ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಆಸ್ಟ್ರೇಲಿಯನ್ನರಿಗೆ ತಡೆಯೇ ಇಲ್ಲ; ಮತ್ತಿಬ್ಬರು ಭಾರತೀಯರಿಗೆ ಹಲ್ಲೆ (Indian | Brisbane | Australia | Kevin Rudd)
Bookmark and Share Feedback Print
 
ಆಸ್ಟ್ರೇಲಿಯಾದಲ್ಲಿ ಭಾರತೀಯರ ಮೇಲೆ ನಡೆಯುತ್ತಿರುವ ದಾಳಿ ದುರದೃಷ್ಟಕರ ಎಂದು ಪ್ರಧಾನಿ ಕೆವಿನ್ ರೂಡ್ ಹೇಳಿದ ಮರುದಿನವೇ ಒಬ್ಬ ಟ್ಯಾಕ್ಸಿ ಚಾಲಕ ಸೇರಿದಂತೆ ಇಬ್ಬರು ಭಾರತೀಯರ ಮೇಲೆ ಪ್ರತ್ಯೇಕ ಘಟನೆಗಳಲ್ಲಿ ದಾಳಿ ನಡೆಸಲಾಗಿದೆ.

ಕಳೆದ ರಾತ್ರಿ ದಕ್ಷಿಣ ಬ್ರಿಸ್ಬೇನ್‌ನ ಮೆಕ್‌ಗ್ರೆಗೊರ್‌ನಲ್ಲಿನ ತನ್ನ ಮನೆಯ ಸಮೀಪದ ಸಾರ್ವಜನಿಕ ದೂರವಾಣಿ ಬೂತ್ ಒಂದರಲ್ಲಿ ಕರೆ ಮಾಡುತ್ತಿದ್ದಾಗ 25ರ ಹರೆಯದ ಯುವಕನನ್ನು ಥಳಿಸಲಾಗಿದ್ದು, ದರೋಡೆ ನಡೆಸಿದ ಬಗ್ಗೆ ದೂರು ಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಹಲ್ಲೆಗೊಳಗಾದ ಯುವಕನ ಹೆಸರನ್ನು ಬಹಿರಂಗಪಡಿಸಲಾಗಿಲ್ಲ. ಆತನ ತಲೆಗೆ ಬಲವಾಗಿ ಎರಡು ಬಾರಿ ಗುದ್ದಿದ ನಂತರ ಕೈಚೀಲವನ್ನು ದಾಳಿಕೋರ ಕದ್ದೊಯ್ದಿದ್ದಾನೆ. ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಪೆಸಿಪಿಕ್ ದ್ವೀಪವಾಸಿಯಂತೆ ಕಂಡು ಬರುತ್ತಿದ್ದ ಆತ ದೃಢಕಾಯನಾಗಿದ್ದ, ಕಪ್ಪು ಗುಂಗುರು ಕೂದಲನ್ನು ಹೊಂದಿದ್ದ ಎಂದು ಬಲಿಪಶು ವಿವರಣೆ ನೀಡಿದ್ದಾನೆ.

ಮತ್ತೊಂದು ದಾಳಿ ನಡೆದಿರುವುದು ಬ್ರಿಸ್ಬೇನ್ ಈಶಾನ್ಯದ ಕರೆಂಡೇಲ್‌ನಲ್ಲಿ. ಶುಕ್ರವಾರ ಮುಂಜಾನೆ ಭಾರತೀಯ ಟ್ಸಾಕ್ಸಿ ಚಾಲಕನೊಂದಿಗೆ ವಾಗ್ವಾದಕ್ಕಿಳಿದ ವ್ಯಕ್ತಿಯೋರ್ವ ಹಲ್ಲೆ ನಡೆಸಿದ್ದಾನೆ ಎಂದು ದೂರಲಾಗಿದೆ.

ಈ ಸಂದರ್ಭದಲ್ಲಿ ಆತ ಚಾಲಕನ ಮುಖಕ್ಕೆ ಹಲವು ಬಾರಿ ಗುದ್ದು ನೀಡಿದ್ದಲ್ಲದೆ, ಕಾರಿನ ಕಿಟಕಿಗಳ ಗಾಜುಗಳನ್ನು ಒಡೆದು ಹಾಕಿದ್ದ. ಮುಖ ಹಾಗೂ ಬಲಗಣ್ಣಿಗೆ ಗಂಭೀರ ಗಾಯವಾದ ಚಾಲಕನನ್ನು ಪಕ್ಕದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಭಾರತೀಯರ ಮೇಲೆ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ದಾಳಿಗಳನ್ನು ಸತತ ಖಂಡಿಸುತ್ತಾ ಬಂದಿರುವ ಭಾರತ ಸರಕಾರ, ದ್ವಿಪಕ್ಷೀಯ ಸಂಬಂಧಗಳು ಇದರಿಂದ ಶಿಥಿಲಗೊಳ್ಳಲಿವೆ ಎಂದು ಎಚ್ಚರಿಕೆ ನೀಡಿದ ನಂತರ ಕೆಲವು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ