ನೇಪಾಳದಲ್ಲಿ ಶುಕ್ರವಾರ ಮಧ್ಯರಾತ್ರಿಯಿಂದ ಕಾಣಿಸಿಕೊಂಡಿರುವ ಸಾಂವಿಧಾನಿಕ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಮಾವೋವಾದಿಗಳ ರಾಜೀನಾಮೆ ಬೇಡಿಕೆಗೂ ಮುನ್ನವೇ ತನ್ನ ಸ್ಥಾನಕ್ಕೆ 48 ಗಂಟೆಗಳೊಳಗೆ ರಾಜೀನಾಮೆ ನೀಡಲು ಸನ್ನದ್ಧನಾಗಿದ್ದೇನೆ ಎಂದು ಪ್ರಧಾನ ಮಂತ್ರಿ ಮಾಧವ್ ಕುಮಾರ್ ನೇಪಾಳ್ ಹೇಳುವ ಮೂಲಕ ಮಾವೋಗಳ ಒತ್ತಡಕ್ಕೆ ಮಣಿದಂತಾಗಿದೆ.
601 ಸದಸ್ಯ ಬಲಹೊಂದಿದ ಪಾರ್ಲಿಮೆಂಟ್‌ನಲ್ಲಿ ಶುಕ್ರವಾರ ತನ್ನ ನಿಲುವನ್ನು ಮಾಧವ್ ವ್ಯಕ್ತಪಡಿಸಲಿದ್ದಾರೆ ಎಂದು ಪ್ರಧಾನಿಯ ಕಾರ್ಯಾಲಯ ತಿಳಿಸಿದೆ.
ಮೇ 28ಕ್ಕೆ ಗಡುವು ನೀಡಲಾಗಿದ್ದ ಅವಧಿಯೊಳಗೆ ನೂತನ ಸಂವಿಧಾನ ರಚಿಸಲು ತನ್ನ ನೇತ್ವತ್ವದ ಒಂದು ವರ್ಷ ಪೂರೈಸಿರುವ ಸರಕಾರಕ್ಕೆ ಸಾಧ್ಯವಾಗದಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದ ನೇಪಾಳ್, ಇದಕ್ಕೆ ಪ್ರಮುಖ ವಿಪಕ್ಷವಾದ ಮಾವೋವಾದಿಗಳೇ ಕಾರಣರು ಎಂದು ಆರೋಪಿಸಿದರು.