ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತ ವಿರುದ್ಧ ಉಗ್ರರ ಬಳಕೆಯನ್ನು ಪಾಕಿಸ್ತಾನ ನಿಲ್ಲಿಸದು (terrorists | India | Pakistan | Obama)
Bookmark and Share Feedback Print
 
ಅಮೆರಿಕಾ ಪಡೆಗಳು ಪಾಕಿಸ್ತಾನದಿಂದ ನಿರ್ಗಮಿಸಿದ ಬಳಿಕ ಭಾರತದ ವಿರುದ್ಧ ಭಯೋತ್ಪಾದಕರನ್ನು ತನ್ನ ಅಸ್ತ್ರವನ್ನಾಗಿ ಮಾಡಿಕೊಳ್ಳದ ನಿರ್ಧಾರಕ್ಕೆ ಪಾಕಿಸ್ತಾನ ಬದ್ಧವಾಗಿಲ್ಲ ಮತ್ತು ಅವರ ವಿರುದ್ಧ ಮಿಲಿಟರಿ ಪಡೆಗಳನ್ನು ಛೂ ಬಿಡುವ ಸಾಧ್ಯತೆಗಳಿಲ್ಲ ಎಂದು ಅಮೆರಿಕಾದ ರಕ್ಷಣಾ ತಜ್ಞರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಇದು ಕೇವಲ ಅವರ ಸಾಮರ್ಥ್ಯದ ಪ್ರಶ್ನೆಯಲ್ಲ. ಇಸ್ಲಾಮಾಬಾದ್‌ನ ತಾಂತ್ರಿಕ ನೈಪುಣ್ಯತೆಯೂ ಹೌದು ಎಂದು ಅವರು ವಿವರಿಸಿದ್ದಾರೆ.

ಉಗ್ರಗಾಮಿಗಳ ವಿರುದ್ಧ ಪಾಕಿಸ್ತಾನವು ಕಠಿಣ ಮಿಲಿಟರಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಒಬಾಮಾ ಆಡಳಿತ ಒತ್ತಡ ಹೇರುತ್ತಿದೆ.

ಅಫಘಾನಿಸ್ತಾನದ ವಿರುದ್ಧದ ಕಾರ್ಯಾಚರಣೆಯನ್ನು ಸುದೀರ್ಘಾವಧಿಗಳ ಕಾಲ ಮುಂದುವರಿಸುವ ಇಚ್ಛೆ ಅಮೆರಿಕಾ ಮತ್ತು ಮೈತ್ರಿಕೂಟಗಳಿಗಿಲ್ಲ ಎನ್ನುವುದು ಪಾಕಿಸ್ತಾನದ ಅರಿವಿನಲ್ಲಿದೆ. ಅಂದರೆ ಇಸ್ಲಾಮಾಬಾದ್ ದೃಷ್ಟಿಕೋನದ ಪ್ರಕಾರ ಅಫಘಾನಿಸ್ತಾನದಲ್ಲಿ ಭಯೋತ್ಪಾದಕರ ವಿರುದ್ಧದ ತನ್ನ ಯುದ್ಧವೂ ಮುಂದುವರಿಯುವುದಿಲ್ಲ ಎಂದು ಅಮೆರಿಕಾ ರಕ್ಷಣಾ ತಜ್ಞರು ಹೇಳಿದ್ದಾರೆ.

ಅಲ್ಲದೆ ಅಫಘಾನಿಸ್ತಾನದಲ್ಲಿ ಹೋರಾಡುತ್ತಿರುವ ತಾಲಿಬಾನ್ ಉಗ್ರರು ಪಾಕಿಸ್ತಾನಕ್ಕೆ ಒಂದು ಅಸ್ತ್ರವಿದ್ದಂತೆ. ಕಳೆದ ಕೆಲವು ವರ್ಷಗಳಿಂದ ಭಾರತ ವಿರೋಧಿ ಭಾವನೆ ಹೆಚ್ಚಾಗುತ್ತಿರುವುದನ್ನು ಗುರುತಿಸಿರುವ ಪಾಕಿಸ್ತಾನ ಅವರನ್ನು ಭಾರತದ ವಿರುದ್ಧದ ಹೋರಾಟಕ್ಕೆ ಬಳಸಿಕೊಳ್ಳಬಹುದು ಎಂದು ಭೀತಿ ವ್ಯಕ್ತಪಡಿಸಿದೆ.

ಮೈತ್ರಿಪಡೆಗಳು ಪಾಕಿಸ್ತಾನದಿಂದ ಹೊರಟು ಹೋದ ಬಳಿಕ ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅಮೆರಿಕಾ ಹೇಳಿದರೂ ಅದನ್ನು ಪಾಕಿಸ್ತಾನ ಗಣನೆಗೆ ತೆಗೆದುಕೊಳ್ಳುವ ಸಾಧ್ಯತೆಗಳು ಕಡಿಮೆ ಎಂದು ಹೇಳಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ