ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಮೆರಿಕಾ ಸ್ಪೆಲ್ಲಿಂಗ್ ರಾಣಿಯಾಗಿ ಭಾರತದ ವೀರಮಣಿ (Anamika Veeramani | 83rd Scripps National Spelling Bee-2010 | India | ABC)
Bookmark and Share Feedback Print
 
ಅಮೆರಿಕಾದ ಪ್ರತಿಷ್ಠಿತ ಸ್ಪೆಲ್ಲಿಂಗ್ ಸ್ಪರ್ಧೆಯನ್ನು ಈ ಬಾರಿಯೂ ಭಾರತೀಯ ಮೂಲದ ವಿದ್ಯಾರ್ಥಿನಿಯೊಬ್ಬಳು ಗೆದ್ದುಕೊಂಡಿದ್ದಾಳೆ. '83ನೇ ಸ್ಕ್ರಿಪ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬೀ-2010' ಪ್ರಶಸ್ತಿಯನ್ನು ಅನಾಮಿಕ ವೀರಮಣಿ ಎಂಬ 14ರ ಹರೆಯದ ಬಾಲಕಿ ಪಡೆದುಕೊಂಡಿದ್ದಾಳೆ.

'stromuhr' ಎಂಬ ವೈದ್ಯಕೀಯ ಪದದ ಸ್ಪೆಲ್ಲಿಂಗನ್ನು ಸ್ಪಷ್ಟವಾಗಿ ಹೇಳುವ ಮೂಲಕ ಅನಾಮಿಕ ವೀರಮಣಿ 2010ರ ಪ್ರಶಸ್ತಿಯನ್ನು ಗೆದ್ದಳು. ಶೇ.1ರಷ್ಟು ಮಂದಿಗೆ ಮಾತ್ರ ಈ ಶಬ್ದದ ಅರಿವಿರುತ್ತದೆ ಎಂದು ಹೇಳಲಾಗಿದೆ.

ಅಮೆರಿಕಾದ ಓಹಿಯೋದಲ್ಲಿನ ನಾರ್ತ್ ರಾಯಲ್ಟನ್‌ ನಿವಾಸಿಯಾಗಿರುವ ವೀರಮಣಿ ಕಳೆದ 12 ವರ್ಷಗಳಲ್ಲಿ ಈ ಪ್ರಶಸ್ತಿ ಗೆದ್ದ ಎಂಟನೆ ಇಂಡೋ-ಅಮೆರಿಕನ್. ಅಲ್ಲದೆ ಸತತ ಮೂರನೇ ಬಾರಿಯೂ ಇಂಡೋ-ಅಮೆರಿಕನ್ ಈ ಪ್ರಶಸ್ತಿ ಗೆದ್ದಿರುವುದು ವಿಶೇಷ. ಕಳೆದ ವರ್ಷ ಮೈಸೂರು ಮೂಲದ ಕಾವ್ಯ ಶಿವಶಂಕರ್ ಹಾಗೂ 2008ರಲ್ಲಿ ಸಮೀರ್ ಮಿಶ್ರಾ ಈ ಗೌರವಕ್ಕೆ ಪಾತ್ರರಾಗಿದ್ದರು.

'ದಿ ಬ್ಯಾಚ್ಲರೆಟ್' ಮತ್ತು 'ದಿ ಬ್ಯಾಚ್ಲರ್' ಖ್ಯಾತಿಯ ಕ್ರಿಸ್ ಹ್ಯಾರಿಸನ್ ಈ ನೇರ ಪ್ರಸಾರದ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಎಬಿಸಿ ವಾಹಿನಿಯಲ್ಲಿ ಕಾರ್ಯಕ್ರಮ ಪ್ರಸಾರವಾಗಿತ್ತು. ವಾಷಿಂಗ್ಟನ್‌ ಡಿ.ಸಿ.ಯ ಗ್ರಾಂಡ್ ಹಾಟ್ ಹೊಟೇಲಿನಲ್ಲಿ ಬುಧವಾರದಿಂದ ಶುಕ್ರವಾರದ ತನಕ ಈ ನಿಖರವಾಗಿ ಸ್ಪೆಲ್ಲಿಂಗ್ ಹೇಳುವ ಸ್ಪರ್ಧೆ ನಡೆದಿತ್ತು.

ಈ ಸ್ಪರ್ಧೆಯಲ್ಲಿ ಒಟ್ಟು 274 ಸ್ಪರ್ಧಿಗಳು ಪಾಲ್ಗೊಂಡಿದ್ದರು. ಇವರಲ್ಲಿ ಅತಿ ಕಿರಿಯ ಸ್ಪರ್ಧಿಯೆಂದರೆ ವನ್ಯ ಶಿವಶಂಕರ್. ಕಳೆದ ವರ್ಷ ಪ್ರಶಸ್ತಿ ಗೆದ್ದುಕೊಂಡ ಕಾವ್ಯ ಶಿವಶಂಕರ್ ಸಹೋದರಿಯಾಗಿರುವ ವನ್ಯ ಕೇವಲ ಎಂಟರ ಹರೆಯದವಳು.
ಸಂಬಂಧಿತ ಮಾಹಿತಿ ಹುಡುಕಿ