ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಉಗ್ರರನ್ನು ಮಟ್ಟಹಾಕಲು ಆರ್ಥಿಕ ನೆರವು ನೀಡಿ: ಪಾಕ್ (Pakistan | Insurgents | UN | Islamabad | terrorism)
Bookmark and Share Feedback Print
 
ದೇಶದಲ್ಲಿ ನೆಲದಲ್ಲಿ ಬೀಡುಬಿಟ್ಟಿರುವ ಉಗ್ರರನ್ನು ದಮನಿಸಲು ಆರ್ಥಿಕ ನೆರವು ನೀಡುವಂತೆ ಪಾಕಿಸ್ತಾನ ಮತ್ತೊಮ್ಮೆ ವಿಶ್ವಸಂಸ್ಥೆಯನ್ನು ಕೋರಿದೆ.

ದೇಶದಲ್ಲಿ ಉಗ್ರರನ್ನು ಮಟ್ಟ ಹಾಕಲು ಮತ್ತು ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆಯಲ್ಲಿ ನಿರಾಶ್ರಿತಗೊಂಡ ಜನರಿಗೆ ಪುನರ್ವಸತಿ ಕಲ್ಪಿಸಲು ನೆರವು ನೀಡುವುದಾಗಿ ಈಗಾಗಲೇ ಅಂತಾರಾಷ್ಟ್ರೀಯ ಸಮುದಾಯ ಮತ್ತು ಫ್ರೆಂಡ್ಸ್ ಆಫ್ ಡೆಮೋಕ್ರೆಟಿಕ್ ಪಾಕಿಸ್ತಾನ್(ಎಫ್‌ಓಡಿಪಿ) ಘೋಷಿಸಿದೆ ಎಂದು ನ್ಯಾಷನಲ್ ಅಸೆಂಬ್ಲಿ ಸ್ಪೀಕರ್ ಫೆಹಮಿದಾ ಮಿರ್ಜಾ ತಿಳಿಸಿದ್ದಾರೆ.

ಪಾಕಿಸ್ತಾನಕ್ಕೆ ಭೇಟಿ ನೀಡಿರುವ ವಿಶ್ವಸಂಸ್ಥೆ ನಿಯೋಗದ ಮುಖ್ಯಸ್ಥ ಜೀನ್ ಮೌರೀಸ್ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಫೆಹಮಿದಾ ಈ ಹೇಳಿಕೆಯನ್ನು ನೀಡಿದ್ದಾರೆ.

ದೇಶದಲ್ಲಿನ ಉಗ್ರರನ್ನು ಮಟ್ಟಹಾಕುವಲ್ಲಿ ಇಡೀ ಪಾಕಿಸ್ತಾನ ಹಾಗೂ ಸಂಸತ್ತಿನ ಬೆಂಬಲ ಇರುವುದಾಗಿ ತಿಳಿಸಿರುವ ಅವರು, ಅಲ್ಲದೇ ಬುಡಕಟ್ಟು ಹಾಗೂ ಉಗ್ರರ ಉಪಟಳ ಇರುವ ಪ್ರದೇಶಗಳಲ್ಲಿ ಶೀಘ್ರವೇ ಅಭಿವೃದ್ಧಿ ಕಾರ್ಯ ನೆರವೇರಬೇಕಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ