ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಶಿಕ್ಷಕಿಯನ್ನು ಥಳಿಸಿದ 13ರ ಬಾಲಕಿಗೆ 90 ಛಡಿಯೇಟು (Saudi schoolgirl | assaults teacher | teenage girl | mobile phone)
Bookmark and Share Feedback Print
 
ಕ್ಯಾಮರಾ ಹೊಂದಿರುವ ಮೊಬೈಲ್ ಫೋನ್ ಶಾಲೆಗೆ ತರಬಾರದೆಂದು ಆದೇಶಿಸಿದ ಶಾಲೆಯ ಪ್ರಿನ್ಸಿಪಾಲ್ ಮೇಲೆ ಹಲ್ಲೆ ನಡೆಸಿದ್ದ ಬಾಲಕಿಯೋರ್ವಳಿಗೆ ಸೌದಿ ಅರೇಬಿಯಾ ನ್ಯಾಯಾಲಯವೊಂದು ಎರಡು ತಿಂಗಳ ಜೈಲು ಹಾಗೂ 90 ಚಾಟಿಯೇಟಿನ ಶಿಕ್ಷೆ ಪ್ರಕಟಿಸಿದೆ.

ಬಾಲಕಿಯರ ಶಾಲೆಗಳಲ್ಲಿ ಕ್ಯಾಮರಾ ಹೊಂದಿರುವ ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸಲಾಗಿದ್ದರೂ 13ರ ಹರೆಯದ ವಿದ್ಯಾರ್ಥಿನಿಯೋರ್ವಳು ಕಳೆದ ವರ್ಷ ನಿಯಮಗಳನ್ನು ಉಲ್ಲಂಘಿಸಿದ್ದಳು. ಇದನ್ನು ಪ್ರಶ್ನಿಸಿದ ಶಾಲಾ ಮುಖ್ಯಸ್ಥೆ, ಆಕೆಯ ಕೈಯಿಂದ ಮೊಬೈಲ್ ಫೋನನ್ನು ಕಸಿದುಕೊಂಡಿದ್ದರು.

ಆದರೆ ಇದರಿಂದ ಕುಪಿತಳಾಗಿದ್ದ ವಿದ್ಯಾರ್ಥಿನಿ ಶಿಕ್ಷಕಿಯ ಮೇಲೆ ಇತರ ವಿದ್ಯಾರ್ಥಿಗಳೆದುರೇ ಹಲ್ಲೆ ನಡೆಸಿದ್ದಳು ಎಂದು ಸೌದಿ ಪತ್ರಿಕೆ 'ಅಲ್-ವತನ್' ವರದಿ ಮಾಡಿದೆ.

ಇದರಿಂದ ನೊಂದ ಪ್ರಿನ್ಸಿಪಾಲ್ ಜುಬೈಲ್‌ನ ಈಶಾನ್ಯದಲ್ಲಿನ ನ್ಯಾಯಾಲಯಕ್ಕೆ ಮೊರೆ ಹೋಗಿ, ಮೊಬೈಲ್ ಬಳಕೆ ಮೇಲಿನ ನಿಷೇಧವನ್ನು ಉಲ್ಲಂಘಿಸಿದ ವಿದ್ಯಾರ್ಥಿನಿಗೆ ಛಡಿಯೇಟಿನ ಶಿಕ್ಷೆ ವಿಧಿಸುವಂತೆ ಮನವಿ ಮಾಡಿಕೊಂಡಿದ್ದರು.

ಆದರೆ ಇದೀಗ ಈ ಶಿಕ್ಷೆ ಭಾರೀ ಟೀಕೆಗೂ ಗುರಿಯಾಗಿದೆ. ಸಾಮಾನ್ಯ ಅಪರಾಧಗಳಿಗಾಗಿ ಇಂತಹ ಕಠಿಣ ಶಿಕ್ಷೆ ನೀಡಿರುವುದನ್ನು ಇಲ್ಲಿನ ಮಾನವ ಹಕ್ಕುಗಳ ಸಂಘಟನೆಗಳು ಆಕ್ಷೇಪಿಸಿವೆ. ಬಾಲಕಿಗೆ ಪ್ರಕಟಿಸಲಾಗಿರುವ ಶಿಕ್ಷೆ ದರೋಡೆಕೋರರು ಮತ್ತು ಕಳ್ಳರಿಗೆ ನೀಡಲಾಗುವ ಶಿಕ್ಷೆಗೂ ಮಿಗಿಲಾದದ್ದು ಎಂದು ಅಭಿಪ್ರಾಯಪಡಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ