ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಫ್ಘಾನಿಸ್ತಾನಿಯರು ಶೇ.71ಭಾರತದ ಪರ, ಶೇ.2ಪಾಕ್: ಸಮೀಕ್ಷೆ (Afghans | favour | India | Pakistan | Opinion poll)
Bookmark and Share Feedback Print
 
ಮಹತ್ತರವಾದ ಅಂಶ ಎಂಬಂತೆ ಅಫ್ಘಾನಿಸ್ತಾನದ ಶೇ.71ರಷ್ಟು ಜನ ಭಾರತದ ಪರ ಒಲವು ವ್ಯಕ್ತಪಡಿಸಿದ್ದರೆ, ಶೇ.2ರಷ್ಟು ಮಾತ್ರ ಪಾಕಿಸ್ತಾನಕ್ಕೆ ಮತ ಚಲಾಯಿಸಿರುವುದಾಗಿ ಅಭಿಪ್ರಾಯ ಸಂಗ್ರಹದ ಸಮೀಕ್ಷೆಯೊಂದು ತಿಳಿಸಿದೆ.

ಬಿಬಿಸಿ, ಅಮೆರಿಕನ್ ಬ್ರಾಡ್‌ಕಾಸ್ಟಿಂಗ್ ಕಂಪನಿ(ಎಬಿಸಿ) ಮತ್ತು ಜರ್ಮನ್ ಬ್ರಾಡ್‌ಕಾಸ್ಟಿಂಗ್ ಕಂಪನಿ ಸಹಯೋಗದಲ್ಲಿ ನಡೆಸಿದ ಅಭಿಪ್ರಾಯ ಸಂಗ್ರಹ ಸಮೀಕ್ಷೆಯಲ್ಲಿ, ಉಗ್ರರ ಅಟ್ಟಹಾಸದಲ್ಲಿ ನಲುಗುತ್ತಿರುವ ಅಫ್ಘಾನಿಸ್ತಾನಿಯರು ಅಮೆರಿಕವನ್ನು ಹೊರತುಪಡಿಸಿ ಭಾರತದ ಪರವಾಗಿಯೇ ಮತ ಚಲಾಯಿಸಿರುವುದಾಗಿ ಹೇಳಿದೆ.

ಕಳೆದ ವರ್ಷ ಡಿಸೆಂಬರ್ 11ರಿಂದ 23ರವರೆಗೆ ನಡೆಸಿದ ಅಭಿಪ್ರಾಯ ಸಂಗ್ರಹದಲ್ಲಿ, ಜರ್ಮನಿ ಶೇ.59ರಷ್ಟು ಮತ ಗಳಿಸುವ ಮೂಲಕ ಎರಡನೇ ಸ್ಥಾನ ಪಡೆದಿದೆ. ಇನ್ನುಳಿದಂತೆ ಅಮೆರಿಕ ಶೇ.51, ಇರಾನ್ ಶೇ.50 ಹಾಗೂ ಬ್ರಿಟನ್ ಶೇ.39ರಷ್ಟು ಮತ ಗಳಿಸಿರುವುದಾಗಿ ತಿಳಿಸಿದೆ.

ಕಾಬೂಲ್ ಮೂಲದ ಅಫ್ಘಾನ್‌ನ ಸೋಸಿಯೋ ಇಕಾನಾಮಿಕ್ ಓಪಿನಿಯನ್ ರಿಸರ್ಚ್(ಎಸಿಎಸ್‌ಓಆರ್)‌ನ ಸಹಾಯದಿಂದ ನಡೆಸಿದ ಸಮೀಕ್ಷೆಯಲ್ಲಿ ಪಾಕಿಸ್ತಾನ ಕೇವಲ ಶೇ.2ರಷ್ಟು ಮತ ಪಡೆಯಲು ಮಾತ್ರ ಶಕ್ತವಾಗಿದೆ. ಶೇ.71ರಷ್ಟು ಅಫ್ಘಾನಿಸ್ತಾನಿಯರು ಭಾರತದ ಪರವಾಗಿ ಮತ ಚಲಾಯಿಸುವ ಮೂಲಕ ಉತ್ತಮ ಸಂದೇಶವನ್ನು ರವಾನಿಸಿದಂತಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ