ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತ ಜಗತ್ತಿನ ಯಶಸ್ವಿ ರಾಷ್ಟ್ರ: ಬ್ರಿಟನ್ (London | Gordon Brown | British | India)
Bookmark and Share Feedback Print
 
ಸಮೃದ್ಧಿಯತ್ತ ಸಾಗುತ್ತಿರುವ ಭಾರತ ಆಧುನಿಕ ಜಗತ್ತಿನ ಯಶಸ್ವಿ ರಾಷ್ಟ್ರ ಎಂದು ಬ್ರಿಟನ್ ಪ್ರಧಾನಿ ಗೋರ್ಡನ್ ಬ್ರೌನ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಭಾರತದ 60ನೇ ಗಣರಾಜ್ಯೋತ್ಸವ ಅಂಗವಾಗಿ ಏಷ್ಯನ್ ಲೈಫ್ ಮ್ಯಾಗಜಿನ್‌ಗೆ ಬ್ರೌನ್ ಅವರು ಬರೆದಿರುವ ಲೇಖನದಲ್ಲಿ ಈ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅತ್ಯಂತ ಹಳೆಯ ಪ್ರಜಾಪ್ರಭುತ್ವ ರಾಷ್ಟ್ರ ಮತ್ತು ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ನಡುವಿನ ಸಂಬಂಧಗಳು ಐತಿಹಾಸಿಕವಾದದ್ದು ಎಂದು ಅವರು ಲೇಖನದಲ್ಲಿ ತಿಳಿಸಿದ್ದಾರೆ.

ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿ 60ವರ್ಷಗಳಲ್ಲಿ ಮಹತ್ತರವಾದ ಬೆಳವಣಿಗೆಯನ್ನು ಸಾಧಿಸಿದೆ. ಅಲ್ಲದೇ ಭಾರತ ಜಗತ್ತಿನ ಹುಬ್ಬೇರಿಸುವ ಮಟ್ಟಕ್ಕೆ ಬೆಳೆದಿರುವುದಾಗಿ ಅವರು ಬಣ್ಣಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ