ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮುಂಬೈ ದಾಳಿಯನ್ನು ಭಾರತವೇ ನಡೆಸಿತ್ತು: ಪಾಕಿಸ್ತಾನ (India | Pakistan | Rehman Malik | Mumbai attack)
Bookmark and Share Feedback Print
 
ಪಾಕಿಸ್ತಾನಕ್ಕೆ ಮಸಿ ಬಳಿಯುವ ಸಲುವಾಗಿ ಭಾರತವು ಮುಂಬೈ ಮತ್ತು ಸಮ್ಜೋತಾ ಎಕ್ಸ್‌ಪ್ರೆಸ್‌ನಂತಹ ಭಯೋತ್ಪಾದನಾ ದಾಳಿಗಳನ್ನು ನಡೆಸಿದೆ-- ಇದನ್ನು ಹೇಳಿರುವುದು ಸ್ವತಃ ಪಾಕಿಸ್ತಾನ.

ಮುಂಬೈ ಮತ್ತು ಸಮ್ಜೋತಾ ಎಕ್ಸ್‌ಪ್ರೆಸ್‌ನಂತಹ ದಾಳಿಗಳನ್ನು ಪಾಕಿಸ್ತಾನಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಭಾರತವೇ ನಡೆಸಿದೆ. ಸಮ್ಜೋತಾ ಎಕ್ಸ್‌ಪ್ರೆಸ್ ದಾಳಿಯಲ್ಲಿ ಭಾರತೀಯ ಪ್ರಜೆಗಳೇ ಪಾಲ್ಗೊಂಡಿದ್ದರು. ಇಂತಹ ದಾಳಿಗಳು ಮುಂದೆ ನಡೆದಲ್ಲಿ ಅದಕ್ಕೆ ಭಾರತವೇ ಜವಾಬ್ದಾರಿ ಎಂದು ಒಂದಿಲ್ಲೊಂದು ಎಡಬಿಡಂಗಿ ಹೇಳಿಕೆಗಳನ್ನು ನೀಡುತ್ತಿರುವ ಪಾಕ್ ಆಂತರಿಕ ಸಚಿವ ರೆಹಮಾನ್ ಮಲಿಕ್ ಹೇಳಿದ್ದಾರೆ.

ನಾವು ಸಾಕಷ್ಟು ಬಾರಿ ಕೇಳಿಕೊಂಡ ಹೊರತಾಗಿಯೂ ಮುಂಬೈ ಭಯೋತ್ಪಾದನಾ ದಾಳಿಯ ಸಂಬಂಧ ಸಮರ್ಥ ಸಾಕ್ಷ್ಯಗಳನ್ನು ಭಾರತ ನೀಡಿಲ್ಲ ಎಂದು ಪಾಕಿಸ್ತಾನ ಸಂಸತ್ ಮೇಲ್ಮನೆ ಚರ್ಚೆ ಸಂದರ್ಭದಲ್ಲಿ ಸಚಿವ ಮಲಿಕ್ ಈ ರೀತಿ ಹೇಳಿದ್ದಾರೆಂದು ಆನ್‌ಲೈನ್ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ನಂಬಲರ್ಹ ಪುರಾವೆಗಳನ್ನು ಹಸ್ತಾಂತರಿಸಿ ಎಂದು ಹಲವು ಬಾರಿ ನಾವು ಮನವಿ ಮಾಡಿಕೊಂಡರೂ ಭಾರತ ಇದಕ್ಕೆ ಪೂರಕವಾಗಿ ಸ್ಪಂದಿಸಿಲ್ಲ. ಹಾಗಾಗಿ ತನಿಖೆಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸುವುದು ನಮ್ಮಿಂದ ಸಾಧ್ಯವಾಗಿಲ್ಲ ಎಂದು ಮಲಿಕ್ ತಿಳಿಸಿದರು.

ರಾಬರ್ಟ್ ಕ್ಷಮೆ ಕೇಳಬೇಕು...
ಅದೇ ಹೊತ್ತಿಗೆ ಪಾಕಿಸ್ತಾನದ ವಿರುದ್ಧ ಹೇಳಿಕೆ ನೀಡಿರುವ ಅಮೆರಿಕಾ ರಕ್ಷಣಾ ಕಾರ್ಯದರ್ಶಿ ರಾಬರ್ಟ್ಸ್ ಗೇಟ್ಸ್ ಅವರನ್ನು ದೇಶದೊಳಗೆ ಕಾಲಿಡಲು ಅವಕಾಶ ನೀಡಬಾರದು ಎಂದು ಪಾಕ್ ಶಿಕ್ಷಣ ತಜ್ಞರೊಬ್ಬರು ಸರಕಾರವನ್ನು ಆಗ್ರಹಿಸಿದ್ದಾರೆ.

ಮುಂಬೈ ಭಯೋತ್ಪಾದನಾ ದಾಳಿ ಬಳಿಕ ಭಾರತವು ಶ್ರೇಷ್ಠ ಸಂಯಮ ಮತ್ತು ನೀತಿಗಳೊಂದಿಗೆ ಪ್ರತಿಕ್ರಿಯಿಸಿದೆ. ಆದರೆ ಅದೇ ಪರಿಸ್ಥಿತಿ ಮತ್ತೊಮ್ಮೆ ಎದುರಾದರೆ ಅಥವಾ ಭಾರತದ ಮೇಲೆ ಮತ್ತೊಂದು ದಾಳಿ ನಡೆದರೆ ಆಗಲೂ ಸಂಯಮವನ್ನು ಉಳಿಸಿಕೊಳ್ಳದು. ಆಗ ಭಾರತವು ಪಾಕಿಸ್ತಾನದ ಮೇಲೆ ಯುದ್ಧ ನಡೆಸುವ ಸಾಧ್ಯತೆಗಳಿವೆ ಎಂದು ಗೇಟ್ಸ್ ಪಾಕ್‌ಗೆ ಎಚ್ಚರಿಕೆ ನೀಡಿದ್ದರು.

ಭಾರತ ಭೇಟಿ ಮುಗಿಸಿರುವ ಗೇಟ್ಸ್ ಪ್ರಸಕ್ತ 150 ಅಮೆರಿಕನ್ ಅಧಿಕಾರಿಗಳ ನಿಯೋಗದೊಂದಿಗೆ ಪಾಕಿಸ್ತಾನದಲ್ಲಿದ್ದು, ಅವರನ್ನು ತಕ್ಷಣವೇ ದೇಶದಿಂದ ಹೊರಗೆ ಕಳುಹಿಸಬೇಕು ಎಂದು ಪ್ರೊಫೆಸರ್ ಖುರ್ಷೀದ್ ಅಹ್ಮದ್ ಹೇಳಿಕೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ