಲಿ ಸಂಭವಿಸಿದ ಪರಿಣಾಮ ನ್ಯಾಷನಲ್ ಅರಮನೆ, ವಿಶ್ವಸಂಸ್ಥೆ ಶಾಂತಿಧೂತ ಕಟ್ಟಡ ಹಾಗೂ ಹಲವಾರು ಕಟ್ಟಡಗಳು ಕುಸಿದಿದ್ದು, ಲಕ್ಷಾಂತರ ಮಂದಿ ಸಾವಿಗೀಡಾಗಿದ್ದರು.

ಜನವರಿ 12ರ ಮುಂಜಾನೆ 7.0ರಷ್ಟು ತೀವ್ರತೆಯ ಪ್ರಬಲ ಭೂಕಂಪ ರಿಕ್ಟರ್ ಮಾಪನದಲ್ಲಿ ದಾಖಲಾಗಿತ್ತು. ಲಕ್ಷಾಂತರ ಮಂದಿ ಮನೆ-ಮಠ ಕಳೆದುಕೊಂಡು ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ಮತ್ತೊಂದೆಡೆ ಬೀದಿ,ಬೀದಿಗಳಲ್ಲಿ ರಾಶಿ, ರಾಶಿ ಹಣೆಗಳಿಂದಾಗಿ ರೋಗದ ಬಾಧೆ ಕಾಡತೊಡಗಿದೆ.

ಹೈಟಿಯಲ್ಲಿ ಪರಿಹಾರ ಕಾರ್ಯಾಚರಣೆ ಈಗಲೂ ಮುಂದುವರಿದಿದ್ದು, ಭಾರತ ಸೇರಿದಂತೆ 31ದೇಶಗಳು ಆರ್ಥಿಕ ನೆರವು ನೀಡಿವೆ. ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಶವಗಳನ್ನು ಹೊರತೆಗೆಯುವ ಕಾರ್ಯ ಕೂಡ ಮುಂದುವರಿದಿದೆ.
ಸಂಬಂಧಿತ ಮಾಹಿತಿ ಹುಡುಕಿ