ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸೇನೆ ವಾಪಸ್ ನಂತ್ರವೇ ಅಮೆರಿಕದ ಜೊತೆ ಮಾತು: ತಾಲಿಬಾನ್ (Taliban | Afghanistan | Islamabad | peace talks | US)
Bookmark and Share Feedback Print
 
ಅಮೆರಿಕದೊಂದಿಗೆ ತಾಲಿಬಾನ್ ಶಾಂತಿ ಮಾತುಕತೆಗೆ ಮುಂದಾಗಲಿದೆ ಎಂಬ ಮಾಧ್ಯಮಗಳ ವರದಿಯನ್ನು ಸಾರಸಗಟಾಗಿ ತಳ್ಳಿಹಾಕಿರುವ ಅಫ್ಘಾನಿಸ್ತಾನ್ ತಾಲಿಬಾನ್, ದೇಶದಲ್ಲಿರುವ ಮಿಲಿಟರಿ ಪಡೆಯನ್ನು ಷರತ್ತು ರಹಿತವಾಗಿ ವಾಪಸ್ ಕರೆಯಿಸಿಕೊಂಡ ಬಳಿಕವೇ ಶಾಂತಿ ಮಾತುಕತೆಗೆ ಮುಂದಾಗುವುದಾಗಿ ತಾಲಿಬಾನ್ ಸ್ಪಷ್ಟಪಡಿಸಿದೆ.

ಅಫ್ಘಾನಿಸ್ತಾನದಿಂದ ಸಂಪೂರ್ಣವಾಗಿ ವಿದೇಶಿ ಸೈನಿಕರನ್ನು ವಾಪಸು ಕರೆಯಿಸಿಕೊಳ್ಳುವವರೆಗೆ ಅಮೆರಿಕದ ಜೊತೆಗೆ ಶಾಂತಿ ಮಾತುಕತೆಗೆ ಮುಂದಾಗುವ ಪ್ರಶ್ನೆಯೇ ಇಲ್ಲ ಎಂದು ತಾಲಿಬಾನ್ ಉಗ್ರಗಾಮಿ ಸಂಘಟನೆ ಮಂಗಳವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.

ದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಮಿಲಿಟರಿ ಪಡೆಯನ್ನು ಷರತ್ತು ರಹಿತವಾಗಿ ಮೊದಲು ವಾಪಸ್ ಕರೆಯಿಸಿಕೊಳ್ಳಲಿ. ನಂತರ ಮುಂದಿನ ಮಾತುಕತೆ ಎಂದು ತಾಲಿಬಾನ್ ಅಮೆರಿಕಕ್ಕೆ ತಿರುಗೇಟು ನೀಡಿದೆ.ಅಮೆರಿಕದ ಮಿಲಿಟರಿ ಪಡೆ ಅಫ್ಘಾನಿಸ್ತಾನ ನೆಲದಲ್ಲಿ ಕಾರ್ಯಾಚರಿಸುತ್ತಿರುವುದರಿಂದ ದೇಶದ ಅಸ್ಥಿರತೆಗೆ ಕಾರಣವಾಗಿದೆ ಎಂದು ತಾಲಿಬಾನ್ ದೂರಿದೆ.
ಸಂಬಂಧಿತ ಮಾಹಿತಿ ಹುಡುಕಿ