ಕೋರ್ಟ್ ಮಾರ್ಷಲ್ ಮುಂದಕ್ಕೆ
ಕೊಲಂಬೊ: ಅಕ್ರಮ ರಕ್ಷಣಾ ಒಪ್ಪಂದ ಸೇರಿದಂತೆ ಲಂಕಾ ಸರ್ಕಾರದ ವಜಾ ಸಂಚಿನ ಆರೋಪ ಎದುರಿಸುತ್ತಿರುವ ಶ್ರೀಲಂಕಾದ ಬಂಧಿತ ನಿವೃತ್ತ ಮಿಲಿಟರಿ ವರಿಷ್ಠ ಸರತ್ ಫೋನ್ಸೆಕಾ ವಿರುದ್ಧದ ಕೋರ್ಟ್ ಮಾರ್ಷಲ್ ಅನ್ನು ಏಪ್ರಿಲ್ 22ರಂದು ನೂತನ ಸಂಸತ್ ಉದ್ಘಾಟನೆಯ ನಂತರವೇ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫೋನ್ಸೆಕಾ ಅವರ ಕೋರ್ಟ್ ಮಾರ್ಷಲ್ ಅನ್ನು ಮೇ 4ಕ್ಕೆ ಮುಂದೂಡಲಾಗಿದೆ.