ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕುರಾನ್ ಉಕ್ತಿಯುಳ್ಳ ರಿಂಗ್‌ಟೋನ್ ಬಳಕೆ ವಿರುದ್ಧ ಫತ್ವಾ (Quran | Egypt | Quranic tones | religious scriptures)
Bookmark and Share Feedback Print
 
ಮೊಬೈಲ್ ಫೋನ್‌ಗಳಲ್ಲಿ ಕುರಾನ್ ಉಕ್ತಿಗಳನ್ನು ಹೊಂದಿರುವ ರಿಂಗ್‌ಟೋನ್‌ಗಳನ್ನು ಬಳಸುತ್ತಿರುವುದನ್ನು ಮುಸ್ಲಿಂ ಧರ್ಮಗುರುವೊಬ್ಬರು ತೀವ್ರವಾಗಿ ಖಂಡಿಸಿದ್ದು, ಇದು ಧರ್ಮಗ್ರಂಥದ ಪಾವಿತ್ರ್ಯತೆಗೆ ಎಸಗುತ್ತಿರುವ ಅಪಮಾನ ಎಂದು ಕಿಡಿ ಕಾರಿದ್ದಾರೆ.

ಕುರಾನ್‌ ಉಕ್ತಿಗಳನ್ನು ಮೊಬೈಲ್ ರಿಂಗ್‌ಟೋನ್‌ಗಳಾಗಿ ಬಳಸುತ್ತಿರುವುದು ಸರಿಯಲ್ಲ. ಇದರಿಂದ ಕುರಾನ್‌ ಪಾವಿತ್ರ್ಯತೆಯೊಂದಿಗೆ ರಾಜಿ ಮಾಡಿಕೊಂಡಂತಾಗುತ್ತದೆ ಎಂದು ಫತ್ವಾ ಜಾರಿಗೊಳಿಸಿರುವ ಈಜಿಪ್ಟ್‌ನ ಧರ್ಮಗುರು ಶೇಖ್ ಆಲಿ ಜುಮ್ಮಾ ತಿಳಿಸಿದ್ದಾರೆ.

ಈಜಿಪ್ಟ್‌ನ ಸುಮಾರು ಎಂಟು ಕೋಟಿ ಜನರಲ್ಲಿ ನಾಲ್ಕು ಕೋಟಿಗೂ ಹೆಚ್ಚು ಮಂದಿ ಮೊಬೈಲ್ ಬಳಕೆದಾರರಿದ್ದು, ಲಕ್ಷಾಂತರ ಮಂದಿ ಕುರಾನ್ ಉಕ್ತಿಗಳನ್ನು ಹೊಂದಿರುವ ಸಂಗೀತಮಯ ರಿಂಗ್‌ಟೋನ್‌ಗಳನ್ನು ಬಳಸುತ್ತಿದ್ದಾರೆ.

ಅರೇಬಿಕ್ ರಾಷ್ಟ್ರ ಈಜಿಪ್ಟ್‌ನ ಯುವ ಜನತೆ ತಮ್ಮ ಧಾರ್ಮಿಕ ಗುರುತನ್ನು ಮೆರೆಸಲು ಕುರಾನ್ ಸಾಲುಗಳನ್ನು ಹೊಂದಿರುವ ರಿಂಗ್‌ಟೋನ್‌ಗಳನ್ನು ಬಳಸುತ್ತಿದ್ದರೆ, ಪಾಪ್ ಸಂಗೀತದಿಂದ ದೂರ ಉಳಿಯಲು ಮಧ್ಯವಯಸ್ಸಿನ ಮುಸ್ಲಿಮರು ಈ ತಂತ್ರಕ್ಕೆ ಮೊರೆ ಹೋಗಿದ್ದಾರೆ ಎಂದು ವರದಿಗಳು ಹೇಳಿವೆ.

ಇಸ್ಲಾಂ ಪ್ರಮುಖ ಧಾರ್ಮಿಕ ನಾಯಕರೊಬ್ಬರು ಇಂತಹ ಹೇಳಿಕೆಯನ್ನು ನೀಡಿರುವುದರಿಂದ ಮೊಬೈಲ್ ಕಂಪನಿಗಳು ಚಿಂತೆ ಮಾಡುತ್ತಿದ್ದು, ಎಷ್ಟರ ಪ್ರಮಾಣದಲ್ಲಿ ಆದೇಶವನ್ನು ಪಾಲಿಸಲಿವೆ ಮತ್ತು ರಿಂಗ್‌ಟೋನ್ ಗ್ರಾಹಕರು ಯಾವ ರೀತಿ ಸ್ಪಂದಿಸಲಿದ್ದಾರೆ ಎಂಬುವುದನ್ನು ಕಾದು ನೋಡಬೇಕಿದೆ. ಪ್ರಸಕ್ತ ರಿಂಗ್‌ಟೋನ್‌ಗಳನ್ನು ಒದಗಿಸುವ ಮೂಲಕವೇ ಸೇವಾದಾರರು ಮಿಲಿಯನ್‌ಗಟ್ಟಲೆ ಪೌಂಡ್ ಸಂಪಾದನೆ ಮಾಡುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ