ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹಣ ಕೊಡದಿದ್ರೆ ಐಎಸ್ಐ ಅಧಿಕಾರಿಗಳನ್ನ ಕೊಲ್ತೇವೆ: ಉಗ್ರರು (ISI officers | journalist, Pakistan | Mullah Abdul | British)
Bookmark and Share Feedback Print
 
ಐಎಸ್‌ಐನ ಇಬ್ಬರು ನಿವೃತ್ತ ಅಧಿಕಾರಿ ಹಾಗೂ ಪಾಕಿಸ್ತಾನಿ ಮೂಲದ ಬ್ರಿಟಿಷ್ ಪತ್ರಕರ್ತನೊಬ್ಬನನ್ನು ಅಪಹರಿಸಿರುವ ತಾಲಿಬಾನ್ ಪರ ಉಗ್ರಗಾಮಿ ಸಂಘಟನೆಯೊಂದು, ಇನ್ನು ಹತ್ತು ದಿನಗಳೊಳಗೆ ತಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ ಅವರನ್ನು ಹತ್ಯೆಗೈಯುವುದಾಗಿ ಬೆದರಿಕೆಯ ಸಂದೇಶ ಕಳುಹಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಐಎಸ್ಐನ ಮಾಜಿ ಅಧಿಕಾರಿಗಳಾದ ಕರ್ನಲ್ ಇಮಾಮ್ ಅಲಿಯಾಸ್ ಸುಲ್ತಾನ್ ಅಮಿರ್ ತಾರಾರ್ ಹಾಗೂ ಖಾಲೀದ್ ಖ್ವಾಜಾ ಮತ್ತು ಪತ್ರಕರ್ತ ಅಸಾದ್ ಖುರೇಷಿಯನ್ನು ಕೆಲ ದಿನಗಳ ಹಿಂದೆ ತಾಲಿಬಾನ್ ಪರ ಉಗ್ರಗಾಮಿ ಸಂಘಟನೆ ಎಂದು ಹೇಳಿಕೊಂಡಿರುವ ಏಷ್ಯನ್ ಟೈಗರ್ಸ್ ಅವರನ್ನು ಅಪಹರಿಸಿತ್ತು.

ಇದೀಗ ಪಾಕಿಸ್ತಾನದ ಮಾಧ್ಯಮಗಳಿಗೆ ಕಳುಹಿಸಿರುವ ಇ-ಮೇಲ್ ಸಂದೇಶದಲ್ಲಿ, ಅಫ್ಘಾನ್ ತಾಲಿಬಾನ್ ಪ್ರಮುಖ ಮುಖಂಡರಾಗಿರುವ ಮುಲ್ಲಾ ಅಬ್ದುಲ್ ಗನಿ ಬರ್ದಾರ್ , ಮುಲ್ಲಾ ಮನ್ಸೂರ್ ದಾದುಲ್ಲಾ ಮತ್ತು ಮೌಲ್ವಿ ಕಬೀರ್‌ನನ್ನು ಶೀಘ್ರವೇ ಬಿಡುಗಡೆ ಮಾಡಬೇಕೆಂದು ಬೇಡಿಕೆ ಇಟ್ಟಿದೆ.

ಅಲ್ಲದೇ, ಖುರೇಷಿ ಕುಟುಂಬ ಹತ್ತು ಮಿಲಿಯನ್ ಡಾಲರ್‌ ಒತ್ತೆ ಹಣವನ್ನು ಹತ್ತು ದಿನದೊಳಗೆ ತಲುಪಿಸುವಂತೆ ಬೇಡಿಕೆ ಇಟ್ಟಿದೆ. ಅದೇ ರೀತಿ ತಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ ಒತ್ತೆಯಾಳುಗಳನ್ನು ಹತ್ಯೆಗೈಯುವುದಾಗಿ ಏಷ್ಯನ್ ಟೈಗರ್ಸ್ ಉಗ್ರಗಾಮಿ ಸಂಘಟನೆ ವಿಡಿಯೋ ಸಂದೇಶದಲ್ಲಿಯೂ ಬೆದರಿಕೆ ಒಡ್ಡಿದೆ.

ಐಎಸ್ಐನ ಮಾಜಿ ಅಧಿಕಾರಿಗಳಿಬ್ಬರು ಕೂಡ ತಮ್ಮ ವಶದಲ್ಲಿದ್ದು, ಅವರು ಇಸ್ಲಾಮ್ ಮತ್ತು ಮುಸ್ಲಿಮರ ಶತ್ರುಗಳಾಗಿದ್ದಾರೆ ಎಂದು ಏಷ್ಯನ್ ಟೈಗರ್ಸ್ ಸಂದೇಶದಲ್ಲಿ ಕಿಡಿಕಾರಿದೆ.
ಸಂಬಂಧಿತ ಮಾಹಿತಿ ಹುಡುಕಿ