ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತದೊಳಕ್ಕೆ ನುಸುಳುವ ಉಗ್ರರನ್ನು ತಡೆಯಿರಿ: ಪಾಕ್‌ಗೆ ಅಮೆರಿಕ (Infiltration | 26/11 | Kashmir issue | Pakistan | US | Manmohan Singh)
Bookmark and Share Feedback Print
 
ಕಾಶ್ಮೀರ ವಿವಾದದ ಬಗ್ಗೆ ಧ್ವನಿ ಎತ್ತುವ ಮೊದಲು ಗಡಿಭಾಗದಿಂದ ಭಾರತದೊಳಕ್ಕೆ ಅಕ್ರಮವಾಗಿ ನುಸುಳುತ್ತಿರುವ ಉಗ್ರರನ್ನು ಪಾಕಿಸ್ತಾನ ತಡೆಯಲಿ ಎಂದು ತಾಕೀತು ಮಾಡಿರುವ ಅಮೆರಿಕ, ಅದೇ ರೀತಿ ಮುಂಬೈ ದಾಳಿಯ ಶಂಕಿತ ಆರೋಪಿಗಳ ವಿಚಾರಣೆ ಶೀಘ್ರ ನಡೆಸಲಿ ಎಂದು ತಿರುಗೇಟು ನೀಡಿದೆ.

ಕಾಶ್ಮೀರ ವಿವಾದ ವಿಷಯದಲ್ಲಿ ಅಮೆರಿಕದ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ, ಭಾರತ ಮತ್ತು ಪಾಕ್ ನಡುವಿನ ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಅಮೆರಿಕ ಮೂಗು ತೂರಿಸುವುದಿಲ್ಲ ಎಂದು ಅಮೆರಿಕದ ದಕ್ಷಿಣ ಏಷ್ಯಾ ಸಹಾಯಕ ಕಾರ್ಯದರ್ಶಿ ರೋಬರ್ಟ್ ಬ್ಲೇಕ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಈ ವಿಷಯದಲ್ಲಿ ಭಾರತ ಮತ್ತು ಪಾಕಿಸ್ತಾನ ಪ್ರಮುಖ ಆದ್ಯತೆ ನೀಡಬೇಕು, ಕಾಶ್ಮೀರ ವಿವಾದ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಉಭಯ ದೇಶಗಳೂ ದ್ವಿಪಕ್ಷೀಯ ಮಾತುಕತೆಯನ್ನು ವ್ಯವಸ್ಥಿತ ರೀತಿಯಲ್ಲಿ ನಡೆಸಬೇಕು ಎಂದ ಅವರು, ಪ್ರಧಾನಿ ಮನಮೋಹನ್ ಸಿಂಗ್ ಅವರು ಪಾಕಿಸ್ತಾನದ ಜೊತೆ ಶಾಂತಿಯುತ ಸಂಬಂಧ ಬೆಳೆಸಲು ಹೆಚ್ಚಿನ ಇಚ್ಛೆ ಹೊಂದಿದ್ದಾರೆಂಬುದಾಗಿಯೂ ಹೇಳಿದರು.

ಆದರೆ ಅವೆಲ್ಲಕ್ಕಿಂತ ಮೊದಲು ಗಡಿಭಾಗದಿಂದ ಭಾರತದೊಳಕ್ಕೆ ನುಸುಳುತ್ತಿರುವವರನ್ನು ಪಾಕಿಸ್ತಾನ ತಡೆಯಬೇಕು, ಅದೇ ರೀತಿ ಮುಂಬೈ ದಾಳಿಯ ಶಂಕಿತ ಆರೋಪಿಗಳ ವಿಚಾರಣೆ ಕೂಡ ಶೀಘ್ರವಾಗಿ ನಡೆಯಬೇಕು ಎಂದು ಬ್ಲೇಕ್ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ