ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತೀಯರ ಮೇಲಿನ ದಾಳಿ ಆಸೀಸ್‌ಗೆ ಮೊದಲೇ ಗೊತ್ತಿತ್ತು! (Australian govt | Indian students | overseas students | India)
Bookmark and Share Feedback Print
 
ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ವಿದೇಶಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ದಾಳಿಗಳ ಕುರಿತು ಎರಡು ವರ್ಷಗಳ ಹಿಂದೆಯೇ ನೀಡಿದ್ದ ಎಚ್ಚರಿಕೆಯನ್ನು ಆಸ್ಟ್ರೇಲಿಯಾದ ರಾಜ್ಯ ಮತ್ತು ಕೇಂದ್ರ ಸರಕಾರಗಳು ನಿರ್ಲಕ್ಷಿಸಿವೆ ಎಂದು ಆಸ್ಟ್ರೇಲಿಯಾ ಯುನಿವರ್ಸಿಟಿಗಳ ಒಕ್ಕೂಟ ಆರೋಪಿಸಿದೆ.

ವಿದ್ಯಾರ್ಥಿಗಳ ಸುರಕ್ಷತೆ, ಕಳಪೆ ಗುಣಮಟ್ಟದ ಕಾಲೇಜುಗಳು, ಸಾರ್ವಜನಿಕ ಸಾರಿಗೆ ವಿನಾಯಿತಿ ಕೊರತೆ ಮತ್ತು ವಲಸೆ ಸಮಸ್ಯೆಗಳ ಕುರಿತು ಸರಕಾರಕ್ಕೆ ಎಚ್ಚರಿಕೆ ನೀಡಿರುವ ಹೊರತಾಗಿಯೂ ಅದನ್ನು ನಿರ್ಲಕ್ಷಿಸಲಾಗಿದೆ ಎಂದು ದೇಶದ 39 ವಿಶ್ವವಿದ್ಯಾಲಯಗಳನ್ನು ಪ್ರತಿನಿಧಿಸುವ 'ಯುನಿವರ್ಸಿಟೀಸ್ ಆಸ್ಟ್ರೇಲಿಯಾ' ಎಂಬ ಸಂಘಟನೆ ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

ವಿದ್ಯಾರ್ಥಿಗಳ ಸುರಕ್ಷತೆ ಕುರಿತ ಚೀನಾ ಮತ್ತು ಭಾರತದ ಅಧಿಕಾರಿಗಳ ಎಚ್ಚರಿಕೆಗಳನ್ನು ಆಸ್ಟ್ರೇಲಿಯಾ ಸರಕಾರಗಳಿಗೆ ನಾವು ಹಸ್ತಾಂತರಿಸಿದ್ದೆವು. ಅಲ್ಲದೆ ವಿದ್ಯಾರ್ಥಿಗಳನ್ನು ಕಾಮಧೇನುವಿನಂತೆ ನೋಡಿಕೊಳ್ಳುತ್ತಿರುವುದರಿಂದ ದೇಶದತ್ತ ಆಕರ್ಷಣೆ ಕಡಿಮೆಯಾಗುತ್ತಿರುವುದರ ಕುರಿತೂ ನಾವು ಸರಕಾರಗಳಿಗೆ ಮನದಟ್ಟು ಮಾಡಿದ್ದೆವು ಎಂದು ಯುನಿವರ್ಸಿಟಿ ಒಕ್ಕೂಟ ತಿಳಿಸಿದೆ ಎಂದು 'ದಿ ಏಜ್' ಪತ್ರಿಕೆ ಶನಿವಾರ ವರದಿ ಮಾಡಿದೆ.

ಎರಡು ವರ್ಷಗಳ ಹಿಂದೆಯೇ ಇಂತಹ ಸಂಭಾವ್ಯ ಎಚ್ಚರಿಕೆಗಳನ್ನು ಯುನಿವರ್ಸಿಟಿಗಳ ಒಕ್ಕೂಟ ನೀಡಿತ್ತು ಎಂಬುದನ್ನು ಖಚಿತಪಡಿಸಲು ಉಪ ಪ್ರಧಾನ ಮಂತ್ರಿ ಜೂಲಿಯಾ ಗಿಲ್ಲಾರ್ಡ್ಸ್, ವಲಸೆ ಸಚಿವ ಕ್ರಿಸ್ ಇವನ್ಸ್ ಮತ್ತು ಪ್ರಧಾನಿ ಜಾನ್ ಬ್ರೂಂಬಿಯವರ ಕಚೇರಿಗಳು ನಿರಾಕರಿಸಿವೆ ಎಂದೂ ಪತ್ರಿಕೆ ತಿಳಿಸಿದೆ.

ಅದೇ ಹೊತ್ತಿಗೆ ಸಮಸ್ಯೆಗಳನ್ನು ಪ್ರಾಮುಖ್ಯತೆ ಆದಾರದಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ಪರಿಹಾರ ಮಾಡಲು ಮುಂದಾಗದಿರುವುದರ ಕುರಿತು ತನಗೆ ನಿರಾಸೆಯಾಗಿದೆ ಎಂದು 'ಯುನಿವರ್ಸಿಟೀಸ್ ಆಸ್ಟ್ರೇಲಿಯಾ' ಮುಖ್ಯಸ್ಥ ಗ್ಲೆನ್ ವೀದರ್ಸ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ