ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಮೆರಿಕ: ತೈಲ ಬಾವಿ ಸ್ಫೋಟ-11 ಮಂದಿ ಕಣ್ಮರೆ (oil rig explosion | US | Louisiana | Coast Guard)
Bookmark and Share Feedback Print
 
ಅಮೆರಿಕದ ಲೂಸಿಯಾನಾ ಕರಾವಳಿ ಪ್ರದೇಶದಲ್ಲಿನ ತೈಲಬಾವಿ ಸ್ಫೋಟ ಹಾಗೂ ಬೆಂಕಿಯಿಂದಾಗಿ 11ಮಂದಿ ನಾಪತ್ತೆಯಾಗಿದ್ದು, ಏಳು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿರುವುದಾಗಿ ಬುಧವಾರ ಕೋಸ್ಟ್ ಗಾರ್ಡ್ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯಲ್ಲಿ ಸುಮಾರು 126ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ ಎಂದು ಕೋಸ್ಟ್ ಗಾರ್ಡ್ ವರಿಷ್ಠ ಮೈಕ್ ಓಬೆರ್ರಿ ಹೇಳಿದ್ದಾರೆ.

ಮಂಗಳವಾರ ತೈಲಬಾವಿ ಸ್ಫೋಟಗೊಂಡಿದ್ದರ ಪರಿಣಾಮ ಬುಧವಾರವೂ ಕೂಡ ಬೆಂಕಿ ಹೊತ್ತಿ ಉರಿಯುತ್ತಿದ್ದು, ಕಾರ್ಯನಿರ್ವಹಿಸುತ್ತಿದ್ದವರಲ್ಲಿ ಹನ್ನೊಂದು ಮಂದಿ ಕಣ್ಮರೆಯಾಗಿದ್ದಾರೆ ಎಂದು ಹೇಳಿದ್ದಾರೆ. ತೈಲ ಬಾವಿಗೆ ಹೊತ್ತಿಕೊಂಡ ಬೆಂಕಿಯಿಂದ ಎಷ್ಟು ನಷ್ಟ ಉಂಟಾಗಿದೆ ಎಂದು ಅಂದಾಜಿಸಿಲ್ಲ ಎಂದರು.
ಸಂಬಂಧಿತ ಮಾಹಿತಿ ಹುಡುಕಿ