ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಇಸ್ಲಾಂಗೆ ಮತಾಂತರಗೊಳ್ಳುತ್ತಿರುವ ಕೈದಿಗಳ ಸಂಖ್ಯೆ ಹೆಚ್ಚಳ (converting to Islam | UK jails | Muslim gangs | Dame Anne Owers)
Bookmark and Share Feedback Print
 
ಮುಸ್ಲಿಂ ಧರ್ಮೀಯರಿಗೆ ವಿಶೇಷ ಆಹಾರ ನೀಡುತ್ತಿರುವುದು ಮತ್ತು ಶುಕ್ರವಾರದ ಪ್ರಾರ್ಥನೆಗಳಿಗಾಗಿ ಜೈಲಿನಿಂದ ಹೊರಗೆ ಹೋಗಲು ಅವಕಾಶವಿರುವುದನ್ನೇ ದುರ್ಬಳಕೆ ಮಾಡಿಕೊಳ್ಳುತ್ತಿರುವ ಬ್ರಿಟನ್ ಕೈದಿಗಳು ಭಾರೀ ಪ್ರಮಾಣದಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗುತ್ತಿದ್ದಾರೆ ಎಂಬ ಆಘಾತಕಾರಿ ಅಂಶ ಬಯಲಿಗೆ ಬಂದಿದೆ.

ಬ್ರಿಟನ್‌ನ ಕೈದಿಗಳ ಮುಖ್ಯಾಧಿಕಾರಿ ಡೇಮ್ ಅನ್ನೆ ಓವರ್ಸ್ ಸಿದ್ಧಪಡಿಸಿರುವ 'ಮುಸ್ಲಿಂ ಕೈದಿಗಳ ಅನುಭವಗಳು' ಎಂಬ ವರದಿಯಲ್ಲಿ ಇದನ್ನು ಪ್ರಸ್ತಾಪಿಸಲಾಗಿದೆ ಎಂದು 'ಟೈಮ್ಸ್ ಆನ್‌ಲೈನ್' ತಿಳಿಸಿದೆ.

ಈ ವರದಿಯ ಪ್ರಕಾರ 1994ರಲ್ಲಿ 2,513ರಲ್ಲಿದ್ದ ಮುಸ್ಲಿಂ ಕೈದಿಗಳ ಸಂಖ್ಯೆ, 14 ವರ್ಷಗಳಲ್ಲಿ ಅಂದರೆ 2008ಕ್ಕಾಗುವಾಗ ಶೇ.6ರ ಹೆಚ್ಚಳ ಕಂಡಿದ್ದು 9,795ಕ್ಕೆ ಹೆಚ್ಚಳ ಕಂಡಿದೆ.

ಮತಾಂತರ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿರುವುದರ ಕುರಿತು ತೀವ್ರ ಆತಂಕ ವ್ಯಕ್ತಪಡಿಸಿರುವ ಓವರ್ಸ್, ಕೈದಿಗಳ ಅನುಭವಗಳು ಪರಾಧೀನತೆ ಮತ್ತು ಅವಿಶ್ವಾಸವನ್ನು ಸೃಷ್ಟಿಸಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನು ತಡೆಯಲು ಜೈಲು ಅಧಿಕಾರಿಗಳು ಸದಾ ಕಾರ್ಯಪ್ರವೃತ್ತರಾಗಿರಬೇಕು. ಇಲ್ಲದೇ ಇದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಅಪರಾಧಿ ಚಟುವಟಿಕೆಗಳು ನಡೆಯುವ ಸಾಧ್ಯತೆಗಳಿವೆ ಎಂದೂ ಅವರು ಸಲಹೆ ಮಾಡಿದ್ದಾರೆ.

ವರದಿಯ ಪ್ರಕಾರ ಹಲವು ಕುಖ್ಯಾತ ಭಯೋತ್ಪಾದಕರನ್ನು ಇತ್ತೀಚಿನ ದಿನಗಳಲ್ಲಿ ಬಂಧಿಸಲಾಗಿದ್ದು, ಜೈಲುಗಳಲ್ಲಿ ಇಡಲಾಗಿದೆ. ಮುಸ್ಲಿಮರ ಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡರೆ ಸರಿಸುಮಾರು ಬಂಧಿತ 100 ಮಂದಿಯಲ್ಲಿ ಒಬ್ಬ ಅಥವಾ ಅದಕ್ಕಿಂತಲೂ ಕಡಿಮೆ ವ್ಯಕ್ತಿಗಳು ಭಯೋತ್ಪಾದನೆ ಕಾರಣದಿಂದ ತಪ್ಪಿತಸ್ಥರಾಗಿ ಜೈಲು ಸೇರಿರುತ್ತಾರೆ.

ಮುಸ್ಲಿಮರಿಗೆ ಜೈಲುಗಳಲ್ಲಿ ಹಲಾಲ್ ಪಟ್ಟಿಯಲ್ಲಿರುವ ಆಹಾರವನ್ನು ನೀಡಲಾಗುತ್ತದೆ. ಇದು ಇತರ ಧರ್ಮೀಯರಿಗೆ ನೀಡುವ ಆಹಾರಕ್ಕಿಂತ ಉತ್ತಮ ಗುಣಮಟ್ಟದ್ದಾಗಿರುತ್ತದೆ. ಜತೆಗೆ ಶುಕ್ರವಾರದಂದು ಮುಸ್ಲಿಮರಿಗೆ ಕೆಲಸವನ್ನೂ ಜೈಲಿನಲ್ಲಿ ನೀಡಲಾಗುವುದಿಲ್ಲ. ಇದು ಮುಸ್ಲಿಂ ಧರ್ಮಕ್ಕೆ ಇತರ ಧರ್ಮದ ಕೈದಿಗಳು ಮತಾಂತರಗೊಳ್ಳಲು ಪ್ರಮುಖ ಕಾರಣವಾಗಿದೆ ಎಂದು ವರದಿ ಹೇಳಿದೆ.

ಇಲ್ಲಿರುವ ಮತ್ತೊಂದು ಕಾರಣ ಜೈಲುಗಳಲ್ಲಿ ಮುಸ್ಲಿಂ ಧರ್ಮೀಯರ ಶಕ್ತಿಶಾಲಿ ಗ್ಯಾಂಗುಗಳಿರುವುದು. ಇತರ ಕೈದಿಗಳಿಂದ ಮತ್ತು ಜೈಲು ಅಧಿಕಾರಿಗಳಿಂದ ರಕ್ಷಣೆ ಪಡೆಯಲು ಇದು ಸಹಕಾರಿಯಾಗುತ್ತಿರುವುದರಿಂದ ಮತಾಂತರ ಪ್ರಮಾಣ ಹೆಚ್ಚಲು ಕಾರಣವಾಗಿದೆ.

85 ಜೈಲುಗಳ ಪರಿಶೀಲನೆ ಮತ್ತು ಎಂಟು ಜೈಲುಗಳ 164 ಮುಸ್ಲಿಂ ಕೈದಿಗಳ ಜತೆಗಿನ ಸಂದರ್ಶನದ ನಂತರ ಓವರ್ಸ್ ಈ ವರದಿಯನ್ನು ತಯಾರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ