ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹೈಟಿ ಸಂತ್ರಸ್ತರಿಗಾಗಿ ಮಡೋನಾ ರಸಮಂಜರಿ (Beyonce | Madonna | Haiti | New York | London)
Bookmark and Share Feedback Print
 
ಇತ್ತೀಚೆಗೆ ಹೈಟಿ ರಾಜಧಾನಿಯಲ್ಲಿ ಸಂಭವಿಸಿದ ಭೀಕರ ಭೂಕಂಪದಿಂದಾಗಿ ನಿರಾಶ್ರಿತರಾದ ಜನರ ಪರಿಹಾರ ನಿಧಿಗಾಗಿ ಶುಕ್ರವಾರ ಆಯೋಜಿಸಿರುವ ಮಲ್ಟಿ ನೆಟ್ ವರ್ಕ್ ಹೋಪ್ ಫಾರ್ ಹೈಟಿ ನೌ ಸಂಗೀತ ಕಾರ್ಯಕ್ರಮದಲ್ಲಿ ಖ್ಯಾತ ಪಾಪ್ ಗಾಯಕಿ ಮಡೋನಾ ನ್ಯೂಯಾರ್ಕ್ ಹಾಗೂ ಬಿಯೋನ್ಸ್ ಲಂಡನ್‌ನಲ್ಲಿ ಭಾಗವಹಿಸಲಿದ್ದಾರೆ.

ಸಮಾರಂಭದಲ್ಲಿ ಡೆನ್‌ಜೆಲ್ ವಾಷಿಂಗ್ಟನ್‌ನ ಬ್ರಾಡ್ ಎಟ್ ಲಿಯನಾರ್ಡೊ ಡಿಕಾರ್ಪಿಯೊ ಮತ್ತು ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಕೂಡ ಪಾಲ್ಗೊಳ್ಳಲಿದ್ದಾರೆ.

ಕಳೆದ ವಾರ ಕೆರೆಬಿಯನ್ ದ್ವೀಪ ರಾಷ್ಟ್ರವಾದ ಹೈಟಿಯಲ್ಲಿ ಸಂಭವಿಸಿದ ಭೀಕರ ಭೂಕಂಪಕ್ಕೆ 2ಲಕ್ಷ ಮಂದಿ ಬಲಿಯಾಗಿದ್ದು, ಲಕ್ಷಾಂತರ ಜನರು ನಿರಾಶ್ರಿತರಾಗಿದ್ದರು.

ನಿರಾಶ್ರಿತರ ಪರಿಹಾರಕ್ಕಾಗಿ ನಡೆಯುವ 2ಗಂಟೆಯ ಸಂಗೀತ ಕಾರ್ಯಕ್ರಮಗಳನ್ನು ವಿವಿಧ ಚಾನಲ್‌ಗಳು ಪ್ರಸಾರ ಮಾಡಲಿವೆ. ಈ ಎಲ್ಲಾ ಮೂಲಗಳಿಂದ ಬರುವ ಹಣವನ್ನು ಸಂತ್ರಸ್ತರ ಪುನರ್ ವಸತಿಗಾಗಿ ಮೀಸಲಿಡಲಾಗುವುದು ಎಂದು ಮೂಲಗಳು ತಿಳಿಸಿವೆ. ಏತನ್ಮಧ್ಯೆ ಹೈಟಿಗಾಗಿ ಡಿಕಾರ್ಪಿಯೋ ಒಂದು ಮಿಲಿಯನ್ ಡಾಲರ್‌ನಷ್ಟು ಪರಿಹಾರವನ್ನು ನೀಡುವುದಾಗಿ ಘೋಷಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ