ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮೌಂಟ್ ಎವೆರೆಸ್ಟ್ ಏರಿ ಇತಿಹಾಸ ಬರೆದ ದೆಹಲಿ ಹುಡುಗ! (mount everest | India | Delhi | Kathmandu)
Bookmark and Share Feedback Print
 
ವಿಶ್ವದ ಅತೀ ಎತ್ತರದ ಶಿಖರ ಮೌಂಟ್ ಎವೆರೆಸ್ಟ್ ಏರಿದ ನವದೆಹಲಿಯ ವಿದ್ಯಾರ್ಥಿ ಅರ್ಜುನ್ ಪಾಜ್‌ಪಾಯ್(16), ಈ ಸಾಧನೆ ಮಾಡಿದ ಅತೀ ಕಿರಿಯ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ.

ಕೆಚ್ಚೆದೆಯನ್ನು ಪ್ರದರ್ಶಿಸಿರುವ ರೈನ್ ಅಂತಾರಾಷ್ಟ್ರೀಯ ಶಾಲೆಯ ವಿದ್ಯಾರ್ಥಿಯಾಗಿರುವ ಅರ್ಜುನ್, ಮುಂದಿನ ತಿಂಗಳಷ್ಟೇ ತನ್ನ 17ನೇ ಜನ್ಮದಿನ ಆಚರಿಸಿಕೊಳ್ಳಲಿದ್ದಾರೆ. ಆ ಮೂಲಕ ಅರ್ಜುನ್, ಹಿಮಗಡ್ಡೆ ಆವೃತ್ತವಾಗಿರುವ ಪರ್ವತದ 8,848 ಮೀಟರ್ ಹತ್ತಿದ ಸಾಧನೆ ಮಾಡಿದ್ದಾರೆ.

ಶುಕ್ರವಾರ ರಾತ್ರಿ 10.45ರ ಹೊತ್ತಿಗೆ ಶಿಖರಕ್ಕೇರಲು ಆರಂಭಿಸಿದ್ದ ಅರ್ಜುನ್ ಶನಿವಾರ 6.18ರ ಹೊತ್ತಿಗೆ ಈ ಐತಿಹಾಸಿಕ ಸಾಧನೆ ಮಾಡಿದಂತಾಗಿದೆ.

ಮಗನ ಸಾಧನೆಯ ಬಗ್ಗೆ ತಾಯಿ ಪ್ರಿಯಾ ಅತೀವ ಸಂತೋಷ ವ್ಯಕ್ತಪಡಿಸಿದ್ದು, ಅನಿಸಿಕೆ ಹೇಳಿಕೊಳ್ಳಲು ಮಾತುಗಳೇ ಬರುತ್ತಿಲ್ಲ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಸಂಬಂಧಿತ ಮಾಹಿತಿ ಹುಡುಕಿ