ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬುಷ್ ಅಮೆರಿಕಾ ಅಧ್ಯಕ್ಷರಾದಾಗ ಕುಣಿದು ಕುಪ್ಪಳಿಸಿದ್ದ ಲಾಡೆನ್..! (Al Qaeda | Osama bin Laden | George Bush | Omar bin Laden)
Bookmark and Share Feedback Print
 
2001ರಲ್ಲಿ ಅಮೆರಿಕಾ ಅಧ್ಯಕ್ಷರಾಗಿ ಜಾರ್ಜ್ ಡಬ್ಲ್ಯೂ ಬುಷ್ ಆಯ್ಕೆಯಾದಾಗ ಅಲ್‌ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಸಂತಸಪಟ್ಟಿದ್ದನಂತೆ. ಇದನ್ನು ಬಹಿರಂಗಪಡಿಸಿರುವುದು ಆತನ ನಾಲ್ಕನೇ ಹಿರಿಯ ಪುತ್ರ ಒಮರ್ ಬಿನ್ ಲಾಡೆನ್.

ಭಯೋತ್ಪಾದನೆ ವಿರುದ್ಧದ ಯುದ್ಧಕ್ಕಾಗಿ ಬಿಲಿಯನ್‌ಗಟ್ಟಲೆ ಡಾಲರುಗಳನ್ನು ವ್ಯಯಿಸುವ ಮೂಲಕ ಅಮೆರಿಕಾವನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸುವ ಬುಷ್‌ರಂತಹ ವ್ಯಕ್ತಿಗಳು ಅಗತ್ಯವೆಂಬುದು ಲಾಡೆನ್ ಅಭಿಪ್ರಾಯವಾಗಿತ್ತು. ಇದೇ ಕಾರಣದಿಂದ ಆತ ಬುಷ್ ಅಧ್ಯಕ್ಷರಾದಾಗ ಸಂತಸಪಟ್ಟಿದ್ದ ಎಂದು ಆತನ ಮಗ ಹೇಳಿಕೊಂಡಿದ್ದಾನೆ.

ಅಲ್ಲದೆ ಈಗಿನ ಅಧ್ಯಕ್ಷ ಬರಾಕ್ ಒಬಾಮಾ ಅವರ ಬದಲಿಗೆ ಮೆಕ್‌ಕೈನ್ ಆ ಸ್ಥಾನಕ್ಕೆ ಬರಬೇಕೆಂದು ನನ್ನ ತಂದೆ ಬಯಸಿದ್ದರು. ಮೆಕ್‌ಕೈನ್ ಕೂಡ ಬುಷ್‌ ರೀತಿಯ ನಿಲುವನ್ನು ಹೊಂದಿರುವವರು. ಹಾಗಾಗಿ ಒಬಾಮಾ ಅಧ್ಯಕ್ಷರಾಗಿದ್ದರಿಂದ ಅವರಿಗೆ ನಿರಾಸೆಯಾಗಿರುವುದು ಖಚಿತ ಎಂದು ಒಮರ್ 'ರೋಲಿಂಗ್ ಸ್ಟೋನ್' ನಿಯತಕಾಲಿಕೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾನೆ.

ಆಫ್ರಿಕಾದಲ್ಲಿನ ಅಮೆರಿಕಾ ಮೂಲಗಳ ಮೇಲೆ ದಾಳಿ ನಡೆಸಿದ್ದಕ್ಕೆ ಪ್ರತೀಕಾರವಾಗಿ ತನ್ನ ತಂದೆಯ ತರಬೇತಿ ಕೇಂದ್ರಗಳಿಗೆ ನೌಕಾ ಕ್ಷಿಪಣಿ ದಾಳಿ ನಡೆಸುವ ತೀರ್ಮಾನಕ್ಕೆ ಬಂದಿದ್ದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್‌ರ ಜಾಣ ನಿರ್ಧಾರ ಕೂಡ ತನ್ನ ತಂದೆಗೆ ಇಷ್ಟವಾಗಿತ್ತು ಎಂದು ಒಮರ್ ತಿಳಿಸಿದ್ದಾರೆ.

ಅವರಿಗೆ ನನ್ನ ತಂದೆಯನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಅಫಘಾನಿಸ್ತಾನದಲ್ಲಿ ಭಾರೀ ಪ್ರಮಾಣದ ದಾಳಿಗಳನ್ನು ನಡೆಸಲಾಗುತ್ತಿದ್ದರೂ, ಈಗಲೂ ನನ್ನ ತಂದೆ ಅವರ ಕೈಗೆ ಸಿಕ್ಕಿಲ್ಲ. ಅವರು ನೂರಾರು ಬಿಲಿಯನ್ ಡಾಲರುಗಳನ್ನು ವ್ಯಯಿಸುತ್ತಿದ್ದಾರೆ. ಅಮೆರಿಕಾವು ತನ್ನ ಆರ್ಥಿಕತೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅದಕ್ಕೆ ಉತ್ತಮವಾಗಿತ್ತು ಎಂದು ಲಾಡೆನ್ ಪುತ್ರ ವಿವರಣೆ ನೀಡಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ