ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನವೆಂಬರ್‌ನಲ್ಲಿ ಸೂ ಕಿ ಬಂಧಮುಕ್ತ ಸಾಧ್ಯತೆ: ಮ್ಯಾನ್ಮಾರ್ (Yangon | Aung San Suu Kyi | Myanmar | Kyaukpadaung,)
Bookmark and Share Feedback Print
 
ದೀರ್ಘಕಾಲದಿಂದ ಗೃಹ ಬಂಧನದಲ್ಲಿರುವ ಮ್ಯಾನ್ಮಾರ್ ವಿರೋಧ ಪಕ್ಷದ ನಾಯಕಿ ಆಂಗ್ ಸಾನ್ ಸೂ ಕಿ ಅವರನ್ನು ನವೆಂಬರ್‌ನಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆ ಇರುವುದಾಗಿ ಸರ್ಕಾರಿ ಸಚಿವರೊಬ್ಬರು ತಿಳಿಸಿದ್ದಾರೆ.

ಜನವರಿ 21ರಂದು ನಡೆದ ಸಭೆಯಲ್ಲಿ ಸೂ ಕಿ ಅವರನ್ನು ಬಹುತೇಕ ನವೆಂಬರ್‌ನಲ್ಲಿ ಬಂಧಮುಕ್ತಗೊಳಿಸಲಾಗುವುದು ಎಂದು ಗೃಹ ಸಚಿವ ಮೇಜರ್ ಜನರಲ್ ಮೌಂಗ್ ವೋ ಹೇಳಿದ್ದಾರೆ. ಆಂಗ್ ಸಾನ್ ಸೂ ಕಿ ಅವರ ಬಿಡುಗಡೆಗಾಗಿ ಈಗಾಗಲೇ ಹಲವಾರು ರಾಷ್ಟ್ರಗಳು ಆಡಳಿತಾರೂಢ ಜುಂಟಾ ಸರ್ಕಾರದ ಮೇಲೆ ಒತ್ತಡ ಹೇರಿದ್ದವು.

ಇಬ್ಬರು ವ್ಯಕ್ತಿಗಳ ಜೊತೆ ನಡೆಸಿದ ಈ ಮಾತುಕತೆಯಲ್ಲಿ ಭಾಗವಹಿಸಿದ ಇಬ್ಬರು ವ್ಯಕ್ತಿಗಳು ಯಾರೆಂಬುದು ಮಾತ್ರ ತಿಳಿದುಬಂದಿಲ್ಲ. ಸೂ ಕಿ ತನ್ನನ್ನು ಶೀಘ್ರವೇ ಬಂಧಮುಕ್ತಗೊಳಿಸಬೇಕೆಂದು ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಮಿಲಿಟರಿ ಆಡಳಿತದ ಜುಂಟಾ ಸರ್ಕಾರ ಸೂ ಕಿ ಬಿಡುಗಡೆಗೆ ಮೀನಮೇಷ ಎಣಿಸುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ