ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬಂಡುಕೋರರ ವಿರುದ್ಧ ಭಾರತ-ಮಯನ್ಮಾರ್ ಕಾರ್ಯಾಚರಣೆ (India | Myanmar | ULFA | Paresh Baruah)
Bookmark and Share Feedback Print
 
ಉಲ್ಫಾ ಕಮಾಂಡರ್ ಪರೇಶ್ ಬರುವಾನನ್ನು ಸೆರೆ ಹಿಡಿಯಲು ಮತ್ತು ಈಶಾನ್ಯದ ಬಂಡುಕೋರರನ್ನು ಸದೆ ಬಡಿಯಲು ಭಾರತದೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಲು ಮಯನ್ಮಾರ್ ಮಿಲಿಟರಿ ಆಡಳಿತ ಯೋಜನೆ ರೂಪಿಸಿದೆ.

ಮಯನ್ಮಾರ್ ರಾಜಧಾನಿ ನೇ ಪೇ ತಾವ್‌ನಲ್ಲಿ ಗುರುವಾರ ಮುಕ್ತಾಯ ಕಂಡ ಎರಡು ದೇಶಗಳ ನಡುವಿನ ಗೃಹ ಕಾರ್ಯದರ್ಶಿಗಳ ಮಟ್ಟದ ಮೂರು ದಿನಗಳ ಮಾತುಕತೆಯಲ್ಲಿ ನವದೆಹಲಿಗೆ ಈ ಭರವಸೆಯನ್ನು ನೀಡಲಾಗಿದೆ.

ಮುಂದಿನ ಎರಡು-ಮೂರು ತಿಂಗಳುಗಳ ಅವಧಿಯಲ್ಲಿ ಸಂಬಂಧಪಟ್ಟ ಪ್ರದೇಶಗಳಲ್ಲಿ ಭಾರತ ಮತ್ತು ಮಯನ್ಮಾರ್ ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಲಿವೆ. ಒಂದು ಕಡೆಯಿಂದ ಕಾರ್ಯಾಚರಣೆ ಆರಂಭವಾದಾಗ ಯಾವುದೇ ಕಾರಣಕ್ಕೂ ಉಗ್ರರು ಮತ್ತೊಂದು ಕಡೆ ಪರಾರಿಯಾಗಬಾರದು ಎಂಬ ಕಾರಣಕ್ಕಾಗಿ ಎರಡೂ ಕಡೆ ಕಾರ್ಯಾಚರಣೆ ನಡೆಸುವ ಉದ್ದೇಶ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ಹೇಳಿವೆ.

ಅರುಣಾಚಲ ಪ್ರದೇಶ, ನಾಗಾಲೆಂಡ್, ಮಣಿಪುರ ಮತ್ತು ಮಿಜೋರಾಂ ಪ್ರದೇಶಗಳ ಸುಮಾರು 1,650 ಕಿಲೋ ಮೀಟರ್ ಭಾರತ-ಮಯನ್ಮಾರ್ ಗಡಿ ಭಾಗದಲ್ಲಿ ಎರಡೂ ಕಡೆ ಈಶಾನ್ಯದ ಎನ್‌ಎಸ್‌ಸಿಎನ್ ಮತ್ತು ಉಲ್ಫಾ ಮುಂತಾದ ಪ್ರಮುಖ ಬಂಡುಕೋರ ಸಂಘಟನೆಗಳ ಕನಿಷ್ಠ ಎರಡು ಡಜನ್ ಕ್ಯಾಂಪ್‌ಗಳು ಮತ್ತು ತರಬೇತಿ ಕೇಂದ್ರಗಳಿವೆ.

ಉಲ್ಫಾ ಮುಖ್ಯಸ್ಥ ಪರೇಶ್ ಮಯನ್ಮಾರ್‌ನ ಕಚಿನ್ ಪ್ರದೇಶದಲ್ಲಿ ಅಡಗಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಪರೇಶ್ ಮಯನ್ಮಾರ್‌ನಲ್ಲಿ ಅಡಗಿಕೊಂಡಿದ್ದಾನೆ ಎಂಬ ಮಾಹಿತಿಯನ್ನು ನಾವು ಅವರಿಗೆ ತಿಳಿಸಿದ್ದೇವೆ. ನಮ್ಮ ಪ್ರಾಂತ್ಯದಲ್ಲಿ ಆತನು ಇದ್ದಲ್ಲಿ ಖಂಡಿತಾ ಬಂಧಿಸುವುದಾಗಿ ಅವರು ತಿಳಿಸಿದ್ದಾರೆ ಎಂದು ಭಾರತೀಯ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ