ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪ್ರೇಮಿಯ 130 ಬಾರಿ ಚುಚ್ಚಿ ಕೊಂದವನಿಗೆ 23 ವರ್ಷ ಜೈಲು! (British woman | ex-boyfriend | Katie Cullen | Iman Ghaefelipour)
Bookmark and Share Feedback Print
 
ತನ್ನ ಮಾಜಿ ಬ್ರಿಟೀಶ್ ಪ್ರಿಯತಮೆಯನ್ನು 130 ಬಾರಿ ಚೂರಿಯಿಂದ ಚುಚ್ಚಿ, ಬಲಗಣ್ಣನ್ನು ಕಿತ್ತು ಕೊಲೆ ಮಾಡಿದ್ದ ವಿಕೃತ ಪ್ರೇಮಿಯೊಬ್ಬನಿಗೆ ಇಂಗ್ಲೆಂಡ್‌ನಲ್ಲಿ 23 ವರ್ಷಗಳ ಸುದೀರ್ಘ ಜೈಲು ಶಿಕ್ಷೆ ವಿಧಿಸಲಾಗಿದೆ.

35ರ ಹರೆಯದ ನರ್ಸ್‌ ಕೇಟ್ ಕಲ್ಲೆನ್ ಎಂಬಾಕೆಯನ್ನು ಚೆಶೈರ್‌ ಜಿಲ್ಲೆಯ 28ರ ಹರೆಯದ ಇಮಾಮ್ ಸಯೀದ್ ಘಾಲಿಫೆಲಿಪರ್ ಎಂಬಾತ ಮುಖ ಮತ್ತು ಕತ್ತಿಗೆ ಚುಚ್ಚಿ ಕೊಲೆ ಮಾಡಿದ್ದ ಎಂದು 'ಡೈಲಿ ಮೇಲ್' ವರದಿ ಮಾಡಿದೆ.

ಕಲ್ಲೆನ್ ಬ್ಯಾಂಕ್ ಖಾತೆಯಿಂದ 3,000 ಪೌಂಡ್ ಹಣವನ್ನು (ಸುಮಾರು ಎರಡು ಲಕ್ಷ ರೂಪಾಯಿ) ಮೋಸದಿಂದ ಕಳ್ಳತನ ಮಾಡಿದ್ದಕ್ಕೆ ಇಮಾಮ್ ಮೇಲೆ ಪ್ರಿಯತಮೆ ಕೋಪಗೊಂಡು ನಿರ್ಲಕ್ಷಿಸಿದ್ದಳು. ಬಳಿಕ ಆಕೆಯನ್ನು ಒಲಿಸಲು ಯತ್ನಿಸಿದ್ದರೂ, ಅದು ವಿಫಲವಾಗಿತ್ತು. ಪರಿಣಾಮ ತೀವ್ರ ಪ್ರಕೋಪಕ್ಕೆ ಹೋಗಿ 130ಕ್ಕೂ ಹೆಚ್ಚು ಬಾರಿ ಚುಚ್ಚಿ ಕೊಲೆ ಮಾಡಿದ್ದಾನೆ.

ಕೊಲೆ ಮಾಡಿದ ನಂತರ ಅಷ್ಟಕ್ಕೇ ತನ್ನ ಆಟೋಪವನ್ನು ನಿಲ್ಲಿಸದ ವಿಕೃತ ಇಮಾಮ್, ಆಕೆಯ ಬಲಗಣ್ಣನ್ನು ಚೂರಿಯಿಂದ ಕಿತ್ತು ಹೊರಗೆ ತೆಗೆದಿದ್ದ. ಅಲ್ಲದೆ ಆಕೆಯ ಬಲಗೈಯನ್ನು ತನ್ನ ಕೈಯಲ್ಲಿದ್ದ ಚೂರಿಯಿಂದ ತುಂಡರಿಸಲು ಕೂಡ ಯತ್ನಿಸಿದ್ದ.

ಇಮಾಮ್‌ನನ್ನು ಬಂಧಿಸಿ ಮ್ಯಾಂಚೆಸ್ಟರ್ ಕ್ರೌನ್ ನ್ಯಾಯಾಲಯದಲ್ಲಿ ಹಾಜರುಪಡಿಸಿದ ಬಳಿಕ ತಪ್ಪೊಪ್ಪಿಗೆ ನೀಡಿದ್ದು, ಆತನಿಗೆ ಕನಿಷ್ಠ 23 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಲಿವರ್‌ಪೂಲ್‌ನ ಎದೆ ಮತ್ತು ಹೃದಯ ಸಮಸ್ಯೆಗಳ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಕಲ್ಲೆನ್, 2008ರಲ್ಲಿ ಇಮಾಮ್ ಜತೆ ಡೇಟಿಂಗ್ ಶುರುವಿಟ್ಟುಕೊಂಡಿದ್ದಳು. ನಂತರದ ದಿನಗಳಲ್ಲಿ ಇವರಿಬ್ಬರೂ ತೀರಾ ಹತ್ತಿರವಾಗಿದ್ದರು. ಆದರೆ ಪ್ರಿಯಕರ ತನ್ನದೇ ಖಾತೆಯಿಂದ ಹಣ ಕದಿಯುತ್ತಿರುವುದನ್ನು ಪತ್ತೆ ಹಚ್ಚಿದ ಕಲ್ಲೆನ್ ಆತನಿಂದ ದೂರವಾಗಲು ನಿರ್ಧರಿಸಿದ್ದಳು.
ಸಂಬಂಧಿತ ಮಾಹಿತಿ ಹುಡುಕಿ