ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಆಸ್ಟ್ರೇಲಿಯಾ: ಬುರ್ಖಾ ನಿಷೇಧ ಕಾಯ್ದೆ ಜಾರಿಗೆ ಹಿನ್ನಡೆ (Australia | France | Europe | Burqa ban)
Bookmark and Share Feedback Print
 
ಆಸ್ಟ್ರೇಲಿಯಾದಲ್ಲಿ ಬುರ್ಖಾ ನಿಷೇಧ ಕಾನೂನಿಗೆ ಹಿನ್ನೆಡೆಯುಂಟಾಗಿದ್ದು, ನ್ಯೂ ಸೌತ್ ವೇಲ್ಸ್ ರಾಜ್ಯದಲ್ಲಿ ಮಸೂದೆ ಮಂಡನೆಗೆ ಎಡಪಂಥೀಯ ಸಂಸದರು ಹಾಗೂ ಸೆಂಟರಿಸ್ಟ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಬಲಪಂಥೀಯ ಕ್ರಿಶ್ಚಿಯನ್ ಪ್ರಜಾಪ್ರಭುತ್ವ ಪಕ್ಷದ ಫ್ರೆಡ್ ನಿಲ್ ಮಸೂದೆಯನ್ನು ಮಂಡಿಸಿದ್ದರಲ್ಲದೆ ಭದ್ರತಾ ಕಾರಣ ಹಾಗೂ ಪುರುಷರ ದಬ್ಬಾಳಿಕೆಯಿಂದ ಮಹಿಳೆಯರು ಮುಕ್ತಿ ಪಡೆಯುವ ಹಿನ್ನಲೆಯಲ್ಲಿ ಬುರ್ಖಾ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಲು ಅನುವು ಮಾಡಿಕೊಡಬೇಕೆಂದು ಕೋರಿದ್ದರು.

ಯೂರೋಪ್‌ನ ಫ್ರಾನ್ಸ್ ಮತ್ತು ಬೆಲ್ಜಿಯಂ ದೇಶಗಳು ಈಗಾಗಲೇ ಬುರ್ಖಾ ನಿಷೇಧ ಕಾನೂನು ಜಾರಿಗೊಳಿಸುವತ್ತ ದಿಟ್ಟ ಹೆಜ್ಜೆಯನ್ನಿಟ್ಟಿದೆ.

ದೇಶದ ಮೇಲ್ಮನೆಯಲ್ಲಿ 26ಸದಸ್ಯರಲ್ಲಿ ಮಸೂದೆ ಪರ ಮೂರು ಮತಗಳು ಚಲಾವಣೆಯಾಗಿತ್ತು. ಇದರಿಂದ ಬುರ್ಖಾ ನಿಷೇಧ ಕಾನೂನು ಜಾರಿಗೆ ಹಿನ್ನಡೆಯಾದಂತಾಗಿದೆ. ಇದು ದೇಶದಲ್ಲಿ ಭೀತಿ ಹಾಗೂ ದ್ವೇಷಕ್ಕೆ ಕಾರಣವಾಗಲಿದೆ ಎಂದು ಬುರ್ಖಾ ನಿಷೇಧ ಕಾನೂನನ್ನು ವಿರೋಧಿಸುವವರು ಅಭಿಪ್ರಾಯಪಟ್ಟಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಒಟ್ಟು 22 ಮಿಲಿಯನ್ ಜನಸಂಖ್ಯೆಯಲ್ಲಿ ಮುಸ್ಲಿಂ ಜನಾಂಗದವರು ಶೇಕಡಾ 1.7ರಷ್ಟು ಇದ್ದಾರೆ. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಕೋಮುಗಲಭೆಗಳು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ನಿಲ್ ತಿಳಿಸಿದ್ದರು.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಸಂಬಂಧಿತ ಮಾಹಿತಿ ಹುಡುಕಿ