ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಇಥಿಯೋಪಿಯನ್ ವಿಮಾನ ಪತನ; 85 ಪ್ರಯಾಣಿಕರ ಸಾವು? (Ethiopian airliner | Beirut | Mediterranean Sea | flight crash)
Bookmark and Share Feedback Print
 
ಬ್ಯೂರಟ್ ವಿಮಾನ ನಿಲ್ದಾಣದಿಂದ ಸೋಮವಾರ ಮುಂಜಾನೆ ಹೊರಟ ಕೆಲವೇ ಗಂಟೆಗಳಲ್ಲಿ 85 ಪ್ರಯಾಣಿಕರನ್ನು ಹೊತ್ತಿದ್ದ ಇಥಿಯೋಪಿಯನ್ ವಿಮಾನವೊಂದು ಮೆಡಿಟರೇನಿಯನ್ ಸಾಗರಕ್ಕೆ ಅಪ್ಪಳಿಸಿದೆ.

ಸೋಮವಾರ ಮುಂಜಾನೆ ವಿಮಾನ ಹೊರಟ ಕೆಲವೇ ಹೊತ್ತಿನಲ್ಲಿ ರಾಡಾರ್ ಪರದೆಯಿಂದ ವಿಮಾನ ನಾಪತ್ತೆಯಾಗಿತ್ತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಆರಂಭದಲ್ಲಿ ಸಾಗರ ಪ್ರದೇಶದಲ್ಲಿ ವಿಮಾನ ಕಾಣೆಯಾಗಿದೆ ಎಂದು ಮಾತ್ರ ಹೇಳಲಾಗುತ್ತಿತ್ತು. ಆದರೆ ಹಲವರು ವಿಮಾನ ಬೆಂಕಿ ಹತ್ತಿ ಉರಿಯುತ್ತಿರುವುದನ್ನು ಕರಾವಳಿ ಪ್ರದೇಶದ ನಿವಾಸಿಗಳು ನೋಡಿದ್ದಾರೆ ಎಂದು ಪತ್ರಿಕೆಯೊಂದು ಹೇಳಿದೆ.

ವಿಮಾನದಲ್ಲಿ 50 ಲೆಬನಾನ್ ಪ್ರಜೆಗಳಿದ್ದರು. ಉಳಿದವರು ಇಥಿಯೋಪಿಯನ್ ನಾಗರಿಕರು ಎಂದು ಹೇಳಲಾಗಿದೆ. ಸಾವು-ನೋವುಗಳ ಮಾಹಿತಿ ಇನ್ನಷ್ಟೇ ಬರಬೇಕಿದೆ ಎಂದು ಮೂಲಗಳು ತಿಳಿಸಿವೆ.

ಬ್ಯೂರಟ್‌ನಿಂದ ಅಡ್ಡೀಸ್ ಅಬಾಬಾಕ್ಕೆ ಹೊರಟಿದ್ದ ವಿಮಾನ ಬೋಯಿಂಗ್ 737 ಎಂದು ಗುರುತಿಸಲಾಗಿದ್ದು, ಮುಂಜಾನೆ 2.10ಕ್ಕೆ ಬ್ಯೂರಟ್‌ನಿಂದ ಹೊರಟು 7.50ಕ್ಕೆ ಅಬಾಬಾ ತಲುಪಬೇಕಿತ್ತು.
ಸಂಬಂಧಿತ ಮಾಹಿತಿ ಹುಡುಕಿ