ಮಹತ್ವದ ಮಾತುಕತೆಗಳಿಗಾಗಿ ಅಮೆರಿಕಾ ಪ್ರವಾಸದಲ್ಲಿರುವ ಭಾರತದ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರಿಗೆ ಅಮೆರಿಕಾ ಸ್ಟೇಟ್ ಇಲಾಖೆಯು ಆಯೋಜಿಸಿದ್ದ ಔತಣಕೂಟದಲ್ಲಿ ದಾಸವಾಳದಿಂದ ತಯಾರಿಸಿದ ಶಾಂಪೇನ್ ನೀಡಲಾಗಿತ್ತು ಎಂದು ವರದಿಯೊಂದು ಹೇಳಿದೆ.
ವ್ಯೂಹಾತ್ಮಕ ಮಾತುಕತೆಗಾಗಿ ಅಮೆರಿಕಾ ಪ್ರವಾಸದಲ್ಲಿರುವ ಕೃಷ್ಣ ಮತ್ತು ಅವರ ನಿಯೋಗಕ್ಕೆ ಪಾಶ್ಚಾತ್ಯ ಮತ್ತು ಪೌರಾತ್ಯ ಪ್ರಕಾರಗಳ ತಿನಿಸುಗಳನ್ನು ಸಿದ್ಧಪಡಿಸಲಾಗಿತ್ತು.
ಫಾರಿನ್‌ಪಾಲಿಸಿ.ಕಾಮ್ ಎಂಬ ವೆಬ್‌ಸೈಟ್ ಮಾಡಿರುವ ವರದಿಯ ಪ್ರಕಾರ ಈ ಔತಣಕೂಟದಲ್ಲಿ ರುಚಿಕರವಾದ ಪಾರ್ಮೆಸನ್ ಫ್ಲಾನ್, ಕ್ಯಾರೆಟ್ ಮತ್ತು ಆಪ್ರಿಕಾಟ್ ಹಣ್ಣುಗಳಿಂದ ತಯಾರಿಸಿದ ರುಚಿಕರ ಖಾದ್ಯಗಳಿದ್ದವು. ವೆನಿಲ್ಲಾ-ಆಪ್ರಿಕಾಟ್ ಚಟ್ನಿ, ಅರ್ಜೆಂಟೀನಾ ಚಿಕನ್, ಪಿಟೈಟ್ ಲ್ಯಾಂಬ್ (ಸಣ್ಣ ಕುರಿ) ಬರ್ಗರ್, ಸಮೋಸಾ ಮತ್ತು ಎಳ್ಳು-ಸಾಲ್ಮನ್ ಮೀನು ಖಾದ್ಯಗಳನ್ನು ತಯಾರಿಸಲಾಗಿತ್ತು.
ದಾಸವಾಳ ಹೂವುಗಳಿಂದ ತಯಾರಿಸಿದ ಶಾಂಪೇನ್ ಈ ಎಲ್ಲಾ ಖಾದ್ಯಗಳಿಗೆ ಹೆಚ್ಚಿನ ಮೆರುಗು ನೀಡಿದ್ದವು.