ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಶೋಯಿಬ್-ಸಾನಿಯಾ ಪಾಕ್ ಆರತಕ್ಷತೆಗೆ 1200 ಆತಿಥಿಗಳು..! (Shoaib Malik | Sania Mirza | India | Pakistan)
Bookmark and Share Feedback Print
 
PTI
ಇತ್ತೀಚೆಗಷ್ಟೇ ದಾಂಪತ್ಯಕ್ಕೆ ಕಾಲಿಟ್ಟಿರುವ ಪಾಕಿಸ್ತಾನ ಕ್ರಿಕೆಟಿಗ ಶೋಯಿಬ್ ಮಲಿಕ್ ಮತ್ತು ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾರವರ 'ವಾಲಿಮಾ' ಸತ್ಕಾರಕೂಟದಲ್ಲಿ 1200ರಷ್ಟು ಮಂದಿ ಆತಿಥಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಈ ನವ ಜೋಡಿಯ ವಿವಾಹ ಸಂಭ್ರಮದ ಪ್ರಯುಕ್ತ ನಡೆಯುವ ಆರತಕ್ಷತೆ ಔತಣಕೂಟವು ಲಾಹೋರ್‌ನಲ್ಲಿ ಏಪ್ರಿಲ್ 25ರಂದು ನಡೆಯಲಿದೆ.

ಆತಿಥಿಗಳಿಗಾಗಿ 1200ರಷ್ಟು ಕುರ್ಚಿಗಳನ್ನು ಮೀಸಲಿಡಲಾಗಿದೆ ಎಂದು ಶೋಯಿಬ್ ಕುಟುಂಬ ಮೂಲಗಳು ತಿಳಿಸಿವೆ. ಅದೇ ವೇಳೆ ಸಮಾರಂಭದಲ್ಲಿ ಆತಿಥಿಗಳಿಗೆ ಒಂದೇ ಬಗೆಯ ಖಾದ್ಯ ಮಾತ್ರ ಲಭ್ಯವಿದೆ ಎಂದು ಹೇಳಲಾಗಿದೆ.

ಶೋಯಿಬ್-ಸಾನಿಯಾ ಈ ವಾರಾಂತ್ಯದಲ್ಲಿ ಪಾಕಿಸ್ತಾನಕ್ಕೆ ತೆರಳಲಿದ್ದು, ಮೊದಲು ಪಾಕ್ ಕ್ರಿಕೆಟಿಗನ ತವರೂರಾದ ಸಾಯಿಲ್‌ಕೋಟ್‌ಗೆ ಭೇಟಿ ನೀಡಲಿದ್ದಾರೆ. ನಂತರ ಏಪ್ರಿಲ್ 25ರಂದು ನಡೆಯಲಿರುವ ಸತ್ಕಾರಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಮಾರಂಭಕ್ಕೆ ಗರಿಷ್ಠ ಭದ್ರತೆ ಒದಗಿಸುವಂತೆ ಸ್ಥಳೀಯ ಪೊಲೀಸರಲ್ಲಿ ಹೋಟೆಲ್ ಆಡಳಿತ ಮಂಡಳಿಯು ಮನವಿ ಮಾಡಿಕೊಂಡಿದೆ. ಅದೇ ವೇಳೆ ಕಾರ್ಯಕ್ರಮಕ್ಕೆ ಭಾರತದಿಂದ 15ರಿಂದ 20 ಆತಿಥಿಗಳು ಭಾಗವಹಿಸುವ ನಿರೀಕ್ಷೆಯಿದೆ.

ಸೋಮವಾರವಷ್ಟೇ ಶೋಯಿಬ್ ಮೇಲೆ ದಾಖಲಾಗಿದ್ದ ಎಲ್ಲಾ ಪ್ರಕರಣಗಳನ್ನು ವಜಾಗೊಳಿಸಿದ್ದ ಆಂಧ್ರಪ್ರದೇಶ ಹೈ ಕೋರ್ಟ್, ವಶಪಡಿಸಿಕೊಳ್ಳಲಾಗಿದ್ದ ಪಾಸ್‌ಪೋರ್ಟ್ ಹಿಂತಿರುಗಿಸುವಂತೆ ಪೊಲೀಸರಿಗೆ ಆದೇಶ ನೀಡಿತ್ತು.

ಇದೀಗ ಈ ನವ ಜೋಡಿ ಯಾವಾಗ ಬೇಕೆನಿಸಿದರೂ ಪಾಕ್‌ಗೆ ಭೇಟಿ ನೀಡಬಹುದು ಎಂದು ಆಂಧ್ರ ಹೈಕೋರ್ಟ್ ಹೇಳಿಕೆಯಲ್ಲಿ ತಿಳಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ