ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅರಬೇತರ ಮಹಿಳಾ ಬಾಂಬರುಗಳಿಂದ ಆತ್ಮಹತ್ಯಾ ದಾಳಿ ಸಂಚು (Al-Qaida | non-Arab women suicide bomber | Yemen | terrorism)
Bookmark and Share Feedback Print
 
ಪಾಶ್ಚಿಮಾತ್ಯ ಗುರಿಗಳ ದಾಳಿಗಳಿಗೆ ನೂತನ ತಂತ್ರಗಳನ್ನು ಅಳವಡಿಸಿಕೊಳ್ಳುತ್ತಿರುವ ಯೆಮನ್‌ನ ಅಲ್‌ಖೈದಾ ಸಂಘಟನೆಯು ಅರಬ್ ಹೊರತುಪಡಿಸಿದ ಮಹಿಳಾ ಆತ್ಮಹತ್ಯಾ ಬಾಂಬರುಗಳ ತುಕುಡಿಯೊಂದನ್ನು ಹುಟ್ಟು ಹಾಕಿದೆ ಎಂದು ಉಗ್ರನಿಗ್ರಹ ತಜ್ಞರು ತಿಳಿಸಿದ್ದಾರೆ.

ಪಾಶ್ಚಾತ್ಯ ಮಹಿಳೆಯನ್ನು ಬಳಸಿ ಆತ್ಮಹತ್ಯಾ ದಾಳಿಗಳನ್ನು ನಡೆಸಲು ಕೊನೆಗೂ ಅಲ್‌ಖೈದಾ ಮುಂದಾದಲ್ಲಿ ಅದನ್ನು ತಪ್ಪಿಸುವುದು ಕಷ್ಟಸಾಧ್ಯ ಎಂದು ಹೇಳಲಾಗಿದೆ.

ವಿಮಾನಯಾನ ಸಂಸ್ಥೆಗಳು, ಎಲ್ಲಾ ವಿಧದ ಸಾರಿಗೆ ವ್ಯವಸ್ಥೆಗಳು, ಕ್ರೀಡಾಂಗಣಗಳು, ಬಂದರುಗಳು ಮತ್ತು ವಿದ್ಯುತ್ ಉತ್ಪಾದನಾ ಕೇಂದ್ರಗಳನ್ನು ಅವರು ಗುರಿಯಾಗಿಟ್ಟುಕೊಂಡಿದ್ದಾರೆ ಎಂದು ಸುರಕ್ಷತಾ ಅಧಿಕಾರಿಗಳು ಹೇಳಿದ್ದಾರೆಂದು 'ಡೈಲೀ ಟೆಲಿಗ್ರಾಫ್' ವರದಿ ಮಾಡಿದೆ.

ಈ ದಾಳಿಯಲ್ಲಿ ಪಾಲ್ಗೊಳ್ಳುವ ಮಹಿಳೆ ಬಹುಶಃ ಅರಬ್ ಮುಖಚಹರೆ ಹೊಂದಿರುವುದಿಲ್ಲ. ಅಲ್ಲದೆ ಪಾಶ್ಚಿಮಾತ್ಯ ಪಾಸ್‌ಪೋರ್ಟ್ ಹೊಂದಿರುತ್ತಾಳೆ. ಅವರನ್ನು ಯೆಮನ್ ಭಯೋತ್ಪಾದಕ ಸಂಘಟನೆಗಳು ತರಬೇತುಗೊಳಿಸುತ್ತಿವೆ ಎಂದು ವಿವರಣೆ ನೀಡಲಾಗಿದೆ.

ಈ ಹಿನ್ನೆಲೆಯಲ್ಲಿ ದೇಶ ಮೇಲೆ ನಡೆಯಬಹುದಾದ ಸಂಭಾವ್ಯ ದಾಳಿಯನ್ನು ತಪ್ಪಿಸಲು ಮಹಿಳಾ ಆತ್ಮಹತ್ಯಾ ಬಾಂಬರುಗಳತ್ತ ಗಮನ ಹರಿಸುವಂತೆ ಅಮೆರಿಕಾ ಕಾನೂನು ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಡೆಟ್ರಾಯಿಟ್‌ನಲ್ಲಿ ಅಮೆರಿಕಾ ವಿಮಾನವನ್ನು ಒಳಉಡುಪಿನಲ್ಲಿ ಬಾಂಬ್ ಇಟ್ಟುಕೊಂಡು ಸ್ಫೋಟಗೊಳಿಸಲು ಯತ್ನಿಸಿದ್ದ ಆರೋಪಿ ಉಮರ್ ಫಾರೂಕ್ ಅಬ್ದುಲ್ಲಾ ಮುತಾಲಬ್‌‌ನನ್ನು ಕಳುಹಿಸಿದ್ದ ಅರೇಬಿಯನ್ ಪರ್ಯಾಯ ದ್ವೀಪದ ಅಲ್‌ಖೈದಾದ ಜತೆ ಕನಿಷ್ಠ ಇಬ್ಬರು ಈಗ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮಹಿಳಾ ಬಾಂಬರುಗಳ ಮೂಲಕ ದಾಳಿ ಯತ್ನ ನಡೆಸಲಾಗುತ್ತಿದೆ ಎಂಬ ಈ ಹಿಂದಿನ ಮಾಹಿತಿಯನ್ನು ಇನ್ನಷ್ಟು ದೃಢಪಡಿಸಿರುವ ಇತ್ತೀಚಿನ ಬೆಳವಣಿಗೆಯು, ಪಾಶ್ಚಿಮಾತ್ಯರನ್ನೇ ಕುಕೃತ್ಯಗಳಿಗೆ ಬಳಸಿಕೊಳ್ಳುವ ಮೂಲಕ ಭದ್ರತೆಯ ಹದ್ದಿನ ಕಣ್ಣುಗಳಿಗೆ ಮಣ್ಣೆರಚಲು ಭಯೋತ್ಪಾದಕ ಸಂಘಟನೆಗಳು ಯೋಜನೆ ರೂಪಿಸುತ್ತಿವೆ ಎಂಬುದು ಬಯಲಿಗೆ ಬಂದಿದೆ.
ಸಂಬಂಧಿತ ಮಾಹಿತಿ ಹುಡುಕಿ