ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಶೀಘ್ರದಲ್ಲೇ ಪಾಕಿಸ್ತಾನಕ್ಕೆ ವಾಪಸ್ಸಾಗಲಿರುವ ಮುಷರಫ್ (Pervez Musharraf | Pakistan | Rashid Qureshi | All Pakistan Muslim League)
Bookmark and Share Feedback Print
 
ಕಳೆದ ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ವಿದೇಶಗಳಲ್ಲೇ ನೆಲೆಸಿರುವ ಫರ್ವೇಜ್ ಮುಷರಫ್ ಶೀಘ್ರದಲ್ಲೇ ಪಾಕಿಸ್ತಾನಕ್ಕೆ ಮರಳಲಿದ್ದಾರೆ ಎಂದು ಮಾಜಿ ಮಿಲಿಟರಿ ಸರ್ವಾಧಿಕಾರಿಯ ಆಪ್ತ ಸಹಾಯಕರಲ್ಲೊಬ್ಬರು ತಿಳಿಸಿದ್ದಾರೆ.

ಮುಷರಫ್ ಅಧ್ಯಕ್ಷರಾಗಿದ್ದಾಗ ಅವರ ವಕ್ತಾರರಾಗಿ ಕಾರ್ಯ ನಿರ್ವಹಿಸಿದ್ದ ನಿವೃತ್ತ ಮೇಜರ್ ಜನರಲ್ ರಷೀದ್ ಖುರೇಷಿ ಕರಾಚಿ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಇದನ್ನು ಪ್ರಕಟಿಸಿದ್ದಾರೆ. ತವರಿನ ವಾಪಸಾತಿಯನ್ನು ಸ್ವತಃ ಮುಷರಫ್ ಪ್ರಕಟಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಅದೇ ಹೊತ್ತಿಗೆ ಮುಷರಫ್ ಅವರ ನೂತನ ರಾಜಕೀಯ ಪಕ್ಷ ಆಲ್ ಪಾಕಿಸ್ತಾನ್ ಮುಸ್ಲಿಂ ಲೀಗ್ (ಎಪಿಎಂಎಲ್) ಕುರಿತ ಮಾಹಿತಿಯನ್ನೂ ನೀಡಿದ್ದು, ಸ್ವತಃ ಮಾಜಿ ಅಧ್ಯಕ್ಷರೇ ಪಕ್ಷವನ್ನು ಮುನ್ನಡೆಸಲಿದ್ದಾರೆ ಎಂದರು.

ಈಗಾಗಲೇ ಪಕ್ಷ ಸಂಘಟನೆಯ ಕಾರ್ಯ ಆರಂಭವಾಗಿದೆ. ಎಪಿಎಂಎಲ್‌ಗಾಗಿ ಕರಾಚಿಯಲ್ಲಿ ಸಾರ್ವಜನಿಕ ಸಮಾರಂಭಗಳನ್ನು ಆರಂಭಿಸಲಾಗಿದೆ. ಕಾರ್ಮಿಕ ಸಂಘಟನೆಗಳು ಮತ್ತು ಅಲ್ಪಸಂಖ್ಯಾತರನ್ನು ಪ್ರತಿನಿಧಿಸುವ ಸಂಘಟನೆಗಳ ಜತೆ ಹಲವು ಸುತ್ತಿನ ಮಾತುಕತೆಗಳು ನಡೆದಿವೆ ಎಂದು ರಷೀದ್ ವಿವರಣೆ ನೀಡಿದ್ದಾರೆ.

ಮುಷರಫ್ ಅವರ ದೃಷ್ಟಿಕೋನದ ಪ್ರಕಾರ ಪಾಕಿಸ್ತಾನದಲ್ಲಿ ಅಭಿವೃದ್ಧಿ ಸಾಧ್ಯವಿದೆ ಎಂದಿರುವ ಖುರೇಷಿ, ತಾನು ಎಪಿಎಂಎಲ್ ಸಂದೇಶವನ್ನು ಹೊತ್ತು ಪಂಜಾಬ್, ಬಲೂಚಿಸ್ತಾನ ಮತ್ತು ಖೈಬರ್-ಪಕ್ತುಕ್ವಾ ಪ್ರಾಂತ್ಯಕ್ಕೆ ಭೇಟಿ ನೀಡಲಿದ್ದೇನೆ ಎಂದು ತಿಳಿಸಿದ್ದಾರೆ.

2008ರಲ್ಲಿ ಮಹಾಭಿಯೋಗವನ್ನು ತಪ್ಪಿಸಿಕೊಳ್ಳಲು ರಾಜೀನಾಮೆ ಸಲ್ಲಿಸಿದ್ದ ಮುಷರಫ್ ವಿರುದ್ಧ ಪಾಕಿಸ್ತಾನದಾದ್ಯಂತ ಹಲವು ಪ್ರಕರಣಗಳು ದಾಖಲಾದ ನಂತರ ದೇಶ ತೊರೆದು ಲಂಡನ್‌ನಲ್ಲಿ ನೆಲೆಸಲು ಆರಂಭಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ