ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಒಂಟಿ ಜೀವಕ್ಕೆ ಜಂಟಿ ಹುಡುಕುತ್ತದೆ ಚೀನಾದ ಈ ವೆಬ್‌ಸೈಟ್ (Single | Chinese government | lovebirds | China)
Bookmark and Share Feedback Print
 
ಕೆಲಸದಲ್ಲೇ ವ್ಯಸ್ತರಾಗಿರುವ ಸಾವಿರಾರು ಒಂಟಿ ಜೀವಗಳ ನೋವನ್ನು ಅರಿತುಕೊಂಡಿರುವ ಚೀನಾದ ಕೇಂದ್ರ ಸರಕಾರ, ತಮ್ಮ ಜೋಡಿಯನ್ನು ಹುಡುಕಿಕೊಳ್ಳಲು ವೆಬ್‌ಸೈಟ್‍ವೊಂದನ್ನು ತೆರೆಯುವ ಮೂಲಕ ಪ್ರೇಮ ಜೀವಿಗಳಿಗೆ ಸಹಾಯ ಮಾಡುತ್ತಿದೆ.

ನಸುಗೆಂಪು ಬಣ್ಣದಿಂದ ಮೇಳೈಸುತ್ತಿರುವ ಈ ಸರಕಾರಿ ವೆಬ್‌ಸೈಟ್ (ywqq.gov.cn), ನೀವಿನ್ನೂ ಒಂಟಿಯಾಗಿದ್ದೀರಾ ಮತ್ತು ನೋವನ್ನೇ ಉಣ್ಣುತ್ತಿದ್ದೀರಾ ಎಂದು ಪ್ರಶ್ನಿಸುತ್ತಾ, ಜೋಡಿ ಹುಡುಕುವ ಅವಕಾಶವನ್ನು ನೀಡುತ್ತಿದೆ. ಆದರೆ ಇದು ಸರಕಾರಿ ನೌಕರರಿಗೆ ಮಾತ್ರ.
PR


ಕೇಂದ್ರ ಸರಕಾರದ ಸಂಸ್ಥೆಗಳ ಉದ್ಯೋಗಿಗಳ ಸೇತುವೆ ಎಂದು ಹೆಸರಿಸಲಾಗಿರುವ ಚೀನಾ ಸರಕಾರದ ಅಧಿಕೃತ ವೆಬ್‌ಸೈಟಿನಲ್ಲಿ ಒಬ್ಬ ಹದಿಹರೆಯದ ಯುವಕ ಮತ್ತು ಯುವತಿ ಪ್ರೇಮಭಂಗಿಯಲ್ಲಿ ನಿಂತುಕೊಂಡಿರುವ ಚಿತ್ರವನ್ನು ಪ್ರಕಟಿಸಲಾಗಿದೆ. ಇಬ್ಬರೂ ಎರಡು ಬದಿಯ ಗೋಡೆಗಳಲ್ಲಿ ನಿಂತುಕೊಂಡು ಜೋಡಿಯನ್ನು ಹುಡುಕುತ್ತಿರುವ ಸಂದೇಶವನ್ನು ಇದು ರವಾನಿಸುತ್ತಿದೆ.

ಸದಸ್ಯರು ಅತಿ ಚಾಣಾಕ್ಷರು, ಅತ್ಯುನ್ನತ ವ್ಯಾಸಂಗ ಮಾಡಿದವರು ಮತ್ತು ಉದ್ಯೋಗಗಳಲ್ಲಿ ಸ್ಥಿರಗೊಂಡವರು ಎಂದು ಇದರಲ್ಲಿ ಹೇಳಲಾಗಿದೆ.

ಸಂಬಂಧಪಟ್ಟ ಉದ್ಯೋಗಿಯ ಎದುರು ನೌಕರರ ಸಂಘಟನೆಯು ಎಲ್ಲಾ ಮಾಹಿತಿಗಳನ್ನು ವಿಶ್ವಾಸಾರ್ಹತೆ ಮತ್ತು ಖಚಿತತೆಗೊಳಪಡಿಸಿ ಖಾತ್ರಿ ಮಾಡಿಕೊಂಡು ಸಾರ್ವಜನಿಕ ಭದ್ರತಾ ಸಚಿವಾಲಯದಲ್ಲಿ ನೋಂದಣಿ ಮಾಡಿಸುತ್ತದೆ.

2005ರಿಂದ ಈ ಸರಕಾರಿ ಪ್ರಾಯೋಜಿತ ಪ್ರೇಮಸೇತು 5,000 ಕೇಂದ್ರ ಸರಕಾರಿ ಹಾಗೂ ಬೀಜಿಂಗ್ ಮುನ್ಸಿಪಲ್ ಸರಕಾರದ ಉದ್ಯೋಗಿಗಳನ್ನು ಆಕರ್ಷಿಸಿದೆ ಎಂದು ವಿವರಣೆ ನೀಡಲಾಗಿದೆ.

ಇದು ಸರಕಾರಿ ವೆಬ್‌ಸೈಟ್ ಆಗಿರುವ ಕಾರಣ ವಿಶ್ವಾಸಾರ್ಹತೆ ಮತ್ತು ನಂಬಿಕೆ ಹೆಚ್ಚಿರುತ್ತದೆ. ನಕಲಿ ವೈಯಕ್ತಿಕ ಮಾಹಿತಿಗಳನ್ನು ತುಂಬಿ ಮೋಸ ಮಾಡುವ ವ್ಯವಹಾರಿಕ ವೆಬ್‌ಸೈಟುಗಳನ್ನು ಭಾರೀ ಸಂಖ್ಯೆಯಲ್ಲಿ ಹೊಂದಿರುವ ಚೀನಾದಲ್ಲಿ ಸರಕಾರವು ಈ ಹೊಸ ತಂತ್ರದ ಮೂಲಕ ಶುದ್ಧ ಮತ್ತು ಸುರಕ್ಷಿತ ವಾತಾವರಣವನ್ನು ಸೃಷ್ಟಿಸಿದೆ ಎಂದು ಜನತೆ ಅಭಿಪ್ರಾಯಪಟ್ಟಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ