ಆಂತರಿಕ ಕಚ್ಚಾಟದಿಂದ ಕಳೆದ ವರ್ಷ ದಂಗೆ ಎದ್ದು ಸುಮಾರು 74ಆರ್ಮಿ ಅಧಿಕಾರಿಗಳ ಹತ್ಯೆಗೆ ಕಾರಣವಾದ ಬಾಂಗ್ಲಾದೇಶ್ ಗಡಿಭದ್ರತಾ ಪಡೆಯ ಸಿಬ್ಬಂದಿಗಳಿಗೆ ಬಾಂಗ್ಲಾ ಕೋರ್ಟ್ ಶಿಕ್ಷೆ ವಿಧಿಸಿ ಸೋಮವಾರ ತೀರ್ಪು ನೀಡಿದೆ.
ಬಾಂಗ್ಲಾ ಗಡಿಭದ್ರತಾ ಪಡೆಯಾದ ಬಾಂಗ್ಲಾದೇಶ್ ರೈಫಲ್ಸ್ ಸಿಬ್ಬಂದಿಗಳು ತಾರತಮ್ಯ ನೀತಿ ಮತ್ತು ಸಮಾನ ಶ್ರೇಣಿಯ ವೇತನ ನೀಡಬೇಕೆಂದು ಬಂಡಾಯದ ಕಹಳೆ ಮೊಳಗಿಸಿ ನಡೆಸಿದ ದಂಗೆಯಲ್ಲಿ ಸುಮಾರು 74 ಮಿಲಿಟರಿ ಅಧಿಕಾರಿಗಳು ಹತ್ಯೆಯಾಗಿದ್ದರು.
2009ರ ಫೆಬ್ರುವರಿಯಲ್ಲಿ ಎರಡು ದಿನಗಳ ಕಾಲ ಗಡಿಭದ್ರತಾ ಪಡೆ ನಡೆಸಿದ ದಂಗೆ ಬಾಂಗ್ಲದಾದ್ಯಂತ ಸಾಕಷ್ಟು ಅನಾಹುತಕ್ಕೆ ಎಡೆಮಾಡಿಕೊಟ್ಟಿತ್ತು. ಇದರಲ್ಲಿ 57ಮಿಲಿಟರಿ ಅಧಿಕಾರಿಗಳು ಸಾವನ್ನಪ್ಪಿದ್ದರು.
ಬಾಂಗ್ಲಾದ ಆಗ್ನೇಯ ಜಿಲ್ಲೆಯ ವಿಶೇಷ ನ್ಯಾಯಾಲಯದಲ್ಲಿ ದಂಗೆಯ ಪ್ರಕರಣದ ಕುರಿತು ವಿಚಾರಣೆ ನಡೆಸಿ, 56ಮಂದಿ ಸಿಬ್ಬಂದಿಗಳಿಗೆ ನಾಲ್ಕು ತಿಂಗಳಿನಿಂದ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಇದರಲ್ಲಿ 32ಮಂದಿ ನಾಲ್ಕು ತಿಂಗಳಿನಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆಗೆ ಒಳಗಾಗಿದ್ದಾರೆ ಎಂದು ನ್ಯಾಯಾಧೀಶ ಮೇಜರ್ ಜನರಲ್ ಮೈನುಲ್ ಇಸ್ಲಾಮ್ ತಿಳಿಸಿದ್ದಾರೆ. ನಾಲ್ಕು ಮಂದಿಯನ್ನು ಖುಲಾಸೆಗೊಳಿಸಲಾಗಿದೆ.