ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತದಿಂದ ಉಗ್ರ ಡೇವಿಡ್ ಹೆಡ್ಲಿ ವಿಚಾರಣೆ: ಅಮೆರಿಕಾ (India | USA | David Coleman Headley | Mumbai attack)
Bookmark and Share Feedback Print
 
ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ತನ್ನ ಪಾತ್ರದ ಕುರಿತು ತಪ್ಪೊಪ್ಪಿಗೆ ನೀಡಿರುವ ಲಷ್ಕರ್ ಇ ತೋಯ್ಬಾ ಉಗ್ರಗಾಮಿ ಸಂಘಟನೆಯ ಸದಸ್ಯ, ಪಾಕಿಸ್ತಾನಿ ಸಂಜಾತ ಅಮೆರಿಕಾ ಪ್ರಜೆ ಡೇವಿಡ್ ಕೋಲ್ಮನ್ ಹೆಡ್ಲಿ ವಿಚಾರಣೆಗೆ ಭಾರತಕ್ಕೆ ಅವಕಾಶ ನೀಡಲಾಗಿದೆ ಎಂದು ಅಮೆರಿಕಾ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಮ್ಸ್ ಜಾನ್ಸ್ ಶನಿವಾರ ತಿಳಿಸಿದ್ದಾರೆ.

ಹೌದು, ಹೆಡ್ಲಿ ವಿಚಾರಣೆ ಅವಕಾಶ ನೀಡಲಾಗಿದೆ. ಉಭಯ ರಾಷ್ಟ್ರಗಳ ಪರಿಣತರ ಕೈಗಳಲ್ಲಿ ಈ ವಿಚಾರವಿದೆ ಎಂಬುದನ್ನು ಹೊರತುಪಡಿಸಿ ನನ್ನಲ್ಲಿ ಹೆಚ್ಚಿನ ಮಾಹಿತಿಗಳಿಲ್ಲ. ನಾವು ನಮ್ಮ ಬದ್ಧತೆಯನ್ನು ಪೂರ್ಣಗೊಳಿಸಿದ್ದೇವೆ ಎಂದು ಶ್ವೇತಭವನದ ತನ್ನ ಕಚೇರಿಯಲ್ಲಿ ಜಾನ್ಸ್ ತಿಳಿಸಿದ್ದಾರೆ.

ಅದೇ ಹೊತ್ತಿಗೆ ಭಾರತೀಯ ತನಿಖಾ ಅಧಿಕಾರಿಗಳಿಗೆ ಹೆಡ್ಲಿಯನ್ನು ಯಾವಾಗ ವಿಚಾರಣೆಗೆ ಒಪ್ಪಿಸಲಾಗುತ್ತದೆ, ಆ ಪ್ರಕ್ರಿಯೆ ಹೇಗಿರುತ್ತದೆ ಎಂಬ ಯಾವುದೇ ವಿಸ್ತೃತ ಮಾಹಿತಿಗಳನ್ನು ಜಾನ್ಸ್ ಬಹಿರಂಗಪಡಿಸಿಲ್ಲ. ಪ್ರಸಕ್ತ ಭಾರತೀಯ ತನಿಖಾ ಅಧಿಕಾರಿಗಳು ಚಿಕಾಗೋದಲ್ಲಿದ್ದಾರೆ.

ಭಯೋತ್ಪಾದಕ ಸಂಘಟನೆಗಳ ಕಾರ್ಯ ಚಟುವಟಿಕೆಗಳ ಕುರಿತು ಉಭಯ ದೇಶಗಳು ಜತೆಯಾಗಿ ಕೆಲಸ ಮಾಡುವುದು, ಗುಪ್ತಚರ ಮಾಹಿತಿಗಳನ್ನು ಹಂಚಿಕೊಳ್ಳುವುದು, ತ್ವರಿತ ಗತಿಯಲ್ಲಿ ಮಾಹಿತಿಗಳ ಪರಸ್ಪರ ರವಾನೆ ಮತ್ತು ನಾವು ಪರಸ್ಪರ ಹಿತಾಸಕ್ತಿಯನುಸಾರ ಯಾವುದೇ ವ್ಯಕ್ತಿಗಳನ್ನು ಸೆರೆ ಹಿಡಿದಾಗ ಅಗತ್ಯ ಬಿದ್ದರೆ ಅವರನ್ನು ವಿಚಾರಣೆ ನಡೆಸುವ ಮೂಲಕ ಇಂತಹ ಜಾಲಗಳನ್ನು ಭೇದಿಸಿ ಸಮಸ್ಯೆ ಪರಿಹರಿಸಲು ಯತ್ನಿಸುವ ಸಂಬಂಧ ಹೊಂದಿರುವುದಕ್ಕೆ ನಮಗೆ ಸಂತೋಷವಾಗುತ್ತಿದೆ ಎಂದು ಜಾನ್ಸ್ ವಿವರಣೆ ನೀಡಿದ್ದಾರೆ.

ಹೆಡ್ಲಿಯನ್ನು ಈ ಬಾರಿ ಮಾತ್ರ ವಿಚಾರಣೆಗೆ ಅವಕಾಶ ನೀಡಲಾಗಿದೆಯೇ ಅಥವಾ ಮುಂದೆ ಅಗತ್ಯ ಬಿದ್ದರೆ ಮತ್ತೆ ಅವಕಾಶ ನೀಡಲಾಗುತ್ತದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಜಾನ್ಸ್, ಈ ಕುರಿತು ಹೆಚ್ಚಿನ ಮಾಹಿತಿಗಳಿಲ್ಲ; ಆದರೆ ಪರಸ್ಪರ ಸಹಕಾರ ಮತ್ತು ಗೌರವಗಳು ಇದೇ ರೀತಿಯಲ್ಲಿ ಮುಂದುವರಿಯಲಿವೆ. ಈಗ ನಾವು ಮೊದಲ ಹೆಜ್ಜೆಯನ್ನು ಪೂರ್ಣಗೊಳಿಸುತ್ತೇವೆ. ಇದನ್ನು ಹೊರತುಪಡಿಸಿ ಮತ್ತೊಂದು ಮನವಿಯ ಕುರಿತು ನಾವು ಕಾದು ನೋಡುತ್ತೇವೆ ಎಂದರು.

ಪ್ರಸಕ್ತ ಅಮೆರಿಕಾದಲ್ಲಿರುವ ರಾಷ್ಟ್ರೀಯ ತನಿಖಾ ದಳದ (ಎನ್ಐಎ) ಅಧಿಕಾರಿಗಳು ಹೆಡ್ಲಿಯನ್ನು ಈಗಾಗಲೇ ವಿಚಾರಣೆ ನಡೆಸಿದ್ದಾರೆಯೇ ಅಥವಾ ವಿಚಾರಣೆ ಆರಂಭಿಸಿದ್ದಾರೆಯೇ ಎಂಬ ಯಾವುದೇ ಮಾಹಿತಿಗಳನ್ನು ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಸೇರಿದಂತೆ ಇತರ ಯಾವುದೇ ಅಧಿಕಾರಿಗಳು ಬಹಿರಂಗಪಡಿಸಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ