ವಿಮಾನ ಪತನಕ್ಕೆ ಎಲ್ಲ ಬಲಿ

ಅಫ್ಘಾನ್ ಪರ್ವತ ಪ್ರದೇಶದಲ್ಲಿ ಕಳೆದ ಸೋಮವಾರ ಪತನಗೊಂಡಿದ್ದ ವಾಣಿಜ್ಯ ವಿಮಾನದಲ್ಲಿದ್ದ ಎಲ್ಲ 44 ಮಂದಿಯೂ ಮೃತಪಟ್ಟಿದ್ದಾರೆ ಎಂದು ಅಲ್ಲಿನ ನಾಗರಿಕ ವಿಮಾನಯಾನ ಸಚಿವಾಲಯ ಘೋಷಿಸಿದೆ. ಬದುಕುಳಿದವರ ಯಾವುದೇ ಕುರುಹುಗಳೂ ಕಾಣಿಸುತ್ತಿಲ್ಲ ಎಂದು ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದವರು ಮಾಹಿತಿ ನೀಡಿದ್ದರು.