ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್:ಗುಂಡಿನ ದಾಳಿಗೆ ಹಿಂದೂ ಉದ್ಯಮಿ ಬಲಿ, ಪುತ್ರನ ಕಿಡ್ನಾಪ್ (Kidnapped | Hindu businessman | Pak | paramilitary)
Bookmark and Share Feedback Print
 
ಮಿಲಿಟರಿ ವಸ್ತ್ರಧಾರಿ ಅಪರಿಚಿತ ವ್ಯಕ್ತಿಗಳ ಗುಂಪೊಂದು ಹಿಂದೂ ಉದ್ಯಮಿಯೊಬ್ಬರನ್ನು ಗುಂಡಿಕ್ಕಿ ಕೊಂದು, ಅವರ ಪುತ್ರನನ್ನು ಅಪಹರಿಸಿರುವ ಘಟನೆ ಪಾಕಿಸ್ತಾನದ ವಾಯುವ್ಯ ಭಾಗದ ಕ್ವೆಟ್ಟಾ ನಗರದಲ್ಲಿ ನಡೆದಿರುವುದಾಗಿ ಮಾಧ್ಯಮದ ಬುಧವಾರದ ವರದಿಯೊಂದು ತಿಳಿಸಿದೆ.

ಮಂಗಳವಾರ ರಾತ್ರಿ ಕ್ವೆಟ್ಟಾ ಪ್ರದೇಶದ ಸೆಟಲೈಟ್ ಟೌನ್‌ನಲ್ಲಿ ಕಾರಿನಲ್ಲಿ ಹಿಂದು ಉದ್ಯಮಿ ರಮೇಶ್ ಕುಮಾರ್ ಮತ್ತು ಪುತ್ರ ರಾಜೇಶ್ ಕುಮಾರ್ ತೆರಳುತ್ತಿದ್ದ ಸಂದರ್ಭದಲ್ಲಿ ನಾಲ್ಕು ಮಂದಿ ಶಸ್ತ್ರ ಸಜ್ಜಿತ, ಮಿಲಿಟರಿ ಉಡುಗೆ ಧರಿಸಿದ ಅಪರಿಚಿತ ವ್ಯಕ್ತಿಗಳು ಅಡ್ಡಗಟ್ಟಿದ್ದರು. ಅವರು ಇಬ್ಬರನ್ನೂ ಅಪಹರಿಸಲು ಯತ್ನಿಸಿದ್ದರು.

ಏತನ್ಮಧ್ಯೆ ಅಪ್ಪ ಮತ್ತು ಮಗ ಇಬ್ಬರೂ ತುಂಬಾ ವಿರೋಧ ವ್ಯಕ್ತಪಡಿಸಿದ್ದರು. ಆ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಹಾರಿಸಿದ ಗುಂಡಿನಿಂದಾಗಿ ರಮೇಶ್ ಕುಮಾರ್ ಸಾವನ್ನಪ್ಪಿದ್ದರು. ಮಗ ರಾಜೇಶ್ ಕುಮಾರನನ್ನು ಅಪರಿಚಿತ ವ್ಯಕ್ತಿಗಳು ಅಪಹರಿಸಿಕೊಂಡು ಹೋಗಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ನಡೆದ ವಿಷಯ ಕೇಳಿದ ನಂತರ ರಮೇಶ್ ಕುಮಾರ್ ಅವರ ಮೃತದೇಹವನ್ನು ಪೊಲೀಸರು ಆಸ್ಪತ್ರೆಗೆ ತರುವ ಸಂದರ್ಭದಲ್ಲಿ ಆಸ್ಪತ್ರೆಯ ಮುಂಭಾಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಲ್ಪಸಂಖ್ಯಾತ ಹಿಂದೂಗಳು ನೆರೆದಿದ್ದರು. ಈ ಸಂದರ್ಭದಲ್ಲಿ ಸರ್ಕಾರ ಮತ್ತು ಪೊಲೀಸರ ವಿರುದ್ಧ ಘೋಷಣೆ ಕೂಗಿ, ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದರು.
ಸಂಬಂಧಿತ ಮಾಹಿತಿ ಹುಡುಕಿ