ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮುಷರ್ರಫ್‌ಗೆ ಪಾಕ್ ಪ್ರಧಾನಿಯಾಗೋ ಆಸೆಯಂತೆ! (Musharraf | Pakistan | London | Washington | politics)
Bookmark and Share Feedback Print
 
ಪಾಕಿಸ್ತಾನದ ಮಾಜಿ ಮಿಲಿಟರಿ ಆಡಳಿತಗಾರ ಪರ್ವೆಜ್ ಮುಷರ್ರಫ್ ಅವರು ಅಜ್ಞಾತವಾಸದಿಂದ ಮತ್ತೆ ಪಾಕಿಸ್ತಾನಕ್ಕೆ ಮರಳುವುದಾಗಿ ಪುನರುಚ್ಚರಿಸಿರುವ ಅವರು, ಸಕ್ರಿಯ ರಾಜಕಾರಣಕ್ಕೆ ಧುಮುಕುವುದಾಗಿ ಹೇಳಿದ್ದಾರೆ. ಅಲ್ಲದೇ ಪಾಕಿಸ್ತಾನದ ಅಧ್ಯಕ್ಷಗಾದಿಯನ್ನು ಪುನ ಏರುವುದಿಲ್ಲ ಎಂಬುದನ್ನು ಅಲ್ಲಗಳೆಯಲಾರೆ ಎಂದು ಸೂಚ್ಯವಾಗಿ ಹೇಳಿದ್ದಾರೆ.

2008ರಲ್ಲಿ ಪಾಕಿಸ್ತಾನದಲ್ಲಿ ನಡೆದ ಸಾರ್ವತ್ರಿಕ ಚುನಾವಣೆ ನಂತರ ಪಕ್ಷ ಸೋಲನ್ನು ಅನುಭವಿಸಿದ ನಂತರ ಲಂಡನ್‌ಗೆ ಸ್ವಯಂ ಆಗಿ ಗಡಿಪಾರುಗೊಂಡಿದ್ದರು. ಆ ನಿಟ್ಟಿನಲ್ಲಿ ಈ ವಾರದಲ್ಲಿ ಮುಷರ್ರಫ್ ಅಮೆರಿಕಕ್ಕೆ ಭೇಟಿ ನೀಡಲಿದ್ದು, ಅಲ್ಲಿನ ಎಲೈಟ್ ಹೋಟೆಲ್‌ನಲ್ಲಿ ಪಾಕಿಸ್ತಾನದ ಪ್ರಮುಖ ಮುಖಂಡರ ಜೊತೆ ಮಾತುಕತೆ ನಡೆಸಲಿದ್ದಾರೆ.

ಸಿಎನ್ಎನ್ ನಡೆಸಿದ ಸಂದರ್ಶನದಲ್ಲಿ ಅಭಿಪ್ರಾಯ ಹಂಚಿಕೊಂಡ ಮುಷ್, ಮತ್ತೆ ಪಾಕಿಸ್ತಾನದಲ್ಲಿ ರಾಜಕೀಯಕ್ಕೆ ಮರಳುವುದಾಗಿ ಪುನರುಚ್ಚರಿಸಿದ್ದಾರೆ. ಆದರೆ ಯಾವಾಗ ಪಾಕಿಸ್ತಾನಕ್ಕೆ ವಾಪಸಾಗುತ್ತಾರೆ ಎಂಬುದನ್ನು ಮಾತ್ರ ಸ್ಪಷ್ಟಪಡಿಸಿಲ್ಲ.

ಆದರೆ ತಾನು ಶೀಘ್ರವೇ ಪಾಕಿಸ್ತಾನಕ್ಕೆ ಮರಳುವುದಾಗಿ ಹೇಳಿರುವ ಅವರು ರಾಜಕೀಯಕ್ಕೆ ಇಳಿಯುವುದಾಗಿ ಹೇಳಿದರು. ಅಲ್ಲದೇ ನಾನು ಅಧ್ಯಕ್ಷನಾಗುತ್ತೇನೋ ಅಥವಾ ಪ್ರಧಾನಿಯಾಗುತ್ತೇನೋ ಎಂಬುದನ್ನು ನೀವೇ ನಂತರ ನೋಡಿ ಎಂದು ಸೂಚ್ಯವಾಗಿ ಹೇಳಿದರು.

ಮುಷರ್ರಫ್ ವಿಶ್ವಾಸದ ನುಡಿಗಳ ನಡುವೆ 2007ರಲ್ಲಿ ನ್ಯಾಯಾಧೀಶರನ್ನು ಬಂಧನದಲ್ಲಿಟ್ಟ ಪ್ರಕರಣ ಇನ್ನೂ ಜೀವಂತವಾಗಿದ್ದು, ಅವರು ಪಾಕಿಸ್ತಾನಕ್ಕೆ ಮರಳಿದಲ್ಲಿ ಕ್ರಿಮಿನಲ್ ಆರೋಪದ ವಿಚಾರಣೆ ಎದುರಿಸಬೇಕಾಗುತ್ತದೆ. ಅದೇ ರೀತಿ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಹತ್ಯೆಯ ಹಿಂದೆಯೂ ಮುಷ್ ಅವರ ಕೈವಾಡ ಇದೆ ಎಂಬ ಆರೋಪವೂ ಇದೆ.
ಸಂಬಂಧಿತ ಮಾಹಿತಿ ಹುಡುಕಿ