ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮೌಂಟ್ ಎವರೆಸ್ಟ್ ಪರ್ವತಾರೋಹಣ; ಅಪ್ರಾಪ್ತರಿಗೆ ನಿಷೇಧ (China | Jordan Romero | Mt Everest | CTMA)
Bookmark and Share Feedback Print
 
ಅಮೆರಿಕಾದ ಪೋರ ಜೋರ್ಡಾನ್ ರೊಮೋರೋ ಮೌಂಟ್ ಎವರೆಸ್ಟ್ ಏರಿ ಐತಿಹಾಸಿಕ ದಾಖಲೆ ನಿರ್ಮಿಸಿದ ತಿಂಗಳೊಳಗೆ ಅದನ್ನು ಇನ್ಯಾರು ಕೂಡ ಮೀರದಂತಹ ನೂತನ ನೀತಿಯನ್ನು ಚೀನಾ ಜಾರಿಗೆ ತಂದಿದ್ದು, ಅಪ್ರಾಪ್ತರು ಪರ್ವತಾರೋಹಣ ಮಾಡುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ.

13 ವರ್ಷ 10 ತಿಂಗಳು 10 ದಿನಗಳಾಗಿದ್ದ ಹೊತ್ತಿನಲ್ಲಿ ಜೋರ್ಡಾನ್ ಮೌಂಟ್ ಎವರೆಸ್ಟ್ ಏರುವ ಮೂಲಕ ಅತಿ ಕಡಿಮೆ ವಯಸ್ಸಿನವರು ಈ ಪರ್ವತವನ್ನೇರಿದ್ದ ದಾಖಲೆಯನ್ನು ನಿರ್ಮಿಸಿದ್ದ. ಆದರೆ ಆ ದಾಖಲೆಯನ್ನು ಇನ್ನು ಯಾರಿಂದಲೂ ಮುರಿಯಲು ಸಾಧ್ಯವಿಲ್ಲ. ಯಾಕೆಂದರೆ ಚೀನಾವು ಹೊಸ ನೀತಿಗಳನ್ನು ಇಲ್ಲಿ ಜಾರಿಗೆ ತಂದಿದೆ.

ನೇಪಾಳದೊಂದಿಗೆ ಹಂಚಿ ಹೋಗಿರುವ ಮೌಂಟ್ ಎವರೆಸ್ಟ್ ಚೀನಾದ ಟಿಬೆಟ್ ಪ್ರಾಂತ್ಯದಲ್ಲಿ ಬರುತ್ತದೆ. ಇಲ್ಲಿನ ಪರ್ವತಾರೋಹಣ ಕಾರ್ಯಗಳನ್ನು ನಿಯಂತ್ರಿಸುವ ಚೀನಾ ಟಿಬೆಟ್ ಪರ್ವತಾರೋಹಿಗಳ ಸಂಘಟನೆ (ಸಿಟಿಎಂಎ) ಈ ನಿಯಮಗಳನ್ನು ಗುರುವಾರ ಜಾರಿಗೆ ತಂದಿದೆ.

ಸಿಟಿಎಂಎ ಪ್ರಕಟಿಸಿರುವ ನೂತನ ನಿಯಮಗಳ ಪ್ರಕಾರ 8848 ಮೀಟರ್ ಎತ್ತರದ ಪರ್ವತವನ್ನು ಹತ್ತಲು ಅನುಮತಿ ಪಡೆಯುವುದು ಅಗತ್ಯವಾಗಿದ್ದು, 18 ವರ್ಷಗಳನ್ನು ಮೀರಿದವರಿಗೆ ಮಾತ್ರ ಅವಕಾಶವಿದೆ. ಅದೇ ಹೊತ್ತಿಗೆ 60ರ ಹರೆಯದವರೆಗೆ ಮಾತ್ರ ವಯೋಮಿತಿಯನ್ನು ಕೂಡ ನಿಗದಿ ಮಾಡಲಾಗಿದೆ.

ಸಿಟಿಎಂಎ ನೀತಿಗಳು ಇಷ್ಟಕ್ಕೆ ಮುಗಿಯುತ್ತಿಲ್ಲ. 18ರಿಂದ 60ರ ನಡುವಿನ ಪರ್ವತಾರೋಹಿಗಳು ತಮ್ಮ ದೈಹಿಕ ದೃಢತೆಯ ಪ್ರಮಾಣ ಪತ್ರವನ್ನು ಹಾಜರುಪಡಿಸಿದರೆ ಮಾತ್ರ ಅವಕಾಶ ನೀಡುವುದಾಗಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ